alex Certify
ಕನ್ನಡ ದುನಿಯಾ       Mobile App
       

Kannada Duniya

ಸಗೋತ್ರದ ಮದುವೆ ಬಗ್ಗೆ ಮನುಸ್ಮೃತಿ ಏನು ಹೇಳುತ್ತೆ?

cover

ಭಾರತೀಯ ಸಮಾಜದಲ್ಲಿ ವಿವಾಹಕ್ಕೆ ಮಹತ್ವದ ಸ್ಥಾನವಿದೆ. ಹಿಂದು ವಿವಾಹದಲ್ಲಿ ಅನೇಕ ಸಂಪ್ರದಾಯಗಳನ್ನು ಪಾಲಿಸಲಾಗುತ್ತದೆ. ಇದ್ರಲ್ಲಿ ಗೋತ್ರ ಕೂಡ ಒಂದು. ಜಾತಕ ನೋಡಿ, ಗೋತ್ರ, ಗ್ರಹಗಳು ಹೊಂದಾಣಿಕೆಯಾದಲ್ಲಿ ಮಾತ್ರ ಮದುವೆ ಮಾಡಲಾಗುತ್ತದೆ.

ಸಾಮಾನ್ಯವಾಗಿ ಒಂದೇ ಗೋತ್ರದವರು ದಾಂಪತ್ಯ ಜೀವನಕ್ಕೆ ಕಾಲಿಡುವುದಿಲ್ಲ. ಬೇರೆ ಬೇರೆ ಸಮುದಾಯದಲ್ಲಿ ಬೇರೆ ಬೇರೆ ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಕೆಲವರು ಮೂರು ಗೋತ್ರದವರನ್ನು ವಿವಾಹವಾಗುವುದಿಲ್ಲ. ಮತ್ತೆ ಕೆಲವರು ನಾಲ್ಕು ಗೋತ್ರದವರನ್ನು ಮದುವೆಯಾಗುವುದಿಲ್ಲ. ವರನ ಗೋತ್ರ, ತಾಯಿಯ ಗೋತ್ರ, ಅಜ್ಜಿಯ ಗೋತ್ರವನ್ನು ಪರಿಗಣಿಸಲಾಗುತ್ತದೆ.

ಮನುಸ್ಮೃತಿ ಪ್ರಕಾರ, ಒಂದೇ ಗೋತ್ರದವರು ಮದುವೆಯಾಗಬಾರದು. ಹಾಗೆ ಮದುವೆಯಾದಲ್ಲಿ ನಕಾರಾತ್ಮಕ ಪ್ರಭಾವ ಹೆಚ್ಚಾಗುತ್ತದೆ. ಅನೇಕ ರೋಗಗಳು ಕಾಡುತ್ತವೆ. ಒಂದೇ ಗೋತ್ರದಲ್ಲಿ ಮದುವೆಯಾಗುವುದರಿಂದ ಸಂತಾನ ಸಮಸ್ಯೆ ಕಾಡುತ್ತದೆ.

ಹಿಂದು ಸಂಸ್ಕೃತಿ ಪ್ರಕಾರ ಒಂದೇ ಗೋತ್ರದ ಹುಡುಗ-ಹುಡುಗಿ ಸಹೋದರ-ಸಹೋದರಿಯರಾಗ್ತಾರೆ. ಇಬ್ಬರ ಪೂರ್ವಜರೂ ಒಂದೇ ಆಗುವುದರಿಂದ ಅವರಿಬ್ಬರು ಒಂದೇ ಕುಟುಂಬದವರಾಗ್ತಾರೆ ಎಂಬ ನಂಬಿಕೆಯೂ ಇದೆ.

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...