alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಬಾರಿ ಶ್ರಾವಣ ಮಾಸದ ವಿಶೇಷತೆ ಏನು ಗೊತ್ತಾ?

ಭಗವಂತ ಶಿವನಿಗೆ ಪ್ರಿಯವಾದ ಶ್ರಾವಣ ಮಾಸ ಜುಲೈ 28 ರಿಂದ ಶುರುವಾಗಲಿದೆ. ಶ್ರಾವಣ ಮಾಸದ ಮೊದಲ ಸೋಮವಾರ ಜುಲೈ 30 ರಂದು ಬಂದಿದೆ. ಈ ಪವಿತ್ರ ತಿಂಗಳಲ್ಲಿ ಭಗವಂತ ಶಿವ ಹಾಗೂ ತಾಯಿ ಪಾರ್ವತಿ ಆರಾಧನೆ ಮಾಡುವುದ್ರಿಂದ ಎಲ್ಲ ಆಸೆಗಳು ಈಡೇರಲಿವೆ.

19 ವರ್ಷಗಳ ನಂತ್ರ ಇದೇ ಮೊದಲ ಬಾರಿ 30 ದಿನಗಳ ಕಾಲ ಶ್ರಾವಣ ಮಾಸವಿರಲಿದೆ. ಇದ್ರ ಜೊತೆಗೆ ಈ ಬಾರಿ ಐದು ಶ್ರಾವಣ ಸೋಮವಾರ ಬರಲಿದೆ. ಸಾಮಾನ್ಯವಾಗಿ 28-29 ದಿನ ಶ್ರಾವಣ ಮಾಸವಿರ್ತಾಯಿತ್ತು. ನಾಲ್ಕು ಸೋಮವಾರ ಬರ್ತಿತ್ತು.

ಶ್ರಾವಣ ಮಾಸದಲ್ಲಿ ಐದು ಸೋಮವಾರ ಬಂದ ಸಂದರ್ಭದಲ್ಲಿ ವೃತ ಆಚರಿಸ್ತಾರೆ ಶಿವ ಭಕ್ತರು. ಶಿವ-ಪಾರ್ವತಿ ಪೂಜೆ ಮಾಡಿದ್ರೆ ಎಲ್ಲ ಬಯಕೆ ಈಡೇರಲಿದೆ. ಶ್ರಾವಣ ಮಾಸದಲ್ಲಿ ಮಾಡುವ ಸಣ್ಣ ಸಣ್ಣ ತಪ್ಪುಗಳು ಸಂಕಷ್ಟಕ್ಕೆ ಕಾರಣವಾಗುತ್ತದೆ.

ಶಿವಪೂಜೆ ವೇಳೆ ಶಿವಲಿಂಗಕ್ಕೆ ನೀರಿನ ಅಭಿಷೇಕ ಮಾಡುವ ಜೊತೆಗೆ ಅರಿಶಿನವನ್ನು ಹಾಕ್ತಾರೆ. ಆದ್ರೆ ಶಿವ ಪೂಜೆಗೆ ಅರಿಶಿನ ಶುಭವಲ್ಲ. ಶಿವ ಪುರುಷನಾದ ಕಾರಣ ಅರಿಶಿನ ಹಾಕಬಾರದೆಂಬ ನಂಬಿಕೆಯಿದೆ.

ಅಭಿಷೇಕ ಮಾಡಿದ ಮೇಲೆ ಅನೇಕರು ಪೂರ್ಣ ಪ್ರಮಾಣದಲ್ಲಿ ಪರಿಕ್ರಮ ಮಾಡ್ತಾರೆ. ಆದ್ರೆ ಎಂದೂ ಪೂರ್ಣ ಪ್ರದಕ್ಷಿಣೆ ಹಾಕಬಾರದು. ಅರ್ಧ ಪರಿಕ್ರಮ ಮಾತ್ರ ಮಾಡಬೇಕು. ಹಾಗಾದಲ್ಲಿ ಮಾತ್ರ ಫಲ ಸಿಗುತ್ತದೆ.

ಶ್ರಾವಣ ಮಾಸದಲ್ಲಿ ಹಾಲಿನ ಸೇವನೆ ಮಾಡಬಾರದು. ಹಾಲು ಕುಡಿಯುವುದ್ರಿಂದ ಪಿತ್ತ ಹೆಚ್ಚಾಗುತ್ತದೆ.

ಶ್ರಾವಣ ಮಾಸದಲ್ಲಿ ಬಿಳಿ ಬದನೆಯನ್ನು ತಿನ್ನಬಾರದು. ಶಾಸ್ತ್ರದಲ್ಲಿ ಬಿಳಿ ಬದನೆ ಅಶುಭ. ಶ್ರಾವಣ ಮಾಸದಲ್ಲಿ ಬದನೆಯಲ್ಲಿ ಹುಳುಗಳು ಹೆಚ್ಚಿರುವ ಕಾರಣ ಅದ್ರ ಸೇವನೆ ಮಾಡಬಾರದು ಎನ್ನುತ್ತದೆ ವಿಜ್ಞಾನ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...