alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರೇಸ್ಲೆಟ್ ಗಿದೆ ನಿಮ್ಮ ಅದೃಷ್ಟ ಬದಲಿಸುವ ಶಕ್ತಿ

2017_2image_11_04_057865997salmanbracelet-ll

ಬಾಲಿವುಡ್ ನಟ ಸಲ್ಮಾನ್ ಖಾನ್ ಯಶಸ್ವಿ ಪಯಣದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸಲ್ಮಾನ್ ಯಶಸ್ಸಿನ ಹಿಂದೆ ಶ್ರಮದ ಜೊತೆ ಅದೃಷ್ಟ ಕೂಡ ಅಡಗಿದೆ. ಸಲ್ಮಾನ್ ಖಾನ್ ಸದಾ ಹಾಕಿಕೊಳ್ಳುವ ಬ್ರೇಸ್ಲೆಟ್ ಅವರ ಅದೃಷ್ಟ ಬದಲಿಸಿದೆ. ಸಲ್ಮಾನ್ ಖಾನ್ ಗೆ ಅವರ ತಂದೆ ಸಲೀಂ ಖಾನ್ ಇದನ್ನು ಉಡುಗೊರೆಯಾಗಿ ನೀಡಿದ್ದಾರೆ. ಕುಂಭ ರಾಶಿಯಲ್ಲಿ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ಜನಿಸಿದವರು ಈ ರತ್ನ ಧರಿಸುವುದರಿಂದ ಯಶಸ್ಸು ಅವರನ್ನು ಹುಡುಕಿಕೊಂಡು ಬರುತ್ತದೆ ಎಂಬುದಕ್ಕೆ ಸಲ್ಮಾನ್ ಖಾನ್ ಉತ್ತಮ ಉದಾಹರಣೆ.

ಮನೋರಂಜನೆ, ಮಾಧ್ಯಮ, ಕ್ರಿಯಾಶೀಲತೆ ಕ್ಷೇತ್ರದಲ್ಲಿ ಕೆಲಸ ಮಾಡುವವರು ಈ ರತ್ನ ಧರಿಸಿದ್ರೆ ಒಳ್ಳೆಯದು. ಹಾಗಂತ ಜ್ಯೋತಿಷ್ಯಿಗಳ ಜೊತೆ ಸಮಾಲೋಚನೆ ನಡೆಸದೇ ರತ್ನ ಧರಿಸುವುದು ಒಳ್ಳೆಯದಲ್ಲ.

ಆಕಾಶ ನೀಲಿ ಬಣ್ಣದ ರತ್ನ ಶುಕ್ರಗ್ರಹದ ಉಪರತ್ನವಾಗಿದೆ. ರತ್ನಗಳ ಶ್ರೇಣಿಯಲ್ಲಿ ಇದಕ್ಕೆ ಎರಡನೇ ಸ್ಥಾನವಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದನ್ನು ಎಲ್ಲರೂ ಧರಿಸಲು ಸಾಧ್ಯವಿಲ್ಲ. ಶುಕ್ರ ಮದುವೆ, ಪ್ರಣಯ ಹಾಗೂ ಸಮೃದ್ಧಿಯ ಸಂಕೇತ. ಜಾತಕದಲ್ಲಿ ಶುಕ್ರ ಒಳ್ಳೆ ಸ್ಥಾನದಲ್ಲಿಲ್ಲದಿದ್ದರೆ ಅದರಿಂದಾಗುವ ಕೆಟ್ಟ ಪರಿಣಾಮಗಳನ್ನು ಈ ರತ್ನ ತಪ್ಪಿಸುತ್ತದೆ. ರಾಹು ಹಾಗೂ ಕೇತುವಿನ ಅಶುಭ ಪ್ರಭಾವವನ್ನು ಇದು ನಿಯಂತ್ರಿಸುತ್ತದೆ.

ಇದನ್ನು ಧರಿಸುವುದರಿಂದ ಪ್ರೀತಿ ಹೆಚ್ಚಾಗಿ ಸಂಬಂಧ ಗಟ್ಟಿಯಾಗುತ್ತದೆ. ಮುಂದಾಗುವ ವಿಪತ್ತನ್ನು ಕೂಡ ಇದು ತಡೆಯುತ್ತದೆ. ದೆವ್ವ-ಭೂತಗಳು ಇದರ ಮುಂದೆ ತಲೆ ಎತ್ತುವುದಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...