alex Certify
ಕನ್ನಡ ದುನಿಯಾ       Mobile App
       

Kannada Duniya

ಈ ರೀತಿ ಲಕ್ಷ್ಮಿ ಪೂಜೆ ಮಾಡಿದಲ್ಲಿ ಧನವೃದ್ಧಿ ಖಚಿತ

ಪಂಚತಂತ್ರದ ಪ್ರಕಾರ ಯಾರ ಬಳಿ ಹಣವಿರುತ್ತದೆಯೋ ಅವರು ಸದಾ ಯುವಕರಾಗಿರುತ್ತಾರೆ. ಯಾರು ಧನಹೀನರಾಗಿರುತ್ತಾರೋ ಅವರಿಗೆ ಬೇಗ ವಯಸ್ಸಾಗುತ್ತದೆ. ವಾಸ್ತವವಾಗಿ ಭೌತಿಕ ಜೀವನದಲ್ಲಿ ಹಣ ಬಹುಮುಖ್ಯ. ನೀತಿ ಶಾಸ್ತ್ರವು ನ್ಯಾಯಾಯುತವಾಗಿ ಹಣಗಳಿಕೆ ಮಾಡಬೇಕೆಂದು ಸಲಹೆ ನೀಡುತ್ತದೆ. ನ್ಯಾಯಾಯುತವಾಗಿ ಹಣ ಗಳಿಕೆ ಮಾಡಿದಲ್ಲಿ ನಮ್ಮ ಕಲ್ಯಾಣವಾಗುತ್ತದೆ.

ಧರ್ಮ ಹಾಗೂ ಕೆಲಸ ಅರ್ಥವನ್ನು ಆಧರಿಸಿದೆ. ಧನದ ಪ್ರಾಪ್ತಿಗಾಗಿ ಧರ್ಮದ ಮೂಲಕ ಕೆಲಸ ಮಾಡಿದ್ರೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಧರ್ಮ, ಕಾಮ, ಮೋಕ್ಷ ಎಲ್ಲದಕ್ಕೂ ಹಣ ಬೇಕು. ಹಣ ಸಂಪಾದನೆಗೆ ಲಕ್ಷ್ಮಿಯ ಕೃಪೆಯಿರಬೇಕು. ಶ್ರೀಯಂತ್ರ ಸಾಕ್ಷಾತ್ ಲಕ್ಷ್ಮಿಯ ಪ್ರತೀಕವಾಗಿದೆ. ಇದು ಭೌತಿಕ ಹಾಗೂ ಆರ್ಥಿಕ ಉನ್ನತಿಗೆ ಸಹಕರಿಸುತ್ತದೆ.

ಇದು 272 ಪ್ರಕಾರದಲ್ಲಿದೆ. ಯಾರ ಮನೆಯಲ್ಲಿ ಸ್ಫಟಿಕದ ಶ್ರೀಯಂತ್ರ ಸ್ಥಾಪಿಸಲ್ಪಟ್ಟಿರುತ್ತದೆಯೋ ಆ ಮನೆಯ ವಾಸ್ತುದೋಷ ನಿವಾರಣೆಯಾಗುತ್ತದೆ. ಪರಿವಾರದಲ್ಲಿ ಸಮೃದ್ಧಿ ಕಾಣಬಹುದಾಗಿದೆ. ಶುಭ ಮುಹೂರ್ತದಲ್ಲಿ ಶ್ರೀಯಂತ್ರವನ್ನು ಸ್ಥಾಪನೆ ಮಾಡಿ ಪೂಜೆ ಮಾಡಬೇಕು. ವಿಧಿ-ವಿಧಾನದ ಪೂಜೆ ಬಳಿಕ ಕೆಂಪು ಬಟ್ಟೆಯಲ್ಲಿ ಇದನ್ನು ಕಟ್ಟಿ ಕಪಾಟಿನಲ್ಲಿಡಬೇಕು. ಇದ್ರಿಂದ ಧನವೃದ್ಧಿಯಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...