alex Certify
ಕನ್ನಡ ದುನಿಯಾ       Mobile App
       

Kannada Duniya

ಗುಪ್ತ ನವರಾತ್ರಿ ಮಹತ್ವವೇನು ಗೊತ್ತಾ…?

ಸಾಮಾನ್ಯವಾಗಿ ಜನರಿಗೆ ವರ್ಷದಲ್ಲಿ ಬರುವ ಎರಡು ನವರಾತ್ರಿ ಬಗ್ಗೆ ಮಾತ್ರ ಗೊತ್ತು. ಚೈತ್ರ ಮಾಸದಲ್ಲಿ ಬರುವ ಚೈತ್ರ ನವರಾತ್ರಿ ಹಾಗೂ ಅಶ್ವಿನಿ ಮಾಸದಲ್ಲಿ ಬರುವ ಶರನ್ನವರಾತ್ರಿ. ಈ ಎರಡು ನವರಾತ್ರಿ ಬಿಟ್ಟು ಮತ್ತೆರಡು ನವರಾತ್ರಿ ಕೂಡ ಬರುತ್ತದೆ. ಗುಪ್ತ ನವರಾತ್ರಿಯೆಂದು ಅದನ್ನು ಕರೆಯಲಾಗುತ್ತದೆ. ಎಲ್ಲ ಆಸೆಗಳು ಈ ನವರಾತ್ರಿಯಲ್ಲಿ ಈಡೇರುತ್ತವೆ ಎಂದು ನಂಬಲಾಗಿದೆ.

ಮಹಾಕಾಲ ಸಂಹಿತೆ ಹಾಗೂ ಶಕ್ತಿ ಗ್ರಂಥದಲ್ಲಿ ನಾಲ್ಕೂ ನವರಾತ್ರಿಗಳ ಬಗ್ಗೆ ಉಲ್ಲೇಖವಿದೆ. ಬೇಡಿಕೆ ಈಡೇರಿಕೆಗೆ ಈ ನವರಾತ್ರಿಯಂದು ಪೂಜೆ, ಆಚರಣೆ, ವೃತ ಮಾಡಲಾಗುತ್ತದೆ. ಜುಲೈ 13 ರಿಂದ ಗುಪ್ತ ನವರಾತ್ರಿ ಶುರುವಾಗಿದ್ದು, ಸೆಪ್ಟೆಂಬರ್ 21 ರ ವರೆಗಿರಲಿದೆ.

ಸಾಮಾನ್ಯ ನವರಾತ್ರಿಯಲ್ಲಿ ಸಾತ್ವಿಕ ಹಾಗೂ ತಾಂತ್ರಿಕ ಆರಾಧನೆ ನಡೆಯುತ್ತದೆ. ಆದ್ರೆ ಗುಪ್ತ ನವರಾತ್ರಿಯಲ್ಲಿ ತಾಂತ್ರಿಕ ಆರಾಧನೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಯಾವುದೇ ಪ್ರಚಾರವಿಲ್ಲದೆ ಗುಪ್ತವಾಗಿ ಗುಪ್ತ ನವರಾತ್ರಿ ಆಚರಣೆ ಮಾಡಲಾಗುತ್ತದೆ. ಎಷ್ಟು ರಹಸ್ಯವಾಗಿ ಪೂಜೆ ಮಾಡಲಾಗುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ಫಲ ಸಿಗುತ್ತದೆ ಎಂದು ನಂಬಲಾಗಿದೆ.

ಕಲಶ ಸ್ಥಾಪನೆ ಮಾಡಿ ದೇವಿ ಆರಾಧನೆ ಮಾಡಲಾಗುತ್ತದೆ. 9 ದಿನಗಳ ಕಾಲ ಪದ್ಧತಿಯಂತೆ ಪೂಜೆ ಮಾಡಿ, ವೃತ ಮಾಡಿ ಭಕ್ತರು ತಾಯಿ ಆರಾಧನೆ ಮಾಡುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...