alex Certify
ಕನ್ನಡ ದುನಿಯಾ       Mobile App
       

Kannada Duniya

ಮರೆತೂ ರಸ್ತೆಯಲ್ಲಿ ಸಿಗುವ ಈ ವಸ್ತುಗಳನ್ನು ಮುಟ್ಟಬೇಡಿ

ವಿಷ್ಣು ಪುರಾಣದಲ್ಲಿ ಸುಖ-ಸಮೃದ್ಧಿಗೆ ಸಂಬಂಧಿಸಿದಂತೆ ಅನೇಕ ನಿಯಮಗಳನ್ನು ಹೇಳಲಾಗಿದೆ. ಆ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿದಲ್ಲಿ ಭಗವಂತ ವಿಷ್ಣು, ಮಹಾಲಕ್ಷ್ಮಿ ಜೊತೆ ಎಲ್ಲ ದೇವಾನುದೇವತೆಗಳು ಖುಷಿಯಾಗ್ತಾರೆ.

ವಿಷ್ಣು ಪುರಾಣದಲ್ಲಿ ಅನೇಕ ವಿಷ್ಯಗಳನ್ನು ಹೇಳಲಾಗಿದೆ. ರಸ್ತೆ ಮೇಲೆ ಓಡಾಡುವ ವೇಳೆ ಸಿಗುವ ಕೆಲವೊಂದು ವಸ್ತುಗಳನ್ನು ಮುಟ್ಟಬಾರದು. ಮನೆಯೊಳಗೆ ತರಲೇಬಾರದು ಎಂದು ವಿಷ್ಣು ಪುರಾಣದಲ್ಲಿ ಹೇಳಲಾಗಿದೆ. ರಸ್ತೆಯಲ್ಲಿರುವ ಕೆಲ ವಸ್ತುಗಳು ನಕಾರಾತ್ಮಕ ಹಾಗೂ ಅಶುಭವಾಗಿರುವುದ್ರಿಂದ ಅದು ಮನೆಗೆ ಒಳ್ಳೆಯದಲ್ಲ.

ವಿಷ್ಣು ಪುರಾಣದ ಪ್ರಕಾರ ಕೂದಲು ಅಪವಿತ್ರ. ರಸ್ತೆಯಲ್ಲಿ ಬಿದ್ದ ಕೂದಲನ್ನು ಅಪ್ಪಿತಪ್ಪಿಯೂ ಮುಟ್ಟಬಾರದು. ಆಹಾರದ ಜೊತೆ ಕೂದಲು ಸಿಕ್ಕರೂ ಅದು ಶುಭ ಸಂಕೇತವಲ್ಲ.

ರಸ್ತೆಯಲ್ಲಿ ಸತ್ತು ಬಿದ್ದಿರುವ ಪ್ರಾಣಿ, ಮೂಳೆಗಳನ್ನು ಮುಟ್ಟಬಾರದು. ಅದ್ರಿಂದ ದೂರ ಹೋಗಬೇಕು. ಅವು ಅಶುಭ. ಶವಯಾತ್ರೆ ಮುಗಿಸಿ ಬಂದವರು ಸ್ನಾನ ಮಾಡಬೇಕು.

ಸ್ನಾನ ಮಾಡಿದ ನೀರು ರಸ್ತೆಗೆ ಬಂದ್ರೆ ಅದನ್ನು ಮೆಟ್ಟಬೇಡಿ. ಇದು ನಿಮ್ಮನ್ನು ಅಶುದ್ಧಗೊಳಿಸುತ್ತದೆ.

ರಸ್ತೆಯಲ್ಲಿ ಬಿದ್ದಿರುವ ಮುಳ್ಳಿನಿಂದ ದೂರ ಓಡಾಡಿ. ಸಾಧ್ಯವಾದ್ರೆ ರಸ್ತೆಯಿಂದ ಅದನ್ನು ಕಿತ್ತೆಸೆಯಿರಿ.

ರಸ್ತೆ ಮೇಲೆ ಭಸ್ಮ ಕಂಡರೆ ಅದನ್ನು ತುಳಿಯಬೇಡಿ. ಅದು ಯಜ್ಞ, ಯಾಗದ್ದಾಗಿದ್ದು ಅದನ್ನು ತುಳಿದ್ರೆ ಪಾಪ ಅಂಟಿಕೊಳ್ಳುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...