alex Certify
ಕನ್ನಡ ದುನಿಯಾ       Mobile App
       

Kannada Duniya

ಈ ರಾಶಿಗಳಿಗೆ ಶುಭ ಫಲ ನೀಡಲಿದೆ ಪ್ರೇಮಿಗಳ ದಿನ

ಫೆಬ್ರವರಿ ಪ್ರೀತಿಯ ತಿಂಗಳು ಎಂದೇ ಪ್ರಸಿದ್ಧಿ ಪಡೆದಿದೆ. ಫೆಬ್ರವರಿ 14ನ್ನು ಪ್ರೀತಿಯ ದಿನವೆಂದು ಆಚರಿಸಲಾಗುತ್ತದೆ. ಪ್ರೀತಿಯನ್ನು ಪ್ರೇಮಿಗಳ ಮುಂದಿಡಲು ಈ ದಿನ ಶುಭಕರ. ಪ್ರೇಮ ನಿವೇದನೆ ಮಾಡುವವರು ಈ ದಿನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈಗಾಗಲೇ ಪ್ರೀತಿಗೆ ಬಿದ್ದವರು ಪ್ರೇಮ ಗಟ್ಟಿಯಾಗಿರಲೆಂದು ಬಯಸ್ತಾರೆ.

ಈ ಬಾರಿ ಯಾವ ರಾಶಿಯವರಿಗೆ ಪ್ರೇಮಿಗಳ ಶುಭಕರವಾಗಿರಲಿದೆ, ಯಾವ ರಾಶಿಯವರಿಗೆ ಪ್ರೇಮಿಗಳ ದಿನ ಅಶುಭವಾಗಿರಲಿದೆ ಎಂಬುದನ್ನು ನಾವು ಹೇಳ್ತೇವೆ ಕೇಳಿ.

ಮೇಷ ರಾಶಿಯವರಿಗೆ ಪ್ರೇಮಿಗಳ ದಿನ ಸಫಲತೆ ಪ್ರಾಪ್ತಿಯಾಗಲಿದೆ. ಅನೇಕ ತಿಂಗಳಿಂದ ಪ್ರೀತಿಯ ಹುಡುಕಾಟದಲ್ಲಿದ್ದ ಈ ರಾಶಿಯ ಜನರಿಗೆ ಶ್ರೇಷ್ಠ ಹಾಗೂ ಅಮೂಲ್ಯ ಪ್ರೀತಿ ಪ್ರೇಮಿಗಳ ದಿನದಂದು ಸಿಗಲಿದೆ.

ವೃಶ್ಚಿಕ ರಾಶಿಯವರಿಗೆ ಈ ವರ್ಷದ ಪ್ರೇಮಿಗಳ ದಿನ ಶುಭವಾಗಿರಲಿದೆ. ಈ ದಿನ ಪ್ರೇಮ ನಿವೇದನ ಮಾಡಿದ್ರೆ ನಿಮ್ಮ ಪ್ರೇಮ ನಿಮಗೆ ಸಿಕ್ಕಂತೆ. ಬೇರೆಯವರ ಸಂಸ್ಕಾರ, ಗೌರವಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳುವುದನ್ನು ಮಾತ್ರ ಮರೆಯಬೇಡಿ.

ವೃಷಭ ರಾಶಿಯವರಿಗೆ ಕೂಡ ಪ್ರೇಮಿಗಳ ದಿನ ಒಳ್ಳೆಯದು. ಈ ದಿನ ಪ್ರೇಮಿಗಳಿಗೆ ಸಫಲತೆ ಪ್ರಾಪ್ತಿಯಾಗಲಿದೆ. ಪ್ರೇಮಿಗಳು ಈ ದಿನವನ್ನು ವಿಶೇಷವಾಗಿ ಆಚರಿಸಲು ಸಿದ್ಧರಾಗಿ.

ಕುಂಭ ರಾಶಿಯನ್ನು ಪ್ರೇಮ ಹಾಗೂ ಸೌಂದರ್ಯದ ಸಂಕೇತವೆಂದು ಪರಿಗಣಿಸಲಾಗಿದೆ. ಈ ತಿಂಗಳು ಸೂರ್ಯ ತನ್ನ ರಾಶಿ ಬದಲಾವಣೆ ಮಾಡುವುದ್ರಿಂದ ಫೆಬ್ರವರಿ 14ರಂದು ಈ ರಾಶಿಯವರಿಗೆ ನಿಜವಾದ ಪ್ರೀತಿ ಸಿಗಲಿದೆ.

ತುಲಾ ರಾಶಿಯವರು ಕಳೆದುಕೊಂಡ ಪ್ರೀತಿಯನ್ನು ಪ್ರೇಮಿಗಳ ದಿನದಂದು ವಾಪಸ್ ಪಡೆಯಲಿದ್ದಾರೆ. ಫೆಬ್ರವರಿ 14 ನಿಮಗೆ ವಿಶೇಷ ದಿನವಾಗಲಿದೆ. ಜೀವನದ ದೊಡ್ಡ ಉಡುಗೊರೆಯೊಂದು ನಿಮಗೆ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...