alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಥಾನ ಬದಲಿಸಿದ ಸೂರ್ಯ: ನಾಲ್ಕು ರಾಶಿಯವರಿಗೆ ಇನ್ನೊಂದು ತಿಂಗಳು ಶುಭ

ಸೂರ್ಯ ಸ್ಥಾನ ಬದಲಿಸುವ ದಿನವನ್ನು ಸೂರ್ಯ ಸಂಕ್ರಮಣ ಎಂದು ಕರೆಯಲಾಗುತ್ತದೆ. ಸೂರ್ಯ ಒಂದು ರಾಶಿಯಲ್ಲಿ ಒಂದು ತಿಂಗಳುಗಳ ಕಾಲ ಇರ್ತಾನೆ. ಇದು ಬೇರೆ ಬೇರೆ ರಾಶಿಯವರ ಮೇಲೆ ಬೇರೆ ಬೇರೆ ಪ್ರಭಾವ ಬೀರುತ್ತದೆ. ಆಗಸ್ಟ್ 17 ರಂದು ಸೂರ್ಯ ರಾಶಿ ಬದಲಿಸಿದ್ದಾನೆ. ಸೂರ್ಯ ತನ್ನ ಸ್ವಂತ ರಾಶಿ ಸಿಂಹ ರಾಶಿಗೆ ಪ್ರವೇಶ ಮಾಡಿದ್ದಾನೆ. ಇದು ಬೇರೆ ರಾಶಿಗಳ ಮೇಲೆ ಪ್ರಭಾವ ಬೀರಲಿದೆ.

ಮೇಷ: ಸೂರ್ಯನ ಸ್ಥಾನ ಬದಲಾವಣೆ ಈ ರಾಶಿಯವರ ಮಾನಸಿಕ ಸ್ಥಿತಿ ಮೇಲೆ ಪ್ರಭಾವ ಬೀರಲಿದೆ. ಸ್ವಂತ ಹಾಗೂ ಮಗುವಿನ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದೆ. ಅಧಿಕಾರಿಗಳು, ಸರ್ಕಾರದೊಂದಿಗೆ ಅನಗತ್ಯ ವಾದ-ವಿವಾದವಾಗುವ ಸಾಧ್ಯತೆಯಿದೆ.

ವೃಷಭ: ಮಾನಸಿಕ ಹಾಗೂ ಶಾರೀರಿಕ ಕಷ್ಟ ಹೆಚ್ಚಾಗುವ ಸಾಧ್ಯತೆಯಿದೆ. ಕೌಟುಂಬಿಕ ಸಮಸ್ಯೆ ಕಾಡಬಹುದು. ಭೂಮಿ-ಆಸ್ತಿ ಸಮಸ್ಯೆ ಶುರುವಾಗಬಹುದು.

ಮಿಥುನ: ಉನ್ನತ ಅಧಿಕಾರಿಗಳ ಭೇಟಿ ಸಾಧ್ಯತೆ ಹೆಚ್ಚಿದೆ. ಮಗ ಅಥವಾ ಸ್ನೇಹಿತರಿಂದ ಗೌರವ ಪ್ರಾಪ್ತಿಯಾಗಲಿದೆ. ಶತ್ರುಗಳ ವಿರುದ್ಧ ಜಯ ಹಾಗೂ ಧನಲಾಭವಾಗಲಿದೆ.

ಕರ್ಕ: ಕೆಲಸದಲ್ಲಿ ವಿಳಂಬವಾಗಲಿದೆ. ವಿವಾದ, ಮಾನಸಿಕ ಅಸ್ವಸ್ಥತೆ, ಸಾಮಾಜಿಕ–ವಿರೋಧಿ ಜನರಿಂದ ಗೌರವಕ್ಕೆ ಧಕ್ಕೆಯಾಗಲಿದೆ. ವ್ಯವಹಾರ, ಆಸ್ತಿಯಲ್ಲಿ ನಷ್ಟ.

ಸಿಂಹ: ಈ ರಾಶಿಯವರ ಆರೋಗ್ಯದ ಮೇಲೆ ಪ್ರಭಾವ ಬೀರಲಿದೆ. ಮಾನಸಿಕ ಒತ್ತಡ ಹೆಚ್ಚಾಗಲಿದೆ. ರಕ್ತದೊತ್ತಡ, ಹೃದಯ ರೋಗ, ಕಿಬ್ಬೊಟ್ಟೆಯ ಅಸ್ವಸ್ಥತೆ, ಕಣ್ಣಿನ ಅಸ್ವಸ್ಥತೆಗಳು ಕಾಡಲಿವೆ.

ಕನ್ಯಾ: ದೈಹಿಕ ಕಷ್ಟಕ್ಕೆ ಕಾರಣವಾಗುತ್ತದೆ. ಧನ ಹಾನಿಯಾಗಲಿದೆ. ಮಾನಸಿಕ ಒತ್ತಡ, ಅಪಘಾತವಾಗುವ ಭಯವಿದೆ.

ತುಲಾ : ಈ ರಾಶಿಯವರಿಗೆ ತಿಂಗಳು ಲಾಭಕರ ಹಾಗೂ ಸಫಲತೆ ಪ್ರಾಪ್ತಿಯಾಗಲಿದೆ. ಆರ್ಥಿಕ ಲಾಭ, ವ್ಯವಹಾರದಲ್ಲಿ ವೃದ್ಧಿಯಾಗಲಿದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯದಲ್ಲಿ ವೃದ್ಧಿಯಾಗಲಿದೆ.

ವೃಶ್ಚಿಕ : ಸುಖ-ಸಮೃದ್ಧಿ ಪ್ರಾಪ್ತಿಯಾಗಲಿದೆ. ಎಲ್ಲ ಕಾರ್ಯ ಕೈಗೂಡಲಿದೆ. ಉನ್ನತ ಅಧಿಕಾರಿಯಿಂದ ಪ್ರಶಂಸೆ ಪ್ರಾಪ್ತಿಯಾಗಲಿದೆ. ನೌಕರಿಯಲ್ಲಿ ಏಳ್ಗೆ, ಧನ ಲಾಭವಾಗಲಿದೆ.

ಧನು: ಸೂರ್ಯನ ಸ್ಥಾನ ಪಲ್ಲಟ ಈ ರಾಶಿಯವರಿಗೆ ನಕಾರಾತ್ಮಕ ಪ್ರಭಾವ ನೀಡಲಿದೆ. ಆರ್ಥಿಕ ನಷ್ಟ, ಅಗೌರವ, ನೌಕರಿಯಲ್ಲಿ ಹಿನ್ನಡೆಯಾಗಲಿದೆ.

ಮಕರ: ಈ ರಾಶಿಯವರು ಎಚ್ಚರಿಕೆಯಿಂದಿರುವುದು ಒಳ್ಳೆಯದು. ದಂಡ, ದಾವೆ ಇತ್ಯಾದಿ ಸಮಸ್ಯೆ ಕಾಡಲಿದೆ. ವೈರಿಗಳ ಭಯ ಹೆಚ್ಚಾಗಲಿದೆ.

ಕುಂಭ: ವಿವಾದಗಳು ಹೆಚ್ಚಾಗುವ ಸಾಧ್ಯತೆಯಿದೆ. ದಾಂಪತ್ಯ ಸುಖದಲ್ಲಿ ಏರುಪೇರಾಗಲಿದೆ. ಕೆಲಸಗಳಲ್ಲಿ ಸಫಲತೆ ಸಿಗುವುದು ಕಷ್ಟ.

ಮೀನ: ನಿಂತ ಕೆಲಸ ಪೂರ್ಣವಾಗಲಿದೆ. ಗೌರವ, ಸನ್ಮಾನದಲ್ಲಿ ವೃದ್ಧಿಯಾಗಲಿದೆ. ಎಲ್ಲ ರೀತಿಯ ಸುಖ ಪ್ರಾಪ್ತಿಯಾಗಲಿದೆ. ಮನಸ್ಸು ಹಾಗೂ ಶರೀರ ಆರೋಗ್ಯವಾಗಿರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...