alex Certify
ಕನ್ನಡ ದುನಿಯಾ       Mobile App
       

Kannada Duniya

ರಾಶಿಗನುಗುಣವಾಗಿ ಮಾಡಿ ತಾಯಿ ದುರ್ಗೆಯ ಆರಾಧನೆ

maa-durga

ತಾಯಿ ದುರ್ಗೆಯ ಶಕ್ತಿ ಅಪಾರವಾದದ್ದು. ತಾಯಿಯ ಪ್ರತಿಯೊಂದು ರೂಪಕ್ಕೂ ಅದರದೆ ಆದ ಮಹತ್ವ, ಶಕ್ತಿಯಿದೆ. ಭಕ್ತರು ತಾಯಿಯ ಎಲ್ಲ ರೂಪಗಳನ್ನೂ ಆರಾಧಿಸ್ತಾರೆ. ಪೂಜೆ ಮಾಡ್ತಾರೆ. ನವರಾತ್ರಿಗಳಲ್ಲಿ ತಾಯಿಗೆ ವಿಶೇಷ ಪೂಜೆಗಳು ನಡೆಯುತ್ತವೆ. ಭಕ್ತರಾದವರು ತಮ್ಮ ರಾಶಿಗನುಗುಣವಾಗಿ ತಾಯಿಯ ಯಾವ ರೂಪವನ್ನು ಪೂಜೆ ಮಾಡಿದ್ರೆ ಹೆಚ್ಚಿನ ಶುಭ ಫಲ ಪ್ರಾಪ್ತಿಯಾಗುತ್ತದೆ ಎಂಬುದನ್ನು ತಿಳಿದಿರಬೇಕು.

ಮೇಷ : ಮೇಷ ರಾಶಿಯವರು ಸ್ಕಂದ ಮಾತೆಯನ್ನು ಪೂಜೆ ಮಾಡಿದ್ರೆ ಆದಷ್ಟು ಬೇಗ ಅವರ ಕಷ್ಟ ಕರಗಿ ಆಸೆಗಳು ಈಡೇರಲಿವೆ.

ವೃಷಭ : ಈ ರಾಶಿಯವರು ತಾಯಿ ದುರ್ಗೆಯ ಮಹಾಗೌರಿ ರೂಪವನ್ನು ಪೂಜೆ ಮಾಡುವುದು ಶುಭ.

ಮಿಥುನ : ಮಿಥುನ ರಾಶಿಯವರು ಬ್ರಹ್ಮಚಾರಿಣಿಯ ಉಪಾಸನೆ ಮಾಡಬೇಕು. ತಾಯಿ ಬ್ರಹ್ಮಚಾರಿಣಿ ಜ್ಞಾನ, ವಿದ್ಯೆಯನ್ನು ನೀಡ್ತಾಳೆ.

ಕರ್ಕ : ಈ ರಾಶಿಯ ಭಕ್ತರು ಶೈಲಪುತ್ರಿಯನ್ನು ಆರಾಧನೆ ಮಾಡಬೇಕು.

ಸಿಂಹ : ಸಿಂಹ ರಾಶಿಯವರು ತಾಯಿ ಕೂಷ್ಮಾಂಡಾ ದೇವಿಯನ್ನು ಆರಾಧನೆ ಮಾಡಬೇಕು. ದುರ್ಗಾ ಮಂತ್ರ ಪಠಿಸಬೇಕು.

ಕನ್ಯಾ : ಕನ್ಯಾ ರಾಶಿಯವರು ಬ್ರಹ್ಮಚಾರಣಿಯನ್ನು ಪೂಜಿಸಬೇಕು.

ತುಲಾ : ಈ ರಾಶಿಯವರು ಮಹಾ ಗೌರಿಯನ್ನು ಆರಾಧನೆ ಮಾಡಿದ್ರೆ ಫಲ ಸಿದ್ಧಿಯಾಗಲಿದೆ.

ವೃಶ್ಚಿಕ : ವೃಶ್ಚಿಕ ರಾಶಿಯವರು ಸ್ಕಂದ ಮಾತೆಯನ್ನು ಪೂಜಿಸಬೇಕು.

ಧನು : ಧನು ರಾಶಿಯವರು ಚಂದ್ರಘಂಟೀತಿಯನ್ನು ಆರಾಧನೆ ಮಾಡಿದ್ರೆ ಶುಭ ಫಲ ಶೀಘ್ರದಲ್ಲಿ ಲಭಿಸಲಿದೆ.

ಮಕರ : ಈ ರಾಶಿಯವರು ಕಾಲರಾತ್ರಿ ಪೂಜೆ ಮಾಡುವುದು ಶ್ರೇಷ್ಠವೆಂದು ನಂಬಲಾಗಿದೆ.

ಕುಂಭ : ಕುಂಭ ರಾಶಿಯವರು ಕೂಡ ಕಾಲರಾತ್ರಿಯನ್ನು ಪೂಜೆ ಮಾಡಬೇಕು.

ಮೀನ : ಮೀನ ರಾಶಿಯವರು ಚಂದ್ರಘಂಟೀತಿಯ ಪೂಜೆ ಮಾಡಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...