alex Certify
ಕನ್ನಡ ದುನಿಯಾ       Mobile App
       

Kannada Duniya

ಜೂ.15 ರಂದು ಮಿಥುನ ರಾಶಿಗೆ ಸೂರ್ಯನ ಪ್ರವೇಶ: ಐದು ರಾಶಿಗೆ ಅಶುಭ ಫಲ

ಜೂನ್ 15 ರಂದು ಸೂರ್ಯ ಮಿಥುನ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಸೂರ್ಯ ಎಲ್ಲ ಗ್ರಹಗಳ ರಾಜ. ಜಾತಕದಲ್ಲಿ ಸೂರ್ಯ ಸರಿಯಾದ ಜಾಗದಲ್ಲಿದ್ದರೆ ವ್ಯಕ್ತಿ ಎಲ್ಲ ರೀತಿಯ ಅಭಿವೃದ್ಧಿ ಕಾಣ್ತಾನೆ. ಸೂರ್ಯ, ಮಿಥುನ ರಾಶಿಗೆ ಪ್ರವೇಶ ಮಾಡಿದ್ದರಿಂದ ಇನ್ನೊಂದು ತಿಂಗಳು ಎಲ್ಲ ರಾಶಿಯ ಮೇಲೆ ಬೇರೆ ಬೇರೆ ಪರಿಣಾಮ ಬೀರಲಿದೆ.

ಮೇಷ : ಸೂರ್ಯ ಮಿಥುನ ರಾಶಿಗೆ ಪ್ರವೇಶ ಮಾಡಿರುವುದು ಮೇಷ ರಾಶಿಯವರಿಗೆ ಶುಭವಾಗಲಿದೆ. ಅಚಾನಕ್ ಧನಾಗಮನವಾಗುವ ಸಾಧ್ಯತೆ ಹೆಚ್ಚಿದೆ.

ವೃಷಭ : ಸೂರ್ಯನ ಬದಲಾವಣೆ ಈ ರಾಶಿಯವರ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ನೌಕರಿ ಹಾಗೂ ವ್ಯಾಪಾರದಲ್ಲಿ ಉತ್ತಮ ಫಲ ಸಿಗಲಿದೆ.

ಮಿಥುನ : ಸೂರ್ಯ ನಿಮ್ಮ ರಾಶಿಗೆ ಪ್ರವೇಶ ಮಾಡಿದ್ದರೂ ನಿಮಗೆ ಅಂಥ ಲಾಭವೇನೂ ಇಲ್ಲ. ಇಡೀ ತಿಂಗಳು ಒತ್ತಡ, ವೈಫಲ್ಯ ನಿಮ್ಮನ್ನು ಕಾಡಲಿದೆ. ವಾದ-ವಿವಾದಗಳಿಂದ ದೂರವಿರಿ.

ಕರ್ಕ : ದೊಡ್ಡ ನಷ್ಟವಾಗುವ ಸಾಧ್ಯತೆ ಹೆಚ್ಚಿದೆ. ಆರ್ಥಿಕ ನಷ್ಟ ಎದುರಾಗುವ ಸಾಧ್ಯತೆಯಿದೆ. ಸಾಲ ನೀಡುವ ಮುನ್ನ ನೂರು ಬಾರಿ ಆಲೋಚನೆ ಮಾಡಿ.

ಸಿಂಹ : ಸೂರ್ಯ, ಮಿಥುನ ರಾಶಿಗೆ ಪ್ರವೇಶ ಮಾಡಿರುವುದು ಸಿಂಹ ರಾಶಿಗೆ ದೊಡ್ಡ ಲಾಭವಾಗಲಿದೆ. ಆರ್ಥಿಕ ವೃದ್ಧಿ ಸೇರಿದಂತೆ ಮುಟ್ಟಿದ್ದೆಲ್ಲ ಚಿನ್ನವಾಗುವ ಕಾಲವಿದು.

ಕನ್ಯಾ : ಸೂರ್ಯನ ಸ್ಥಾನ ಬದಲಾವಣೆಯಿಂದ ಈ ರಾಶಿಯವರಿಗೆ ವಿಶೇಷ ಲಾಭವಿಲ್ಲ.

ತುಲಾ : ಜಮೀನು ಸಂಬಂಧಿ ವ್ಯವಹಾರ ನಡೆಸುವವರಿಗೆ ಈ ತಿಂಗಳು ಶುಭವಾಗಿರಲಿದೆ. ಅದೃಷ್ಟ ಬದಲಾಗುವ ಘಟನೆ ನಡೆಯುವ ಸಾಧ್ಯತೆಯಿದೆ. ವಿಶೇಷ ಯಾತ್ರೆಯ ಯೋಗವಿದೆ.

ವೃಶ್ಚಿಕ : ಈ ರಾಶಿಯವರಿಗೆ ಸೂರ್ಯ ಅಶುಭ ಪರಿಣಾಮ ನೀಡಲಿದ್ದಾನೆ. ಎಚ್ಚರಿಕೆಯಿಂದಿರುವುದು ಒಳ್ಳೆಯದು. ಸಣ್ಣ ಅಪಘಾತವಾಗುವ ಸಾಧ್ಯತೆ ಹೆಚ್ಚಿದೆ.

ಧನು : ವ್ಯಾಪಾರದಲ್ಲಿ ಭಾರೀ ಲಾಭವಾಗುವ ಸಾಧ್ಯತೆಯಿದೆ. ಸಮಾಜದಲ್ಲಿ ಘನತೆ ಹೆಚ್ಚಾಗಲಿದೆ. ಧನ ಲಾಭವಾಗಲಿದೆ.

ಮಕರ : ಮಕರ ರಾಶಿಯವರಿಗೆ ಸೂರ್ಯನ ಸ್ಥಾನ ಬದಲಾವಣೆ ನಷ್ಟ ತರಲಿದೆ. ಆರೋಗ್ಯ ಸಮಸ್ಯೆ ಕಾಡಲಿದೆ. ನೌಕರಿಯಲ್ಲಿ ಸಮಸ್ಯೆ ಕಾಡಲಿದೆ.

ಕುಂಭ : ಬರುವ ತಿಂಗಳು ಕುಂಭ ರಾಶಿಯವರಿಗೆ ಶುಭಕರವಾಗಿರಲಿದೆ. ಕುಟುಂಬದಲ್ಲಿ ಸುಖ-ಶಾಂತಿ ನೆಲೆಸಲಿದೆ.

ಮೀನ : ಸೂರ್ಯನ ಪರಿವರ್ತನೆ ಅಶುಭವಾಗಿರಲಿದೆ. ಸಮಸ್ಯೆ ಹೆಚ್ಚಾಗಲಿದೆ. ಪೂರ್ತಿ ತಿಂಗಳು ಶಾಂತಿಯಿಂದಿರುವುದು ಬಹಳ ಮುಖ್ಯ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...