alex Certify
ಕನ್ನಡ ದುನಿಯಾ       Mobile App
       

Kannada Duniya

ಸೋಮವಾರ ಸೂರ್ಯಗ್ರಹಣದ ಜೊತೆ ಅಮವಾಸ್ಯೆ

2017_8image_11_56_153999770sunsolareclipse-ll

ಸೋಮವಾರ ಅಂದ್ರೆ ಆಗಸ್ಟ್ 21ರಂದು ಸಂಪೂರ್ಣ ಸೂರ್ಯ ಗ್ರಹಣ ಬಂದಿದೆ. ಸೋಮವಾರ ರಾತ್ರಿ ಭಾರತೀಯ ಸಮಯಾನುಸಾರ 9 ಗಂಟೆ 16 ನಿಮಿಷದಿಂದ 2 ಗಂಟೆ 34 ನಿಮಿಷದವರೆಗೆ ಸೂರ್ಯಗ್ರಹಣವಿರಲಿದೆ. ಅಮೆರಿಕಾ, ಆಫ್ರಿಕಾ ಹಾಗೂ ಯುರೋಪ್ ನಲ್ಲಿ ಮಾತ್ರ ಗ್ರಹಣ ಕಾಣಲಿದೆ. ಭಾರತದ ಯಾವುದೇ ಭಾಗದಲ್ಲಿ ಗ್ರಹಣ ಗೋಚರಿಸುವುದಿಲ್ಲ.

ಈ ಸೂರ್ಯಗ್ರಹಣ ಸಿಂಹ ರಾಶಿಯ ಮಾಘ ನಕ್ಷತ್ರದಲ್ಲಿ ಸಂಭವಿಸಲಿದೆ. ಆದ್ರೆ ಭಾರತದಲ್ಲಿ ಗೋಚರಿಸದ ಕಾರಣ ಭಾರತೀಯರು ಗ್ರಹಣ ಆಚರಿಸಬೇಕಾಗಿಲ್ಲ. ಆರಾಮವಾಗಿ ನಿದ್ರೆ ಮಾಡಬಹುದಾಗಿದೆ.

ಸೂರ್ಯ ಗ್ರಹಣದ ಜೊತೆಗೆ ಸೋಮವಾರ ಅಮವಾಸ್ಯೆ ಬಂದಿದ್ದು ವಿಶೇಷ. ಅಮವಾಸ್ಯೆ ನಂತ್ರ ರಾಶಿಗಳಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ. 2017ರಲ್ಲಿ ಇದೇ ಮೊದಲ ಬಾರಿ ಸೋಮವಾರ ಅಮವಾಸ್ಯೆ ಬಂದಿದೆ. ನಂತ್ರ ಇದೇ ವರ್ಷ ಡಿಸೆಂಬರ್ 18ರಂದು ಸೋಮವಾರ ಅಮವಾಸ್ಯೆ ಬರಲಿದೆ.

ಶಾಸ್ತ್ರಗಳ ಪ್ರಕಾರ ಸೋಮವಾರ ವೃತ ಹಾಗೂ ವಿಶೇಷ ಪೂಜೆ ಮಾಡುವುದರಿಂದ ವಿವಾಹಿತ ಮಹಿಳೆಯರಿಗೆ ಸುಖ-ಸಮೃದ್ಧಿ ಪ್ರಾಪ್ತಿಯಾಗುತ್ತದೆ. ವಿವಾಹಿತ ಮಹಿಳೆಯರು ಗಂಡನ ಆಯಸ್ಸು ವೃದ್ಧಿಗೆ ಪ್ರಾರ್ಥಿಸಿ ವೃತ ಮಾಡುವ ಜೊತೆಗೆ ವಿಧಿವಿಧಾನದ ಮೂಲಕ ತುಳಸಿಗೆ ಪೂಜೆ ಮಾಡಬೇಕು.

ಅಮವಾಸ್ಯೆಯಂದು ಅರಳಿ ಮರಕ್ಕೆ ಪೂಜೆ ಮಾಡುವುದೂ ಶ್ರೇಷ್ಠ. ಅರಳಿ ಮರಕ್ಕೆ ಹಾಲು, ನೀರು, ಗಂಧ, ಹೂವನ್ನು ಹಾಕಿ ಪೂಜೆ ಮಾಡಬೇಕು. 108 ಬಾರಿ ನೂಲನ್ನು ಸುತ್ತಿ ಪೂಜೆ ಮಾಡುವ ವಿಧಾನವೂ ಇದೆ. ಈ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಆರೋಗ್ಯ, ಆಯಸ್ಸು ವೃದ್ಧಿಯಾಗುತ್ತದೆ ಎಂಬ ನಂಬಿಕೆಯೂ ಇದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...