alex Certify
ಕನ್ನಡ ದುನಿಯಾ       Mobile App
       

Kannada Duniya

ಮಕರ ಸಂಕ್ರಾಂತಿ ಯಾರಿಗೆ ಶುಭ..?

2017_1image_15_43_103357808rashifal-ll

ಜನವರಿ 14, ಶನಿವಾರ ಮಕರ ಸಂಕ್ರಾಂತಿ. ದೇಶದೆಲ್ಲೆಡೆ ಮಕರ ಸಂಕ್ರಮಣವನ್ನು ಅದ್ಧೂರಿಯಾಗಿ ಆಚರಿಸಲಾಗ್ತಾ ಇದೆ. ರಾಶಿ ಫಲದಲ್ಲಿ ದೋಷವಿದ್ರೆ ಅದ್ರ ನಿವಾರಣೆಗಾಗಿ ಕಪ್ಪು ಹಸುವಿಗೆ ಕಾಕಂಬಿಯನ್ನು ತಿನ್ನಿಸಿ.

ಮೇಷ : ಆರೋಗ್ಯ ಸರಿಯಾಗಿರುತ್ತದೆ. ವ್ಯವಹಾರದಲ್ಲಿ ವ್ಯತ್ಯಯವಾಗಲಿದೆ. ವ್ಯವಹಾರದಲ್ಲಿ ಮೋಸವಾಗಲಿದೆ. ಸಾರ್ವಜನಿಕ ಸಂಬಂಧಿ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಶುಭ: ಸಂಖ್ಯೆ-2, ಬಣ್ಣ-ಬಿಳಿ, ದಿಕ್ಕು-ವಾಯುವ್ಯ.

ವೃಷಭ : ಕೆಲಸದಲ್ಲಿ ಒತ್ತಡ. ಪ್ರೇಮ ಸಂಬಂಧಿ ವಿಚಾರಕ್ಕೆ ಸರಿಯಾದ ಗಮನ ನೀಡುವುದಿಲ್ಲ. ರಾಜಕೀಯ ಕಾರ್ಯದಲ್ಲಿ ಸಕ್ರಿಯ ಬೆಳವಣಿಗೆ. ಶುಭ: ಸಂಖ್ಯೆ-8, ಬಣ್ಣ-ಕಪ್ಪು, ದಿಕ್ಕು-ಪಶ್ಚಿಮ.

ಮಿಥುನ : ವೃತ್ತಿಯಲ್ಲಿ ಉನ್ನತಿ. ಅಧಿಕಾರಿಗಳಿಂದ ಸಹಕಾರ. ಕಾರ್ಯಕ್ಷೇತ್ರದಲ್ಲಿ ತೊಂದರೆ ನಿವಾರಣೆ. ಪರ್ಯಾಯ ಕೆಲಸದಲ್ಲಿ ಸಮಸ್ಯೆ. ಶುಭ: ಸಂಖ್ಯೆ-7. ಬಣ್ಣ- ಬೂದು, ದಿಕ್ಕು- ಈಶಾನ್ಯ

ಕರ್ಕ : ಪರಿಶ್ರಮವಿಲ್ಲದೆ ಸಮಸ್ಯೆ ಸುಲಭವಾಗಿ ಬಗೆಹರಿಯಲಿದೆ. ಮಾನಸಿಕ ಒತ್ತಡ ಹೆಚ್ಚಾಗಲಿದೆ. ಶುಭ : ಸಂಖ್ಯೆ-4, ಬಣ್ಣ-ನೀಲಿ, ದಿಕ್ಕು-ಆಗ್ನೇಯ.

ಸಿಂಹ : ವಿರೋಧಿಗಳು ದುರ್ಬಲರಾಗಲಿದ್ದಾರೆ. ವಿಪರೀತ ಪರಿಸ್ಥಿತಿಯಲ್ಲಿಯೂ ಗೆಲುವು ನಿಮ್ಮದಾಗಲಿದೆ. ಸಂಗಾತಿ ಜೊತೆ ರೋಮ್ಯಾಂಟಿಕ್ ಡೇಟ್ ಗೆ ಹೋಗಲಿದ್ದೀರಿ. ಶುಭ : ಸಂಖ್ಯೆ-3, ಬಣ್ಣ-ಹಳದಿ, ದಿಕ್ಕು-ಈಶಾನ್ಯ.

ಕನ್ಯಾ : ಆರ್ಥಿಕ ವೃದ್ಧಿಯಾಗಲಿದೆ. ಕೆಲಸದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಶುಭ : ಸಂಖ್ಯೆ- 7, ಬಣ್ಣ-ಬೂದು, ದಿಕ್ಕು-ಈಶಾನ್ಯ.

ತುಲಾ : ಕಾರ್ಯಕ್ಷೇತ್ರದಲ್ಲಿ ಆದಾಯದ ವೃದ್ಧಿಯಾಗಲಿದೆ. ಆರ್ಥಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಕಾರ್ಯಕ್ಷೇತ್ರದಲ್ಲಿ ಸಕ್ರಿಯರಾಗಲಿದ್ದೀರಿ. ಶುಭ :ಸಂಖ್ಯೆ-8, ಬಣ್ಣ-ಕಪ್ಪು, ದಿಕ್ಕು-ಪಶ್ಚಿಮ.

ವೃಶ್ಚಿಕ : ಸಹೋದ್ಯೋಗಿಗಳ ಅಸಹಕಾರದಿಂದ ನಿರಾಶೆ. ಬೇಸರಗೊಳ್ಳುವ ಅಗತ್ಯವಿಲ್ಲ. ಪರಿಸ್ಥಿತಿ ನಿಧಾನವಾಗಿ ಸುಧಾರಿಸಲಿದೆ. ಶುಭ : ಸಂಖ್ಯೆ-2, ಬಣ್ಣ-ಬಿಳಿ, ದಿಕ್ಕು-ವಾಯುವ್ಯ.

ಧನು : ಪರಿವಾರದಲ್ಲಿ ಖುಷಿ. ವೃತ್ತಿಯ ವಿಶಿಷ್ಠ ಅನುಭವದಲ್ಲಿ ಲಾಭ. ಶುಭ : ಸಂಖ್ಯೆ-5, ಬಣ್ಣ-ಹಸಿರು, ದಿಕ್ಕು-ಉತ್ತರ.

ಮಕರ : ಬದುಕಿಗಾಗಿ ಹೊಸ ಅವಕಾಶ ಸಿಗಲಿದೆ. ವೃತ್ತಿ ಅಥವಾ ವೈಯಕ್ತಿಕ ಸಮಸ್ಯೆ ಬಗೆಹರಿಯಲಿದೆ. ಶುಭ :ಸಂಖ್ಯೆ-1, ಬಣ್ಣ-ಕಪ್ಪು, ದಿಕ್ಕು-ಪೂರ್ವ.

ಕುಂಭ :ವೃತ್ತಿ ಹಾಗೂ ಖಾಸಗಿ ಜೀವನದಲ್ಲಿ ವ್ಯತ್ಯಾಸವಿರಲಿ. ದುರ್ಬಲರಾದಂತೆ ಅನ್ನಿಸುತ್ತದೆ. ಕಾರ್ಯಸ್ಥಳ ಲಾಭದಾಯಕ. ಶುಭ : ಸಂಖ್ಯೆ-1, ಬಣ್ಣ-ಕೆಂಪು, ದಿಕ್ಕು-ಉತ್ತರ

ಮೀನ : ಆರ್ಥಿಕ ಅಭಿವೃದ್ಧಿ. ಗೌರವ ಹೆಚ್ಚಾಗಲಿದೆ. ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಖಾಸಗಿ ಸಮಸ್ಯೆಯಲ್ಲಿ ಸಿಲುಕಲಿದ್ದೀರಿ. ಶುಭ : ಸಂಖ್ಯೆ-5, ಬಣ್ಣ-ಹಸಿರು, ದಿಕ್ಕು-ಉತ್ತರ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...