alex Certify
ಕನ್ನಡ ದುನಿಯಾ       Mobile App
       

Kannada Duniya

ಏ.4ರಂದು ಈ ಕೆಲಸ ಮಾಡಿದ್ರೆ ತೆರೆಯುತ್ತೆ ಭಾಗ್ಯದ ಬಾಗಿಲು

2017_4image_11_23_233749997kanjakpujan-ll

ನವರಾತ್ರಿಯ ಎಂಟನೇ ದಿನ ಕನ್ಯಾ ಪೂಜೆ ಮಾಡಲಾಗುತ್ತದೆ. ಮಂಗಳವಾರ, ಏಪ್ರಿಲ್ ನಾಲ್ಕರಂದು ಚೈತ್ರ ನವರಾತ್ರಿಯ ಅಷ್ಠಮಿ. ಈ ದಿನ ದೇವಿ ಮಹಾಗೌರಿಗೆ ಸಮರ್ಪಿತ. ಮಾತಾ ದುರ್ಗೆಯ ಕೃಪೆಗೆ ಪಾತ್ರರಾಗಲು ಭಕ್ತರು ಒಂಭತ್ತು ಕನ್ಯೆಯರನ್ನು ಪೂಜೆ ಮಾಡ್ತಾರೆ.

ಎಲ್ಲಾ ಸತ್ಕಾರ್ಯದ ಫಲ ಪಡೆಯಲು ಸಾಮಾನ್ಯವಾಗಿ ಕನ್ಯೆ ಪೂಜೆ ಮಾಡಲಾಗುತ್ತದೆ. ಆದ್ರೆ ನವರಾತ್ರಿಯಂದು ಈ ಪೂಜೆಗೆ ವಿಶೇಷ ಸ್ಥಾನವಿದೆ. ನವರಾತ್ರಿಯಂದು ದುರ್ಗೆಯನ್ನು ಪ್ರಸನ್ನಗೊಳಿಸಲು ಉಪವಾಸ, ಆರಾಧನೆ ಮಾಡ್ತೇವೆ. ಇದರಿಂದ ಭಯ, ಶತ್ರುಗಳ ನಾಶವಾಗುತ್ತದೆ. ಕನ್ಯಾ ಪೂಜೆ ವೇಳೆ ಪ್ರಸನ್ನಳಾಗುವಷ್ಟು ದೇವಿ ದುರ್ಗೆ ಹೋಮ, ಜಪದಿಂದ ಪ್ರಸನ್ನಳಾಗುವುದಿಲ್ಲ.

ಅಷ್ಠಮಿ ತಿಥಿಯ ದಿನವೊಂದೇ ಅಲ್ಲ ರಾತ್ರಿ ಕೂಡ ವಿಶೇಷತೆಯಿಂದ ಕೂಡಿದೆ. ರಾತ್ರಿ 12 ಗಂಟೆಗೆ ಮುಖ್ಯ ದ್ವಾರದ ಎಡ ಹಾಗೂ ಬಲ ಭಾಗಕ್ಕೆ ಶುದ್ಧ ತುಪ್ಪದ ದೀಪವನ್ನು ಹಚ್ಚಿ. ಇದ್ರಿಂದ ಮನೆಗೆ ಬರುವ ಎಲ್ಲ ದುಃಖಗಳ ನಾಶವಾಗುತ್ತದೆ.

ತಾಯಿ ದುರ್ಗೆಯ ದೇವಸ್ಥಾನಕ್ಕೆ ಹೋಗಿ ಆಕೆಗೆ ಕಮಲದ ಹೂವನ್ನು ಅರ್ಪಣೆ ಮಾಡಿ

ಮನೆಯಲ್ಲಿ ದುರ್ಗಾಸಪ್ತಶತಿಯನ್ನು ಓದಿ.

ಅವಿವಾಹಿತ ಬ್ರಾಹ್ಮಣ ಕನ್ಯೆಗೆ ಬಟ್ಟೆ ಅಥವಾ ಯಾವುದೇ ಉಡುಗೊರೆ ನೀಡಿ.

11 ವಿವಾಹಿತ ಮಹಿಳೆಯರಿಗೆ ಸೌಭಾಗ್ಯದ ವಸ್ತುಗಳನ್ನು ನೀಡಿ. ಅವರ ಆಶೀರ್ವಾದ ಪಡೆಯಿರಿ.

ಭಗವತಿ ಮಂದಿರಕ್ಕೆ ಕೆಂಪು ಬಣ್ಣದ ಸ್ಕಾರ್ಫ್ ನೀಡಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...