alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇಂದು ಶಾರೀರಿಕ ಮತ್ತು ಮಾನಸಿಕ ಆಯಾಸದಿಂದ ಬಳಲುತ್ತೀರಿ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೇ ಇರುವುದರಿಂದ ಹತಾಶೆ ಕಾಡಬಹುದು. ಕೆಲಸದ ಓಡಾಟದಲ್ಲಿ ಕುಟುಂಬದ ಕಡೆಗೆ ಹೆಚ್ಚು ಗಮನ ಕೊಡಲು ಸಾಧ್ಯವಾಗುವುದಿಲ್ಲ.

ವೃಷಭ ರಾಶಿ

ಇವತ್ತು ಎಲ್ಲಾ ಕಾರ್ಯಗಳನ್ನು ದೃಢ ನಿಶ್ಚಯ ಮತ್ತು ಆತ್ಮವಿಶ್ವಾಸದಿಂದ ಪೂರ್ಣಗೊಳಿಸಲಿದ್ದೀರಿ. ಅದರಲ್ಲಿ ಯಶಸ್ಸು ಕೂಡ ಸಿಗುತ್ತದೆ. ತಂದೆಯಿಂದ ಲಾಭವಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಯಶಸ್ಸು ಸಿಗುತ್ತದೆ.

ಮಿಥುನ ರಾಶಿ

ಹೊಸ ಯೋಜನೆಗಳನ್ನು ಆರಂಭಿಸಲು ಇಂದು ಅನುಕೂಲಕರ ದಿನ. ವ್ಯಾಪಾರಿಗಳಿಗೆ ಸರ್ಕಾರದಿಂದ ಲಾಭ ದೊರೆಯುತ್ತದೆ. ಉದ್ಯೋಗಿಗಳು ಹಿರಿಯ ಅಧಿಕಾರಿಗಳ ಕೃಪಾದೃಷ್ಟಿಗೆ ಪಾತ್ರರಾಗುತ್ತಾರೆ. ಸಂಬಂಧಿಕರು ಮತ್ತು ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಏರ್ಪಡಲಿದೆ.

ಕರ್ಕ ರಾಶಿ

ಶಾರೀರಿಕ ಮತ್ತು ಮಾನಸಿಕ ಅಸ್ವಸ್ಥತೆಯ ಅನುಭವವಾಗಲಿದೆ. ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳು ಮೂಡುತ್ತವೆ. ತಪ್ಪು ತಿಳುವಳಿಕೆಯಿಂದ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆ ಇದೆ.

ಸಿಂಹ ರಾಶಿ

ದೃಢ ನಿಶ್ಚಯ ಮತ್ತು ಆತ್ಮವಿಶ್ವಾಸದಿಂದಾಗಿ ಇಂದು ನೀವು ಎಲ್ಲಾ ಕಾರ್ಯಗಳಲ್ಲೂ ತ್ವರಿತ ನಿರ್ಣಯ ತೆಗೆದುಕೊಳ್ಳಲಿದ್ದೀರಿ. ಸಮಾಜದಲ್ಲಿ ಗೌರವ ಪ್ರತಿಷ್ಠೆ ಹೆಚ್ಚಲಿದೆ. ತಂದೆಯ ಬೆಂಬಲ ದೊರೆಯಲಿದೆ. ಆನಂದವಾಗಿ ದಿನ ಕಳೆಯಲಿದ್ದೀರಿ.

ಕನ್ಯಾ ರಾಶಿ

ಶಾರೀರಿಕ ಅಸ್ವಸ್ಥತೆಯ ಜೊತೆಗೆ ಮಾನಸಿಕ ಚಿಂತೆಯೂ ಹೆಚ್ಚಲಿದೆ. ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳಬಹುದು. ಕುಟುಂಬ ಸದಸ್ಯರೊಂದಿಗೆ ಕಲಹ ಏರ್ಪಡುವ ಸಾಧ್ಯತೆ ಇದೆ. ಉಗ್ರಮಾತು ಮತ್ತು ಅಹಂನಿಂದಾಗಿ ಜಗಳ ಉಂಟಾಗಬಹುದು.

ತುಲಾ ರಾಶಿ

ಇಂದು ನಿಮಗೆ ಶುಭ ದಿನ. ವಿವಿಧ ಕ್ಷೇತ್ರಗಳಲ್ಲಿ ಲಾಭ ದೊರೆಯಲಿದೆ. ಆದಾಯ ವೃದ್ಧಿಯಾಗಲಿದೆ. ಮಿತ್ರರರಿಗಾಗಿ ಹಣ ಖರ್ಚುಮಾಡಬೇಕಾಗಿ ಬರುತ್ತದೆ. ಅವರಿಂದ್ಲೇ ನಿಮಗೆ ಲಾಭವೂ ಇದೆ.

ವೃಶ್ಚಿಕ ರಾಶಿ

ಇವತ್ತು ನಿಮಗೆ ಶುಭ ದಿನ. ವ್ಯಾಪಾರ ಕ್ಷೇತ್ರದಲ್ಲಿ ಅನುಕೂಲಕರ ಸ್ಥಿತಿ ಇರಲಿದೆ. ಹಿರಿಯ ಅಧಿಕಾರಿಗಳು ಪ್ರಸನ್ನರಾಗಿರುತ್ತಾರೆ. ಎಲ್ಲಾ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳಲಿವೆ. ಗೌರವ-ಪ್ರತಿಷ್ಠೆ ವೃದ್ಧಿಸಲಿದೆ.

ಧನು ರಾಶಿ

ಆರೋಗ್ಯ ಕೊಂಚ ಏರುಪೇರಾಗಲಿದೆ. ಶಾರೀರಿಕ ಆಲಸ್ಯ ಮತ್ತು ಅಶಕ್ತತೆ ಕಾಡಲಿದೆ. ಮನಸ್ಸು ವ್ಯಗ್ರವಾಗುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಅಡ್ಡಿ ಆತಂಕಗಳು ಎದುರಾಗುತ್ತವೆ.

ಮಕರ ರಾಶಿ

ಆಕಸ್ಮಿಕವಾಗಿ ಧನಹಾನಿಯಾಗಬಹುದು. ವ್ಯಾವಹಾರಿಕ ಮತ್ತು ಸಾಮಾಜಿಕ ಕಾರ್ಯಗಳಿಗಾಗಿ ಓಡಾಟ ಮಾಡಬೇಕಾಗಿ ಬರಬಹುದು. ಊಟ-ತಿಂಡಿ ಬಗ್ಗೆ ಎಚ್ಚರಿಕೆ ವಹಿಸಿ. ಕೋಪ ಕಡಿಮೆ ಮಾಡಿಕೊಳ್ಳಿ. ನಕಾರಾತ್ಮಕ ಭಾವನೆಗಳನ್ನು ದೂರಮಾಡಿ.

ಕುಂಭ ರಾಶಿ

ದೃಢ ನಿರ್ಣಯ ಮತ್ತು ಆತ್ಮವಿಶ್ವಾಸದಿಂದ ಎಲ್ಲಾ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲಿದ್ದೀರಿ. ಪ್ರವಾಸ ಕೈಗೊಳ್ಳುವ ಸಾಧ್ಯತೆ ಅಧಿಕವಾಗಿದೆ. ಸ್ವಾದಿಷ್ಟ ಭೋಜನ ಹಾಗೂ ಹೊಸ ವಸ್ತ್ರ ಕೊಳ್ಳುವ ಯೋಗವಿದೆ.

ಮೀನ ರಾಶಿ

ಇಂದು ನಿಮಗೆ ಶುಭದಿನ. ಶಾರೀರಿಕ ಆರೋಗ್ಯ ಉತ್ತಮವಾಗಿರುತ್ತದೆ. ಮನೆಯಲ್ಲೂ ಸುಖ ಶಾಂತಿ ನೆಲೆಸಲಿದೆ. ಪ್ರತಿಸ್ಪರ್ಧಿಗಳೆದುರು ಗೆಲುವು ನಿಮ್ಮದೇ. ಆತ್ಮವಿಶ್ವಾಸದ ಕೊರತೆ ಉಂಟಾಗುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...