alex Certify
ಕನ್ನಡ ದುನಿಯಾ       Mobile App
       

Kannada Duniya

ದೊಡ್ಡ ಆಪತ್ತನ್ನು ತರಲಿದೆ ಅಮವಾಸ್ಯೆಯ ಸೂರ್ಯಗ್ರಹಣ

ಈ ವರ್ಷದ ಮೊದಲ ಸೂರ್ಯ ಗ್ರಹಣ ಫೆಬ್ರವರಿ 15ರ ಮಧ್ಯರಾತ್ರಿ ಸಂಭವಿಸಲಿದೆ. ಭಾರತದಲ್ಲಂತೂ ಸೂರ್ಯ ಗ್ರಹಣ ಕಾಣಿಸುವುದಿಲ್ಲ. ದಕ್ಷಿಣ ಅಮೆರಿಕಾ, ಉರುಗ್ವೆ, ಬ್ರೆಜಿಲ್, ಅರ್ಜೆಂಟೈನಾದಲ್ಲಿ ಸೂರ್ಯ ಗ್ರಹಣ ಕಾಣಿಸಲಿದ್ದು, ಇದ್ರ ಪರಿಣಾಮ ಭಯಂಕರವಾಗಿರಲಿದೆಯಂತೆ.

ಹಿಂದಿನ ಹುಣ್ಣಿಮೆಗೆ ಚಂದ್ರ ಗ್ರಹಣ ಸಂಭವಿಸಿತ್ತು. ಮುಂದಿನ ಅಮವಾಸ್ಯೆಯಂದು ಸೂರ್ಯ ಗ್ರಹಣ ಸಂಭವಿಸಲಿದೆ. ಇದು ವಿಶ್ವಕ್ಕೆ ಅಪಾಯ ತಂದೊಡ್ಡಲಿದೆ ಎಂದು ಜ್ಯೋತಿಷ್ಯಿಗಳು ಹೇಳಿದ್ದಾರೆ. ವಿಶ್ವದ ಕೆಲ ಕಡೆ ಭೂಕಂಪದಂತಹ ಘಟನೆ ಸಂಭವಿಸಲಿದೆಯಂತೆ.

ಅಮೆರಿಕಾದಲ್ಲಿ ಪ್ರಕ್ಷುಬ್ಧತೆ ನೆಲೆಸಲಿದೆಯಂತೆ. ಭಾರತದಲ್ಲಿ ಇದ್ರ ಪರಿಣಾಮ ಕಡಿಮೆ ಇರಲಿದೆ ಆದ್ರೆ ಉತ್ತರ ಅಕ್ಷಾಂಶದಲ್ಲಿ ಹಿಮಪಾತ, ಭೂಕಂಪ, ಅನಿರೀಕ್ಷಿತ ಮಳೆಯಂತಹ ಘಟನೆ ನಡೆಯಲಿದೆಯಂತೆ.

ಪಾಕಿಸ್ತಾನ, ಇರಾಕ್, ಇರಾನ್ ನಲ್ಲಿ ಸೂರ್ಯ ಗ್ರಹಣದ ಪರಿಣಾಮ ಹೆಚ್ಚಿರಲಿದೆಯಂತೆ. ಫೆಬ್ರವರಿ 16ರ ನಂತ್ರ ಎರಡು ತಿಂಗಳು ಭಾರತದಲ್ಲಿ ಭೂಕಂಪದ ಸಂಭವ ಜಾಸ್ತಿಯಿದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳ್ತಿದೆ.

ಗ್ರಹಣ ಕಾಣಿಸಿಕೊಂಡಾಗ ಮಾತ್ರ ಗ್ರಹಣ ಹಿಡಿದ ರಾಶಿ ಮೇಲೆ ಪರಿಣಾಮ ಬೀರಲಿದೆ. ಭಾರತದಲ್ಲಿ ಗ್ರಹಣ ಕಾಣುತ್ತಿಲ್ಲ. ಹಾಗಾಗಿ ಯಾವ ರಾಶಿಯವರೂ ವೃತ ಮಾಡಬೇಕಾದ ಅಗತ್ಯವಿಲ್ಲ. ಕುಂಭ ರಾಶಿ ಹಾಗೂ ಧನಿಷ್ಠ ನಕ್ಷತ್ರದ ಮೇಲೆ ಸೂರ್ಯ ಗ್ರಹಣ ಪರಿಣಾಮ ಬೀರಲಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...