alex Certify
ಕನ್ನಡ ದುನಿಯಾ       Mobile App
       

Kannada Duniya

ಕೃಷ್ಣನಿಗೆ ಈ ವಸ್ತುಗಳನ್ನು ಅರ್ಪಿಸಿದ್ರೆ ತೆರೆಯಲಿದೆ ಭಾಗ್ಯದ ಬಾಗಿಲು

krishna_mor_pankh-jpg_1502601248_618x347

ಕೃಷ್ಣ ಪಕ್ಷದ ಅಷ್ಠಮಿಯಂದು ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಗುತ್ತದೆ. ಹಿಂದುಗಳ ಮನೆಯಲ್ಲಿ ಭಗವಂತ ಕೃಷ್ಣನ ಮೂರ್ತಿ ಅವಶ್ಯವಾಗಿರುತ್ತದೆ. ಕೆಲವರ ಮನೆಯಲ್ಲಿ ಬಾಲ ಕೃಷ್ಣನನ್ನು ಪೂಜೆ ಮಾಡ್ತಾರೆ. ಬಾಲಗೋಪಾಲನ ಪೂಜೆ, ಆರಾಧನೆ ವೇಳೆ ಕೆಲವೊಂದು ವಿಷಯಗಳ ಬಗ್ಗೆ ತಿಳಿದಿರಬೇಕಾಗುತ್ತದೆ.

ಜೀವನದಲ್ಲಿ ಸದಾ ಗಲಾಟೆ, ಜಗಳ ನಡೆಯುತ್ತಿದ್ದರೆ, ಆರ್ಥಿಕ ಸಮಸ್ಯೆ ಎದುರಾಗಿದ್ದರೆ ಕೃಷ್ಣ ಜನ್ಮಾಷ್ಠಮಿಯಂದು ನೀವು ಮಾಡುವ ಕೆಲಸದಿಂದ ನಿಮ್ಮ ಭಾಗ್ಯದ ಬಾಗಿಲು ತೆರೆಯುವ ಸಾಧ್ಯತೆ ಹೆಚ್ಚಿರುತ್ತದೆ. ರಾಧಾರಮಣನಿಗೆ ಐದು ವಸ್ತುಗಳನ್ನು ಅರ್ಪಿಸುವುದರಿಂದ ಗೋಪಿಲೋಲ ಜೀವನದ ಎಲ್ಲ ಕಷ್ಟಗಳನ್ನು ದೂರ ಮಾಡಿ ಕೃಪೆ ತೋರುತ್ತಾನೆ.

ತುಳಸಿ ಮಾಲೆ :  ಭಗವಂತ ಶ್ರೀಕೃಷ್ಣನಿಗೆ ತುಳಸಿ ಬಲು ಪ್ರಿಯವಾದ ವಸ್ತು. ಹಾಗಾಗಿ ಜನ್ಮಾಷ್ಠಮಿಯಂದು ಕೃಷ್ಣನಿಗೆ ತುಳಸಿ ಮಾಲೆಯನ್ನು ಅರ್ಪಿಸಿ.

ಬೆಣ್ಣೆ-ಮಿಠಾಯಿ : ಬಾಲ ಗೋಪಾಲನಿಗೆ ಬೆಣ್ಣೆ ಮಿಠಾಯಿ ಬಹಳ ಇಷ್ಟ. ಬೆಣ್ಣೆ ಮಿಠಾಯಿ ನೀಡಿದ್ರೆ ಗೋಪಾಲ ತುಂಬಾ ಖುಷಿಯಾಗ್ತಾನೆ.

ಹಳದಿ ಹಣ್ಣು : ಹಳದಿ ಬಣ್ಣದ ಹಣ್ಣನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸುವುದರಿಂದ ಭಗವಂತನ ಕೃಪೆ ಸದಾ ಭಕ್ತನ ಮೇಲಿರುತ್ತದೆ. ಎಂದೂ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ.

ನವಿಲುಗರಿ : ಜನ್ಮಾಷ್ಠಮಿಯಂದು ಕೃಷ್ಣನ ಮುಕುಟಕ್ಕೆ ಅವಶ್ಯವಾಗಿ ನವಿಲು ಗರಿಯನ್ನು ಅರ್ಪಿಸಿ.

ಹಳದಿ ವಸ್ತ್ರ : ಹಳದಿ ಬಟ್ಟೆ ಶ್ರೀಕೃಷ್ಣನಿಗೆ ಬಹಳ ಪ್ರಿಯ. ಹಾಗಾಗಿ ಅಗತ್ಯವಾಗಿ ಹಳದಿ ಬಣ್ಣದ ಬಟ್ಟೆಯನ್ನು ಗೋಪಾಲನ ಚರಣಕ್ಕೆ ಅರ್ಪಿಸಿ.

ಕೊಳಲು : ಬಾಲ ಗೋಪಾಲನ ಪೂಜೆ ವೇಳೆ ಶ್ರೀಕೃಷ್ಣನ ಮೂರ್ತಿ ಪಕ್ಕದಲ್ಲಿ ಕೊಳಲನ್ನು ಅವಶ್ಯವಾಗಿ ಇಡಿ. ಇದ್ರಿಂದ ವಾಸ್ತುದೋಷ ಕಡಿಮೆಯಾಗಿ ಧನ-ಸಂಪತ್ತು ಪ್ರಾಪ್ತಿಯಾಗುತ್ತದೆ.

ಮನೆಯಲ್ಲಿರುವ ಮೂರ್ತಿಗೆ ಈ ಎಲ್ಲ ವಸ್ತುಗಳನ್ನು ಅರ್ಪಿಸಿ ಪೂಜೆ ಮಾಡಬಹುದು. ಭಯ-ಭಕ್ತಿಯಿಂದ ಕೃಷ್ಣ ಜನ್ಮಾಷ್ಠಮಿ ಆಚರಿಸುವ ದೇವಸ್ಥಾನಗಳಿಗೆ ಹೋಗಿ ಅಲ್ಲಿಯೂ ಈ ವಸ್ತುಗಳನ್ನು ಅರ್ಪಿಸಿ ಬರಬಹುದು.

ಸ್ನಾನ ಮಾಡಿ ಸ್ವಚ್ಛ ಬಟ್ಟೆ ಧರಿಸಿ ಪೂಜೆ ಮಾಡಬೇಕು. ಶ್ರೀಕೃಷ್ಣನ ಮೂರ್ತಿಯನ್ನು ಸ್ಪರ್ಶಿಸಬೇಕು. ಎಲ್ಲ ವಸ್ತುವನ್ನೂ ಬಲಗೈನಿಂದಲೇ ಕೃಷ್ಣನಿಗೆ ಅರ್ಪಿಸಬೇಕು. ತುಳಸಿ ಮಾಲೆ, ಬೆಣ್ಣೆ ಮಿಠಾಯಿ, ಹಳದಿ ಹಣ್ಣುಗಳನ್ನು ಪ್ರಸಾದದ ರೂಪದಲ್ಲಿ ಆದಷ್ಟು ಭಕ್ತರಿಗೆ ನೀಡಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...