
ಹೊಸ ವರ್ಷ ಶುರುವಾಗಿದೆ. ಪ್ರತಿ ವರ್ಷದಂತೆಯೇ ಈ ವರ್ಷ ಕೂಡ ಕೆಲವೊಂದು ಸಂಕಲ್ಪಗಳನ್ನು ನೀವು ಮಾಡಿರುತ್ತೀರಾ. ಆ ಸಂಕಲ್ಪದಲ್ಲಿ ಇನ್ನೂ ಕೆಲವನ್ನು ಸೇರಿಸಿಕೊಳ್ಳಿ. ಇದ್ರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿ ಈ ವರ್ಷ ಮಾಡಿದ ಕೆಲಸವೆಲ್ಲ ಕೈಗೂಡುತ್ತದೆ.
ಸ್ವಚ್ಛವಾಗಿರುವ ಸ್ಥಳದಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ. ಹಾಗಾಗಿ ವರ್ಷಾರಂಭದಿಂದಲೇ ಮನೆ ಹಾಗೂ ಕೆಲಸ ಮಾಡುವ ಸ್ಥಳವನ್ನು ಸ್ವಚ್ಛವಾಗಿಡಲು ಶುರುಮಾಡಿ. ದಿನ ಕಳೆದಂತೆ ಸ್ವಚ್ಛತೆ ನಿಮ್ಮ ಜೀವನದ ಒಂದು ಭಾಗವಾಗಿ ಬದಲಾಗುತ್ತದೆ. ಜೊತೆಗೆ ಲಕ್ಷ್ಮಿ ಮನೆ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.
ಮನೆ ಸುತ್ತಮುತ್ತಲ ಜಾಗದಲ್ಲಿ ಗಿಡ-ಮರ ಬೆಳೆಸಿ. ಇದ್ರಿಂದ ಪರಿಸರ ಸ್ವಚ್ಛವಾಗುತ್ತದೆ. ಜೊತೆಗೆ ಮನೆ ಸುತ್ತಮುತ್ತ ನಕಾರಾತ್ಮಕ ಶಕ್ತಿ ಸುಳಿಯುವುದಿಲ್ಲ. ನಿಮ್ಮ ಜಾತಕಕ್ಕೆ ಅನುಕೂಲವಾಗುವಂತಹ ಗಿಡವನ್ನು ನೆಡಿ.
ಈ ವರ್ಷ ನಿಮ್ಮ ಜಾತಕದಲ್ಲಿ ಯಾವ ಗ್ರಹ ಉಚ್ಛ ಸ್ಥಾನದಲ್ಲಿರಲಿದೆ ಎಂಬುದನ್ನು ತಿಳಿದುಕೊಳ್ಳಿ. ಆ ಗ್ರಹದ ಆರಾಧನೆಯನ್ನು ಹೆಚ್ಚಾಗಿ ಮಾಡಿ.
ಸರಿಯಾಗಿ ನಿದ್ರೆ ಬರ್ತಿಲ್ಲ, ಭೂತದ ಭಯ ಕಾಡ್ತಿದೆ ಎನ್ನುವವರು ಮನೆಯ ನೈರುತ್ಯ ಭಾಗವನ್ನು ಸ್ವಚ್ಛವಾಗಿಡಿ. ಶನಿ ಗ್ರಹ ಮತ್ತು ಭೂಮಿಗೆ ಸಂಬಂಧಿಸಿದ ದಿಕ್ಕಾಗಿದೆ. ಇಲ್ಲಿ ಅಡುಗೆ ಮನೆ ಅಥವಾ ಮುಖ್ಯ ದ್ವಾರ ನಿರ್ಮಾಣ ಮಾಡಬೇಡಿ. ಈ ಸ್ಥಳವನ್ನು ಶುಭವಾಗಿಡಲು ಅಲ್ಲಿ ಬೆಕ್ಕು ಅಥವಾ ಸಿಂಹದ ಚಿತ್ರವನ್ನಿಡಿ.