alex Certify
ಕನ್ನಡ ದುನಿಯಾ       Mobile App
       

Kannada Duniya

ಜು.13 ರಂದು ಸಂಭವಿಸಲಿದೆ ವರ್ಷದ 2ನೇ ಸೂರ್ಯಗ್ರಹಣ

ವರ್ಷದ ಎರಡನೇ ಸೂರ್ಯಗ್ರಹಣ ಜುಲೈ 13 ರಂದು ಸಂಭವಿಸಲಿದೆ. 2 ಗಂಟೆ 25 ನಿಮಿಷದವರೆಗೆ ಈ ಸೂರ್ಯ ಗ್ರಹಣವಿರಲಿದೆ. ಇದೇ ದಿನ ಅಮವಾಸ್ಯೆ ಕೂಡ ಬಂದಿದೆ. ಈ ಹಿಂದೆ ಫೆಬ್ರವರಿ 15 ರಂದು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಿತ್ತು.

ಈ ತಿಂಗಳು ಎರಡೆರಡು ಗ್ರಹಣ ಬಂದಿದೆ. ಜುಲೈ 27 ರಂದು ಶತಮಾನದ ಸುದೀರ್ಘ ಚಂದ್ರಗ್ರಹಣ ನಡೆಯಲಿದೆ. ಇದಾದ ನಂತ್ರ ಆಗಸ್ಟ್ ನಲ್ಲಿ ವರ್ಷದ ಮೂರನೇ ಸೂರ್ಯ ಗ್ರಹಣ ಸಂಭವಿಸಲಿದೆ. ಈ ಬಾರಿ ಸೂರ್ಯ ಗ್ರಹಣ ಪುನರ್ವಸು ನಕ್ಷತ್ರ ಹಾಗೂ ಹರ್ಷಿಣ ಯೋಗದಲ್ಲಿ ಬರಲಿದೆ. ಬೆಳಿಗ್ಗೆ 7 ಗಂಟೆಯಿಂದ ಶುರುವಾಗಿ 9 ಗಂಟೆ 44 ನಿಮಿಷದವರೆಗೆ ಇರಲಿದೆ. ಗ್ರಹಣದ ಸೂತಕ ಸುಮಾರು 12 ಗಂಟೆ ಮೊದಲೇ ಹಿಡಿಯಲಿದೆ.

ಸೂರ್ಯ ಗ್ರಹಣ ಸಂಭವಿಸುವ ಮೊದಲು ಹಾಲು-ಮೊಸರಿಗೆ ತುಳಸಿ ಎಲೆಯನ್ನು ಹಾಕಿಡಿ. ಹೀಗೆ ಮಾಡಿದ್ರೆ ಈ ವಸ್ತುಗಳಿಗೆ ಗ್ರಹಣ ಹಿಡಿಯುವುದಿಲ್ಲ.

ಗ್ರಹಣಕ್ಕೂ ಮುನ್ನವೇ ಆಹಾರ ಸೇವನೆ ಮಾಡಿ. ಬೇಯಿಸಿದ ಆಹಾರವನ್ನು ಹಾಗೆ ಇಡಬೇಡಿ.

ಗ್ರಹಣಕ್ಕಿಂತ ಮೊದಲೇ ವಿಶ್ರಾಂತಿ ತೆಗೆದುಕೊಳ್ಳಿ. ಗ್ರಹಣದ ವೇಳೆ ಮಲಗಬೇಡಿ.

ಸೂರ್ಯ ಗ್ರಹಣದ ವೇಳೆ ಕೆಲವೊಂದು ಕೆಲಸಗಳನ್ನು ಮಾಡಬಾರದು. ದೇವರ ಆರಾಧನೆ ಹಾಗೂ ಮೂರ್ತಿ ಪೂಜೆಯನ್ನು ನಿಷೇಧಿಸಲಾಗಿದೆ.

ಸೂರ್ಯ ಗ್ರಹಣದ ವೇಳೆ ತುಳಸಿ ಹಾಗೂ ಶಮಿ ಸಸ್ಯವನ್ನು ಮುಟ್ಟಬಾರದು.

ಸೂರ್ಯ ಗ್ರಹಣ ಮುಗಿಯುತ್ತಿದ್ದಂತೆ ಮೊಟ್ಟ ಮೊದಲು ಸ್ನಾನ ಮಾಡಿ. ನಂತ್ರ ತುಳಸಿ ಹಾಗೂ ಶಮಿಗೆ ಗಂಗಾ ಜಲವನ್ನು ಹಾಕಿ. ನಂತ್ರ ಕೈಲಾದಷ್ಟು ಬಡವರಿಗೆ ದಾನ ಮಾಡಿ.

ಸೂರ್ಯ ಗ್ರಹಣ ನಾಲ್ಕು ರಾಶಿಯವರಿಗೆ ಅದೃಷ್ಟ ನೀಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...