alex Certify
ಕನ್ನಡ ದುನಿಯಾ       Mobile App
       

Kannada Duniya

ಎರಡು ರಾಶಿಯವರಿಗೆ ಶುಭ ನೀಡಲಿದೆ ಶಿವರಾತ್ರಿ

ಮಹಾಶಿವರಾತ್ರಿಯಂದು ಶಿವನ ಪೂಜೆಗೆ ವಿಶೇಷ ಮಹತ್ವವಿದೆ. ಶಿವ ಭಕ್ತರು ಈ ಅವಕಾಶಕ್ಕಾಗಿ ವರ್ಷವಿಡಿ ಕಾಯ್ತಾರೆ. ಈ ದಿನ ಭೋಲೇನಾಥನನ್ನು ಪ್ರಸನ್ನಗೊಳಿಸಲು ಭಕ್ತರು ಪೂಜೆ, ವೃತ ಮಾಡ್ತಾರೆ. ಮಾತೆ ಪಾರ್ವತಿ ಜೊತೆ ಶಿವ ಮದುವೆಯಾದ ದಿನವನ್ನು ಶಿವರಾತ್ರಿಯಾಗಿ ಆಚರಿಸಲಾಗುತ್ತದೆ ಎಂಬ ನಂಬಿಕೆಯೂ ಇದೆ.

51 ವರ್ಷಗಳ ನಂತ್ರ ಈ ಬಾರಿ ಶಿವರಾತ್ರಿ ವಿಶೇಷವಾಗಿದೆ. ಶಿವರಾತ್ರಿಯನ್ನು ಈ ಬಾರಿ ಎರಡು ದಿನ ಆಚರಿಸಲಾಗುವುದು. ಫೆಬ್ರವರಿ 13ರ ರಾತ್ರಿ 10 ಗಂಟೆಯಿಂದ ಪೂಜೆಗೆ ಶುಭ ಮುಹೂರ್ತವಿದ್ದು ಫೆಬ್ರವರಿ 14ರವರೆಗೆ ಮುಹೂರ್ತವಿದೆ. ಫೆಬ್ರವರಿ 13 ಮಂಗಳವಾರ. 51 ವರ್ಷಗಳ ನಂತ್ರ ಮಂಗಳವಾರ ಶಿವರಾತ್ರಿ ಬಂದಿದೆ.

ಮಂಗಳವಾರ ಮಹಾಶಿವರಾತ್ರಿ ಉತ್ಸವ ಬಹಳ ಶುಭಕರ. ಮಂಗಳವಾರ ಹನುಮಂತನ ದಿನ. ಹನುಮಂತ ಹಾಗೂ ಶಿವನನ್ನು ಒಂದೇ ರೂಪವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎರಡು ರಾಶಿಯವರಿಗೆ ಈ ಶಿವರಾತ್ರಿ ಶುಭಕರವಾಗಿರಲಿದೆ.

ಮೇಷ ರಾಶಿ: ಮೇಷ ರಾಶಿಯವರಿಗೆ ಈ ಶಿವರಾತ್ರಿ ಬಹಳ ಶುಭಕರವಾಗಿರಲಿದೆ. ಧನದ ಸಮಸ್ಯೆ ದೂರವಾಗಿ ಪ್ರತಿಷ್ಠೆ ಹೆಚ್ಚಾಗುವಂತಹ ಅನೇಕ ಘಟನೆಗಳು ನಡೆಯಲಿವೆ. ಎಲ್ಲ ಕೆಲಸ ಸುಲಭವಾಗಿ ನಡೆಯಲಿದೆ.

ಮೀನ ರಾಶಿ: ವ್ಯಾಪಾರ ಹಾಗೂ ನೌಕರಿಯಲ್ಲಿ ಸಫಲತೆ ಪ್ರಾಪ್ತಿಯಾಗಲಿದೆ. ಎಲ್ಲ ಕಡೆ ಧನಾತ್ಮಕ ಪ್ರತಿಕ್ರಿಯೆ ಸಿಗಲಿದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಸಿಗಲಿದೆ. ಕಾನೂನು ವಿವಾದ ಬಗೆಹರಿಯಲಿದೆ. ಆದಾಯ ಹೆಚ್ಚಳವಾಗಲಿದ್ದು, ಹಳೆಯ ಸಮಸ್ಯೆ ಬಗೆಹರಿಯಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...