alex Certify
ಕನ್ನಡ ದುನಿಯಾ       Mobile App
       

Kannada Duniya

ಅರ್ಧಕ್ಕೆ ನಿಂತ ಕೆಲಸ ಪೂರ್ಣಗೊಳಿಸಲು ಹೀಗೆ ಮಾಡಿ

ಅಡುಗೆ ಮನೆಯಲ್ಲಿರುವ ಒಂದು ಮಸಾಲೆ ಪದಾರ್ಥ ಲವಂಗ. ಈ ಲವಂಗ, ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಆರೋಗ್ಯ ವೃದ್ಧಿ ಮಾಡುತ್ತದೆ. ಇಷ್ಟೇ ಅಲ್ಲ ತಂತ್ರ-ಮಂತ್ರ ವಿದ್ಯೆಗೂ ಇದನ್ನು ಬಳಸಲಾಗುತ್ತದೆ. ಒಂದು ಲವಂಗಕ್ಕೆ ಅರ್ಧಕ್ಕೆ ನಿಂತ ಕೆಲಸವನ್ನು ಪೂರ್ಣಗೊಳಿಸುವ ಶಕ್ತಿಯಿದೆ.

ಬೆಳಿಗ್ಗೆ ದೇವರ ಪೂಜೆ ಮಾಡುವ ವೇಳೆ ದೀಪಕ್ಕೆ ಎರಡು ಲವಂಗ ಹಾಕಿ. ಇದು ಅರ್ಧಕ್ಕೆ ನಿಂತ ಕೆಲಸವನ್ನು ಪೂರ್ಣಗೊಳಿಸಿ ನಿಮ್ಮ ನೋವು, ಸಂಕಷ್ಟವನ್ನು ಕಡಿಮೆ ಮಾಡುತ್ತದೆ.

ಧನ ಪ್ರಾಪ್ತಿಗೆ ಲವಂಗ ಹೇಳಿ ಮಾಡಿಸಿದ ಉಪಾಯವೆಂದು ನಂಬಲಾಗಿದೆ. ಎರಡು ಲವಂಗವನ್ನು ಸಾಸಿವೆ ಎಣ್ಣೆಯಲ್ಲಿ ಹಾಕಿ ಹನುಮಂತನ ಪೂಜೆ ಮಾಡಿ. ಇದು ಆರ್ಥಿಕ ವೃದ್ಧಿ ಜೊತೆಗೆ ಮನಸ್ಸಿನ ಎಲ್ಲ ಭಯವನ್ನೂ ದೂರ ಮಾಡುತ್ತದೆ.

ಪ್ರತಿ ಕೆಲಸದಲ್ಲಿ ಯಶಸ್ಸು ಬಯಸುವವರು ಈ ವಿಧಾನವನ್ನು ಅನುಸರಿಸಬಹುದು. ಮೊದಲು ಒಂದು ನಿಂಬೆ ಹಣ್ಣು ಹಾಗೂ ನಾಲ್ಕು ಲವಂಗವನ್ನು ತೆಗೆದುಕೊಳ್ಳಿ. ಹನುಮಂತನ ಮೂರ್ತಿ ಮುಂದೆ ಕುಳಿತು ನಿಂಬೆ ಹಣ್ಣಿನ ಮೇಲೆ ಲವಂಗವನ್ನು ಚುಚ್ಚಿಡಿ.

ಮುಖ್ಯವಾಗಿ ಈ ಎಲ್ಲ ಕೆಲಸಕ್ಕೆ ಲವಂಗವನ್ನು ಶುದ್ಧ ಮಾಡಿಕೊಳ್ಳಬೇಕಾಗುತ್ತದೆ. ಲವಂಗವನ್ನು ಶುದ್ಧ ಮಾಡಲು ಬೆಳಿಗ್ಗೆ ಉತ್ತಮ ಸಮಯ. ಇದಕ್ಕೆ ಹತ್ತಿ, ಲವಂಗ, ಸಿಂಧೂರ, ತುಪ್ಪ, ನೀರು ಬೇಕಾಗುತ್ತದೆ. ಪದ್ಧತಿ ಪ್ರಕಾರ ಲವಂಗವನ್ನು ಶುದ್ಧಗೊಳಿಸಬೇಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...