alex Certify
ಕನ್ನಡ ದುನಿಯಾ       Mobile App
       

Kannada Duniya

ಯಾವ ರಾಶಿಯವರಿಗೆ ಶುಭ ಫಲ ನೀಡಲಿದೆ ಹೋಳಿ

ದೇಶದಾದ್ಯಂತ ಹೋಳಿ ಸಂಭ್ರಮ ಮನೆ ಮಾಡಿದೆ. ಭಾರತದ ಪ್ರಮುಖ ಹಬ್ಬಗಳಲ್ಲಿ ಇದೂ ಒಂದು. ಉತ್ಸವದ ರೀತಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಕೆಲವರು ಬಣ್ಣ ಹಚ್ಚಿ ಹಬ್ಬ ಆಚರಿಸಿದ್ರೆ ಮತ್ತೆ ಕೆಲವರು ಸಂಪ್ರದಾಯದಂತೆ ಪೂಜೆಗಳನ್ನು ಮಾಡಿ ಹಬ್ಬ ಆಚರಿಸುತ್ತಾರೆ. ದೇಶದ ವಿವಿಧೆಡೆ ಹೋಳಿಯನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಈ ಹೋಳಿ ರಾಶಿಗಳ ಮೇಲೂ ಪ್ರಭಾವ ಬೀರಲಿದೆ.

ಮೇಷ : ಹೊರಗೆ ಸುತ್ತಾಡಿ ಒಳ್ಳೆ ಸಮಯ ಕಳೆಯುವ ಕಾಲವಿದು. ಇಷ್ಟದ ಸ್ನೇಹಿತರ ಜೊತೆ ಹೊರಗೆ ಸುತ್ತಾಡಲು ಅವಕಾಶ ಸಿಗಲಿದೆ. ಕೇಸರಿ ಹಾಗೂ ಹಳದಿ ಬಣ್ಣ ಈ ರಾಶಿಯವರಿಗೆ ಒಳ್ಳೆಯದು.

ವೃಷಭ : ಜೀವನದಲ್ಲಿ ಸಮತೋಲನ ಸಾಧಿಸಲು ಅವಕಾಶ ಸಿಗಲಿದೆ. ಕುಟುಂಬದವರ ಜೊತೆ ಕಾಲ ಕಳೆಯಲು ಇದು ಒಳ್ಳೆ ಸಮಯ. ಕೇಸರಿ ಬಣ್ಣದ ಜೊತೆ ಇವರು ಹೋಳಿ ಆಚರಿಸಿದ್ರೆ ಕಷ್ಟಗಳೆಲ್ಲ ದೂರವಾಗಿ ಜೀವನ ಮತ್ತಷ್ಟು ಸರಳವಾಗಲಿದೆ.

ಮಿಥುನ : ಕುಟುಂಬಸ್ಥರಿಂದ ಸಂಪೂರ್ಣ ಬೆಂಬಲ ಸಿಗುವುದಿಲ್ಲ. ಸಂಗಾತಿ ಜೊತೆ ಸಮಯ ಕಳೆಯಲು ಅವಕಾಶವಿದೆ. ನೀಲಿ ಬಣ್ಣ ಈ ರಾಶಿಯವರಿಗೆ ಶುಭಕರವಾಗಿರಲಿದೆ.

ಕರ್ಕ : ಈ ರಾಶಿಯವರು ಕುಟುಂಬಸ್ಥರಿಗೆ ಹೆಚ್ಚೆಚ್ಚು ಸಮಯ ನೀಡಬೇಕು. ಇದು ನಿಮ್ಮನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಕಿತ್ತಳೆ ಬಣ್ಣ ಮಂಗಳಕರವಾಗಿರಲಿದೆ.

ಸಿಂಹ : ಜೀವನದಲ್ಲಿ ಹೆಚ್ಚು ಉತ್ಸಾಹಗೊಳ್ಳುವಂತಹ ಯಾವುದೇ ಮಹತ್ವದ ಕಾರಣ ಸಿಗುವುದಿಲ್ಲ. ಕುಟುಂಬಸ್ಥರು, ಸಂಗಾತಿ ನಿಮ್ಮಿಂದ ಹೆಚ್ಚು ಅಪೇಕ್ಷೆ ಮಾಡಬಹುದು. ಏಕಾಂಗಿತನ ನಿಮ್ಮನ್ನು ಕಾಡಲಿದೆ. ಬಂಗಾರದ ಬಣ್ಣ ನಿಮಗೆ ಒಳ್ಳೆಯದು.

ಕನ್ಯಾ : ಜೀವನದಲ್ಲಿ ಜಾಗರೂಕರಾಗಿರಬೇಕಾದ ಅವಶ್ಯಕತೆಯಿದೆ. ಅಸಮತೋಲನ ತಪ್ಪಿ ಬೇರೆಯವರ ಜೊತೆ ಗಲಾಟೆ, ಜಗಳಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಕಿತ್ತಳೆ ಅಥವಾ ನೀಲಿ ಬಣ್ಣ ನಿಮ್ಮನ್ನು ಶಾಂತವಾಗಿಡಲು ನೆರವಾಗಲಿದೆ.

ತುಲಾ : ಶಕ್ತಿಯುತರೆಂಬ ಅನುಭವ ನಿಮಗಾಗುತ್ತದೆ. ಸಕಾರಾತ್ಮಕ ಶಕ್ತಿಯನ್ನು ಯೋಚಿಸಿ ಬಳಸಬೇಕು. ಹಸಿರು ಬಣ್ಣ ಒಳ್ಳೆಯದು.

ವೃಶ್ಚಿಕ : ಬೇರೆಯವರ ಬಗ್ಗೆ ನಿಮ್ಮಲ್ಲಿರುವ ಭಾವನೆಯನ್ನು ಉತ್ತಮವಾಗಿ ವ್ಯಕ್ತಪಡಿಸುವಿರಿ. ಜೀವನ ಸಂಗಾತಿ ಜೊತೆ ಉತ್ತಮ ಸಮಯ ಕಳೆಯಬೇಕಾಗಿದೆ. ಕೆಂಪು ಬಣ್ಣ ಶುಭಕರ.

ಧನು : ತಪ್ಪುಗಳಿಂದ ತಪ್ಪಿಸಿಕೊಳ್ಳುವ ಅಗತ್ಯವಿದೆ. ಸ್ನೇಹಿತರು ಅಥವಾ ಕುಟುಂಬಸ್ಥರ ಜೊತೆ ಸಂಯಮದಿಂದ ಮಾತನಾಡಬೇಕು. ನೇರಳೆ ಬಣ್ಣ ನಿಮಗೆ ಮಂಗಳಕರವಾಗಿರಲಿದೆ.

ಮಕರ : ಕುಟುಂಬದವರ ಜೊತೆ ಸಮಯ ಕಳೆಯಲು ಅವಕಾಶ ಸಿಗಲಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಬೂದು ಬಣ್ಣ ಶುಭಕರ.

ಕುಂಭ : ತಪ್ಪು ಗ್ರಹಿಕೆಯನ್ನು ತೊಡೆದು ಹಾಕಲು ಇದು ಒಳ್ಳೆ ಸಮಯ. ನೀಲಿ ಬಣ್ಣ ಕುಂಭ ರಾಶಿಯವರಿಗೆ ಶುಭಕರ.

ಮೀನ : ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆಯಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ಮೊದಲು ಇನ್ನೊಮ್ಮೆ ವಿಚಾರ ಮಾಡುವುದು ಒಳ್ಳೆಯದು. ಹಸಿರು ಬಣ್ಣ ಒಳ್ಳೆಯದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...