alex Certify
ಕನ್ನಡ ದುನಿಯಾ       Mobile App
       

Kannada Duniya

ಸೂರ್ಯ ಗ್ರಹಣದಿಂದ ಯಾರಿಗೆ ಲಾಭ? ಯಾರಿಗೆ ನಷ್ಟ?

ಜುಲೈ 13 ರಂದು ವರ್ಷದ ಎರಡನೇ ಸೂರ್ಯಗ್ರಹಣ ಸಂಭವಿಸಲಿದೆ. ಇದು ಭಾಗಶಃ ಸೂರ್ಯಗ್ರಹಣವಾಗಿರಲಿದೆ. ದಕ್ಷಿಣ ಆಸ್ಟ್ರೇಲಿಯಾ, ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರದಲ್ಲಿ ಈ ಗ್ರಹಣವು ಹೆಚ್ಚು ಗೋಚರಿಸುತ್ತದೆ. ಭಾರತ ಹಾಗೂ ನೆರೆ ದೇಶಗಳಲ್ಲಿ ಗೋಚರಿಸುವುದಿಲ್ಲ. ಆದ್ರಿಂದ ಸೂತಕ ನಿಯಮ ಭಾರತೀಯರಿಗೆ ಅನ್ವಯವಾಗುವುದಿಲ್ಲ. ಆದ್ರೆ ರಾಶಿ ಮೇಲೆ ಪರಿಣಾಮ ಬೀರಲಿದೆ.

ಮೇಷ: ಸೂರ್ಯ ಗ್ರಹಣ ಆರ್ಥಿಕ ಲಾಭ ತಂದುಕೊಡಲಿದೆ. ಸುಖ-ಸಂತೋಷ ವೃದ್ಧಿಯಾಗಲಿದೆ. ನೌಕರಿಯಲ್ಲಿ ಸಫಲತೆ ಸಿಗಲಿದೆ.

ವೃಷಭ :ಕೆಲ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ. ವೆಚ್ಚ ಹೆಚ್ಚಾಗಲಿದೆ. ಸುಖ-ಶಾಂತಿಯಲ್ಲಿ ನಷ್ಟ.

ಮಿಥುನ : ಆರೋಗ್ಯದಲ್ಲಿ ವ್ಯತ್ಯಯ. ಮಾನಸಿಕ ಒತ್ತಡ. ಅತಿಯಾದ ಭರವಸೆ ಬೇಡ.

ಕರ್ಕ : ಆರ್ಥಿಕ ಸ್ಥಿತಿಯಲ್ಲಿ ಸ್ಥಿರತೆ. ಆರೋಗ್ಯದಲ್ಲಿ ವ್ಯತ್ಯಯ. ಬೇರೆಯವರ ಜೊತೆ ಗಲಾಟೆ ಸಾಧ್ಯತೆ.

ಸಿಂಹ: ಇಚ್ಛಾಶಕ್ತಿ, ಸಾಹಸದಲ್ಲಿ ವೃದ್ಧಿ. ಸಣ್ಣ ಪ್ರವಾಸದಿಂದ ಲಾಭ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ.

ಕನ್ಯಾ: ಕೌಟುಂಬಿಕ ಸಮಸ್ಯೆ. ಕಾನೂನು ವಿಚಾರದಲ್ಲಿ ಜಯ ಸಾಧ್ಯತೆ.

ತುಲಾ: ಪೂರ್ಣ ಶಕ್ತಿ ಹಾಗೂ ಮನಸ್ಸಿನಿಂದ ಕೆಲಸ ಮಾಡಲು ಸಾಧ್ಯವಿಲ್ಲ. ಕುಟುಂಬ ಹಾಗೂ ಪ್ರೀತಿಯಲ್ಲಿ ಸಮಸ್ಯೆ. ಲಾಭ, ಯಶಸ್ಸಿನ ದಾರಿಯಲ್ಲಿ ನಿಧಾನ ಪ್ರಗತಿ.

ವೃಶ್ಚಿಕ : ಧನ ಲಾಭ. ಉನ್ನತಿ. ವಿರೋಧಿಗಳ ವಿರುದ್ಧ ಜಯ. ಖುಷಿ, ಶಾಂತಿ ಪ್ರಾಪ್ತಿ.

ಧನು : ಜೀವನ ಸಂಗಾತಿ ಜೊತೆ ಕಲಹ, ಬ್ಯುಸಿನೆಸ್ ಪಾರ್ಟನರ್ ಜೊತೆ ಗಲಾಟೆ ಸಾಧ್ಯತೆ.

ಮಕರ : ಧನ ಹಾನಿ. ಗೌರವಕ್ಕೆ ಅಡ್ಡಿ.

ಕುಂಭ :  ಒತ್ತಡ ಹೆಚ್ಚಾದಂತೆ ಸಮಸ್ಯೆ ಹೆಚ್ಚಾಗುತ್ತದೆ. ಯಶಸ್ಸಿಗೆ ಹೆಚ್ಚು ಸಂಘರ್ಷ ಅಗತ್ಯ.

ಮೀನ : ಸೂರ್ಯ ಗ್ರಹಣ ಶುಭಕರವಾಗಿರಲಿದೆ. ಪ್ರತಿಯೊಂದು ಕೆಲಸದಲ್ಲೂ ಲಾಭ ಸಿಗಲಿದೆ. ಉದ್ಯೋಗ, ವ್ಯವಹಾರದಲ್ಲೂ ಲಾಭ.

Subscribe Newsletter

Get latest updates on your inbox...

Opinion Poll

  • ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಶಸ್ಸು ಕಾಣಲಿದೆಯಾ ಕಾಂಗ್ರೆಸ್-ಜೆಡಿಎಸ್ ಮೈತ್ರಿ?

    View Results

    Loading ... Loading ...