alex Certify
ಕನ್ನಡ ದುನಿಯಾ       Mobile App
       

Kannada Duniya

ಚಂದ್ರ ಗ್ರಹಣದ ವೇಳೆ ಅವಶ್ಯಕವಾಗಿ ಮಾಡಿ ಈ ಕೆಲಸ

ಜುಲೈ 27, ಗುರು ಪೂರ್ಣಿಮೆಯಂದು ಶತಮಾನದ ದೀರ್ಘ ಚಂದ್ರಗ್ರಹಣ ಸಂಭವಿಸುತ್ತಿದೆ. ಗ್ರಹಣ ರಾತ್ರಿ 11 ಗಂಟೆ 54 ನಿಮಿಷಕ್ಕೆ ಶುರುವಾಗಲಿದೆ. ಜುಲೈ 28 ರ ಬೆಳಗಿನ ಜಾವ 3 ಗಂಟೆ 49 ನಿಮಿಷಕ್ಕೆ ಮುಕ್ತಾಯವಾಗಲಿದೆ. ಗ್ರಹಣ ಮೂರು ಗಂಟೆ 55 ನಿಮಿಷದವರೆಗೆ ಇರಲಿದೆ. ಗ್ರಹಣದ ವೇಳೆ ಕೆಲವೊಂದು ಕೆಲಸಗಳನ್ನು ಅಗತ್ಯವಾಗಿ ಮಾಡಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಗ್ರಹಣದ ವೇಳೆ ಮಂತ್ರ ಪಠಿಸುವುದು ಒಳ್ಳೆಯದೆಂದು ನಂಬಲಾಗಿದೆ. ಈ ವೇಳೆ ಗಾಯತ್ರಿ ಮಂತ್ರವನ್ನು ಪಠಿಸಬಹುದು. ಹೀಗೆ ಮಾಡಿದಲ್ಲಿ ಗ್ರಹಣದ ನಂತ್ರ ಯಾವುದೇ ದೋಷ ಅಂಟಿಕೊಳ್ಳುವುದಿಲ್ಲ. ಹನುಮಾನ್ ಚಾಲೀಸ್ ಅಥವಾ ಹನುಮಂತನ ಮಂತ್ರವನ್ನು ಕೂಡ ಜಪಿಸಬಹುದಾಗಿದೆ.

ಗ್ರಹಣದ ವೇಳೆ ಧ್ಯಾನ ಅಥವಾ ಯೋಗ ಮಾಡಬಹುದು. ಗ್ರಹಣದ ವೇಳೆ ಮಾಡಿದ ಧ್ಯಾನದಿಂದ ವಿಶೇಷ ಫಲ ಪ್ರಾಪ್ತಿಯಾಗಲಿದೆ.

ಗ್ರಹಣ ಕಾಲದ ವೇಳೆ ಮನೆಯಿಂದ ಹೊರ ಹೋಗುವುದು ನಿಷಿದ್ಧ. ಆದ್ರೆ ಗ್ರಹಣದ ವೇಳೆ ದಾನ ಮಾಡಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಗುರು, ಬ್ರಾಹ್ಮಣ ಸೇರಿದಂತೆ ಅಗತ್ಯವಿರುವವರಿಗೆ ದಾನ ಮಾಡಬೇಕು. ಗ್ರಹಣ ಕಾಲದಲ್ಲಿ ಅಥವಾ ಗ್ರಹಣದ ನಂತ್ರ ಮಾಡುವ ದಾನ ಬಹಳ ಒಳ್ಳೆಯದು.

ಮಕ್ಕಳಿಗೆ ಹೊಸದನ್ನು ಕಲಿಸಲು ಇದು ಒಳ್ಳೆ ಸಮಯವಂತೆ. ಓದು, ಬರಹ, ಸಂಗೀತ, ಹಾಡು ಸೇರಿದಂತೆ ಯಾವುದೇ ಹೊಸ ವಿಷಯದ ಕಲಿಕೆ ಶುರು ಮಾಡಲು ಗ್ರಹಣ ಕಾಲ ಒಳ್ಳೆಯದು.

ಗ್ರಹಣದ ವೇಳೆ ಅನವಶ್ಯಕ ಮಾತುಗಳಿಗಿಂತ ಮೌನವೃತ ಹೆಚ್ಚು ಲಾಭಕರವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...