alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಹೊಸ ಕಾರ್ಯ ಆರಂಭಿಸಲು ಶುಭ ದಿನ. ಯಾರಿಗೂ ಸಾಲ ಕೊಡಲು ಹೋಗಬೇಡಿ. ಮನೆ, ಆಸ್ತಿ ಖರೀದಿಯಲ್ಲಿ ಎಚ್ಚರ ವಹಿಸಿ. ನೀವು ಅತ್ಯಂತ ಭಾಗ್ಯಶಾಲಿಗಳು. ಅದೃಷ್ಟ ನಿಮ್ಮ ಜೊತೆಗಿದೆ.

ವೃಷಭ ರಾಶಿ

ಇಂದು ನಿಮಗೆ ಶುಭ ದಿನ. ಹೊಸಬರ ಭೇಟಿಯಿಂದ ಲಾಭವಾಗಲಿದೆ. ಶಿಕ್ಷಣ, ಉದ್ಯಮ ಮತ್ತು ಉದ್ಯೋಗದಲ್ಲಿ ಮಹತ್ವಪೂರ್ಣ ಬದಲಾವಣೆಗಳಾಗಬಹುದು. ಪ್ರಯಾಣ ಕೈಗೊಳ್ಳುವ ಸಾಧ್ಯತೆ ಇದೆ.

ಮಿಥುನ ರಾಶಿ

ಇಂದು ಮನಸ್ಸಿನಲ್ಲಿ ಉದಾಸೀನತೆ ಆವರಿಸಿರುತ್ತದೆ. ಆದ್ರೂ ಉತ್ಸಾಹದ ಕೊರತೆಯಾಗುವುದಿಲ್ಲ. ಕೆಲಸಕ್ಕೆ ಸಂಬಂಧಪಟ್ಟಂತೆ ಚರ್ಚೆ ನಡೆಯಲಿದ್ದು, ಶೀಘ್ರವೇ ಪರಿಹಾರ ಕೂಡ ದೊರೆಯುತ್ತದೆ.

ಕರ್ಕ ರಾಶಿ

ಮನೆಯಲ್ಲಿ ಸುಖ-ಶಾಂತಿ ನೆಲೆಸಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಹೊಸತನವಿರಲಿದೆ. ತಂದೆ-ತಾಯಿಯಿಂದ ಶುಭ ಸಮಾಚಾರ ಬರಬಹುದು. ಪ್ರತಿಸ್ಪರ್ಧಿಗಳೆದುರು ಗೆಲುವು ಸಿಗಲಿದೆ.

ಸಿಂಹ ರಾಶಿ

ಇಂದು ಯಾರೊಂದಿಗೂ ವಾದ-ವಿವಾದ ಬೇಡ. ಧಾರ್ಮಿಕ ಕಾರ್ಯಗಳಿಗಾಗಿ ಹಣ ಖರ್ಚಾಗಬಹುದು. ಮನೆಯ ವಾತಾವರಣ ಹದಗೆಡದಂತೆ ಎಚ್ಚರ ವಹಿಸಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಕನ್ಯಾ ರಾಶಿ

ಇಂದು ನಿಮಗೆ ಮಿಶ್ರ ಫಲವಿದೆ. ಹೊಸದೇನನ್ನಾದರೂ ಮಾಡಲು ಪ್ರೇರಣೆ ಸಿಗಬಹುದು. ಸಹೋದರರ ಜೊತೆಗಿನ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಳ್ಳಲಿದ್ದೀರಿ.

ತುಲಾ ರಾಶಿ

ದಿನ ಆರಂಭದಲ್ಲಿ ಸ್ಪೂರ್ತಿ ಮತ್ತು ತಾಜಾತನದ ಅನುಭವವಾಗುತ್ತದೆ. ಭಾಗ್ಯವೃದ್ಧಿಯ ಅವಕಾಶಗಳು ದೊರೆಯುತ್ತವೆ. ವೇಗವಾಗಿ ಬದಲಾಗುವ ವಿಚಾರಗಳು ನಿಮ್ಮನ್ನು ಗೊಂದಲಕ್ಕೀಡು ಮಾಡಬಹುದು.

ವೃಶ್ಚಿಕ ರಾಶಿ

ದೀರ್ಘಾವಧಿಯ ಆರ್ಥಿಕ ಯೋಜನೆಗೆ ಅನುಕೂಲಕರ ದಿನ. ಆರ್ಥಿಕ ಮತ್ತು ವ್ಯಾವಹಾರಿಕ ದೃಷ್ಟಿಯಿಂದ ಲಾಭವಿದೆ. ಉದ್ಯೋಗಿಗಳಿಗೂ ಲಾಭವಾಗುವ ಸಾಧ್ಯತೆ ಇದೆ.

ಧನು ರಾಶಿ

ಮಾತಿನ ಮೇಲೆ ಸಂಯಮ ಇರಲಿ. ಯಾವುದೇ ಘಟನೆ ಅಥವಾ ವಸ್ತುವನ್ನು ನಕಾರಾತ್ಮಕ ಭಾವನೆಯಿಂದ ನೋಡಬೇಡಿ. ಖರ್ಚು ಹೆಚ್ಚಾಗುವುದರಿಂದ ಆರ್ಥಿಕ ತೊಂದರೆ ಎದುರಾಗಬಹುದು.

ಮಕರ ರಾಶಿ

ಸಂಯಮ ಕಳೆದುಕೊಳ್ಳಬೇಡಿ, ಅನೈತಿಕ ವ್ಯವಹಾರ ಬೇಡ. ದುರ್ಘಟನೆಯಿಂದ ಪಾರಾಗಿ. ವ್ಯಾಪಾರ ವಿಸ್ತರಿಸಬಹುದು, ಆದಾಯ ವೃದ್ಧಿಸುತ್ತದೆ. ಧನಲಾಭ ಪ್ರಾಪ್ತಿಯಾಗಲಿದೆ.

ಕುಂಭ ರಾಶಿ

ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ನಿಗದಿತ ಕೆಲಸದಲ್ಲಿ ನಿರೀಕ್ಷೆಗೆ ತಕ್ಕ ಪ್ರತಿಫಲ ಸಿಗುವುದಿಲ್ಲ. ಶಾರೀರಿಕ ಮತ್ತು ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ.

ಮೀನ ರಾಶಿ

ಊಟ ತಿಂಡಿ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಅನಾರೋಗ್ಯ ಹಾಗೂ ಪ್ರವಾಸದಿಂದಾಗಿ ಹಣ ಖರ್ಚಾಗುತ್ತದೆ. ನಕಾರಾತ್ಮಕ ವಿಚಾರ ಮತ್ತು ಕೋಪವನ್ನು ದೂರ ಮಾಡಿಕೊಳ್ಳಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...