alex Certify
ಕನ್ನಡ ದುನಿಯಾ       Mobile App
       

Kannada Duniya

ಜೂ.23 ರಂದು ಈ ಒಂದು ಮಂತ್ರ ಪಠಿಸಿ ಸಂಕಷ್ಟ ದೂರ ಮಾಡಿಕೊಳ್ಳಿ

ಈ ಬಾರಿ ಜೂನ್ 23 ರಂದು ಗಾಯತ್ರಿ ಜಯಂತಿ ಆಚರಿಸಲಾಗ್ತಿದೆ. ಶನಿವಾರ ಈ ಬಾರಿ ಗಾಯತ್ರಿ ಜಯಂತಿ ಬಂದಿದೆ. ಜಾತಕದಲ್ಲಿ ಶನಿ ದೋಷ ಹೊಂದಿರುವವರಿಗೆ ಇದು ಶುಭ ಸಂಕೇತವಾಗಿದೆ. ಧರ್ಮ ಗ್ರಂಥದಲ್ಲಿ ಗಾಯತ್ರಿ ಮಂತ್ರವನ್ನು ಪ್ರಭಾವಶಾಲಿ ಮಂತ್ರವೆಂದು ಪರಿಗಣಿಸಲಾಗಿದೆ. ಕೆಲ ವಿದ್ವಾಂಸರು ಶನಿ ಗಾಯತ್ರಿ ಮಂತ್ರವನ್ನು ಸಂಯೋಜಿಸಿದ್ದಾರೆ.

ಯಾರ ಜಾತಕದಲ್ಲಿ ಶನಿ ದೋಷವಿದ್ಯೋ ಅವ್ರು ಜೂನ್ 23 ರಂದು ಶನಿ ಗಾಯತ್ರಿ ಮಂತ್ರವನ್ನು ವಿಧಿ-ವಿಧಾನದ ಮೂಲಕ ಪಠಿಸಬೇಕು. ಇದ್ರಿಂದ ಶನಿದೇವ ಪ್ರಸನ್ನನಾಗ್ತಾನೆ.

ಶನಿವಾರ ಬೆಳಿಗ್ಗೆ ಬೇಗ ಎದ್ದು ಸ್ನಾನ ಮುಗಿಸಿದ ನಂತ್ರ ಶನಿ ದೇವರ ಮೂರ್ತಿ ಅಥವಾ ಫೋಟೋವನ್ನು ಕಪ್ಪು ಬಟ್ಟೆ ಮೇಲೆ ಸ್ಥಾಪನೆ ಮಾಡಿ.

ನಂತ್ರ ಶನಿ ದೇವರ ಮುಂದೆ ಸಾಸಿವೆ ಎಣ್ಣೆಯ ದೀಪ ಹಚ್ಚಿ. ಪೂಜೆ ಮುಗಿಯುವವರೆಗೆ ದೀಪ ಆರದಂತೆ ನೋಡಿಕೊಳ್ಳಿ.

ಪೂಜೆ ನಂತ್ರ ರುದ್ರಾಕ್ಷಿ ಮಾಲೆಯನ್ನು ಹಿಡಿದು ಶನಿ ಗಾಯತ್ರಿ ಮಂತ್ರವನ್ನು ಜಪಿಸಿ. ಕನಿಷ್ಟ ಐದು ಬಾರಿ ಮಂತ್ರವನ್ನು ಪಠಿಸಿ. ನಂತ್ರ ಶನಿದೇವರನ್ನು ಪೂಜೆ ಮಾಡಿ ಕಷ್ಟವನ್ನು ದೂರ ಮಾಡುವಂತೆ ಪ್ರಾರ್ಥನೆ ಮಾಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...