alex Certify
ಕನ್ನಡ ದುನಿಯಾ       Mobile App
       

Kannada Duniya

ಇಂದು ರಾತ್ರಿ ಪತಿ-ಪತ್ನಿ ಒಂದಾಗಬೇಡಿ….

pexels_photo_289237_1488102447_618x347

ಇಂದು ವರ್ಷದ ಎರಡನೇ ಸೂರ್ಯಗ್ರಹಣ. ಭಾರತದ ಸಮಯ ರಾತ್ರಿ 9.16 ರಿಂದ 2 ಗಂಟೆ 34 ನಿಮಿಷದವರೆಗೆ ಗ್ರಹಣವಿರಲಿದೆ. ಭಾರತದಲ್ಲಿ ಈ ಗ್ರಹಣ ಗೋಚರಿಸುವುದಿಲ್ಲ. ಖಗೋಳ ಶಾಸ್ತ್ರಜ್ಞರ ಪ್ರಕಾರ ಪಶ್ಚಿಮ ಅಮೆರಿಕಾ, ಉತ್ತರ ಅಮೆರಿಕಾ, ಯುರೋಪ್, ಉತ್ತರ-ಪಶ್ಚಿಮ ಆಫ್ರಿಕಾದಲ್ಲಿ ಗ್ರಹಣ ಗೋಚರಿಸಲಿದೆ. ಹಾಗಂತ ಇದು ಭಾರತೀಯರ ಮೇಲೆ ಪರಿಣಾಮ ಬೀರಲ್ಲ ಎಂದರ್ಥವಲ್ಲ.

ಶಾಸ್ತ್ರಗಳ ಪ್ರಕಾರ ಗ್ರಹಣ ಕಾಲದಲ್ಲಿ ಕೆಲವೊಂದು ಕೆಲಸಗಳನ್ನು ಮಾಡಬಾರದು. ಈ ವೇಳೆ ಆಹಾರ ಸೇವನೆ ನಿಶಿದ್ಧ. ದೇವರ ಮೂರ್ತಿಯನ್ನು ಮುಟ್ಟಬಾರದು. ನಿಮಗೆ ನಾವು ಹೇಳುವ ವಿಷ್ಯ ಆಶ್ಚರ್ಯ ಹುಟ್ಟಿಸಬಹುದು. ಆದ್ರೆ ಸೂರ್ಯ ಗ್ರಹಣದ ವೇಳೆ ಶಾರೀರಿಕ ಸಂಬಂಧ ಬೆಳೆಸುವುದು ಸೂಕ್ತವಲ್ಲ.

ಗ್ರಹಣದ ವೇಳೆ ಅನೇಕ ನಕಾರಾತ್ಮಕ ಶಕ್ತಿಗಳು ಭೂಮಿಗೆ ಬರುತ್ತವೆ. ಗ್ರಹಣದ ವೇಳೆ ನೀವು ಎಲ್ಲೆ ಇದ್ದರೂ ನಿಮ್ಮ ಸುತ್ತ ನಕಾರಾತ್ಮಕ ಶಕ್ತಿ ಸುತ್ತುತ್ತಿರುತ್ತದೆ. ಈ ವೇಳೆ ಆಹಾರ ಸೇವನೆ, ಆಹಾರ ತಯಾರಿ ಹೇಗೆ ನಿಶಿದ್ಧವೋ ಹಾಗೆ ಶಾರೀರಿಕ ಸಂಬಂಧ ಕೂಡ. ಗ್ರಹಣದ ವೇಳೆ ಒಂದಾದ್ರೆ ಹುಟ್ಟುವ ಮಗುವಿನ ಮೇಲೆ ಇದು ಪ್ರಭಾವ ಬೀರುತ್ತದೆ. ಹುಟ್ಟುವ ಮಗು ದುರ್ಬಲವಾಗಲು ಇದು ಕಾರಣವಾಗುತ್ತದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಹಾಳಾಗುತ್ತದೆ.

ಮಗುವಿನ ಪ್ಲಾನ್ ಇಲ್ಲದ ದಂಪತಿ ಕೂಡ ಪರಸ್ಪರ ದೂರವಿರುವುದು ಒಳ್ಳೆಯದು. ಇದು ಸಂಗಾತಿಗಳ ಮಿದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುತ್ತದೆ ಶಾಸ್ತ್ರ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...