alex Certify
ಕನ್ನಡ ದುನಿಯಾ       Mobile App
       

Kannada Duniya

ಈ ರಾಶಿಯ ಪುರುಷರು ಅತ್ಯುತ್ತಮ ಪತಿಯಾಗಿರ್ತಾರೆ

ರಾಶಿ ಮೂಲಕವೇ ವ್ಯಕ್ತಿಯ ಗುಣ ಸ್ವಭಾವವನ್ನು ಹೇಳಬಹುದಾಗಿದೆ. ಪ್ರತಿಯೊಬ್ಬ ಮಹಿಳೆ ಒಳ್ಳೆ ಜೀವನ ಸಂಗಾತಿಯನ್ನು ಬಯಸ್ತಾಳೆ. ಪತಿಯಾದವನು ಪ್ರತಿಯೊಂದು ಸಂದರ್ಭದಲ್ಲಿಯೂ ತನ್ನ ಜೊತೆಗಿರಬೇಕೆಂದು ಬಯಸ್ತಾಳೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಜಾತಕ ನೋಡಿ ಯಾವ ವ್ಯಕ್ತಿ ಯಾವ ಮಹಿಳೆಗೆ ಹೊಂದುತ್ತಾನೆಂದು ಹೇಳಲಾಗುತ್ತದೆ. ರಾಶಿ ನೋಡಿಯೂ ಯಾವ ವ್ಯಕ್ತಿ ಗಂಡನ ಜವಾಬ್ದಾರಿ ಸೂಕ್ತವಾಗಿ ನಿರ್ವಹಿಸಬಲ್ಲ ಎಂಬುದನ್ನು ಹೇಳಬಹುದಾಗಿದೆ.

ಕರ್ಕ ರಾಶಿಯ ಪುರುಷರು ಒಳ್ಳೆ ಪತಿಯಾಗಿರುತ್ತಾರೆ. ಈ ರಾಶಿಯ ಗಂಡಸರು ತಮ್ಮ ಸಂಗಾತಿಯ ಪ್ರತಿಯೊಂದು ಆಸೆಯನ್ನು ಈಡೇರಿಸುತ್ತಾರೆ. ಸಂಗಾತಿಯನ್ನು ಹೆಚ್ಚಾಗಿ ಪ್ರೀತಿಸುವ ಈ ರಾಶಿ ಗಂಡಸರು ಆಕರ್ಷಕ ಹಾಗೂ ಸುಂದರವಾಗಿ ಜೀವನ ನಡೆಸ್ತಾರೆ.

ತುಲಾ ರಾಶಿಯವರು ತಮ್ಮ ಸಂಗತಿಯನ್ನು ಅತಿಯಾಗಿ ಪ್ರೀತಿಸುತ್ತಾರೆ. ಸಂಗಾತಿ ಭಾವನೆಗೆ ಬೆಲೆ ನೀಡುತ್ತಾರೆ. ಸಂಗಾತಿಯನ್ನು ಅವರು ಗೌರವಿಸುತ್ತಾರೆ.ಸಂಗಾತಿಗೆ ಆಗಾಗ ಸರ್ಪ್ರೈಸ್ ನೀಡುವ ಈ ರಾಶಿಯವರು ಯಾವಾಗಲೂ ಸಂತೋಷವಾಗಿರಲು ಬಯಸುತ್ತಾರೆ.

ವೃಷಭ ರಾಶಿಯ ಗಂಡಸರು ಸೆನ್ಸ್ ಆಫ್ ಹ್ಯೂಮರ್ ತುಂಬಾ ಚೆನ್ನಾಗಿರುತ್ತದೆ. ಕಠಿಣ ಪರಿಸ್ಥಿತಿಯನ್ನೂ ಆರಾಮವಾಗಿ ನಿಭಾಯಿಸುತ್ತಾರೆ. ಸಂಗಾತಿ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅವರು ಸಂಗಾತಿಯ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...