alex Certify
ಕನ್ನಡ ದುನಿಯಾ       Mobile App
       

Kannada Duniya

ವೈಶಾಖ ಮಾಸದಲ್ಲಿ ಕರ್ಬೂಜ ದಾನ ಮಾಡಿ ಅದೃಷ್ಟ ಬದಲಿಸಿಕೊಳ್ಳಿ

ವೈಶಾಖ ಮಾಸದಲ್ಲಿ ಸೂರ್ಯ ಹಾಗೂ ಕರ್ಬೂಜ ಅದೃಷ್ಟ ಬದಲಿಸಬಲ್ಲವು. ಧನ, ಸಂಪತ್ತು, ಮನೆ, ಘನತೆ ಲಭ್ಯವಾಗುತ್ತದೆ. ಪವಿತ್ರ ವೈಶಾಖ ಮಾಸದಲ್ಲಿ ಸೂರ್ಯನ ಪ್ರಭಾವ ಹೆಚ್ಚಿರುತ್ತದೆ. ವೈಶಾಖ ಮಾಸದಲ್ಲಿ ಗಂಗೆ ಸ್ನಾನ ಪವಿತ್ರವಾದದ್ದು. ಈ ವೇಳೆ ಸೂರ್ಯ ಹಾಗೂ ಕರ್ಬೂಜದ ಪೂಜೆ ಮಾಡಲಾಗುತ್ತದೆ. ಕರ್ಬೂಜವನ್ನು ಈ ತಿಂಗಳಿನಲ್ಲಿ ದಾನದ ರೂಪದಲ್ಲಿ ಕೂಡ ನೀಡ್ತಾರೆ.

ವೈಶಾಖ ಮಾಸದಲ್ಲಿ 5 ಭಾನುವಾರ ಬರುತ್ತದೆ. ಈ ವೇಳೆ ಕರ್ಬೂಜವನ್ನಿಟ್ಟು ಪೂಜೆ ಮಾಡಬೇಕು. ಕರ್ಬೂಜವನ್ನು ದಾನವಾಗಿ ನೀಡಿ ಫಲ ಪಡೆಯಿರಿ. ಕರ್ಬೂಜವನ್ನು ಸೇವನೆ ಮಾಡಿ ನಿಮ್ಮ ಅದೃಷ್ಟ ಬದಲಿಸಿಕೊಳ್ಳಿ.

ವೈಶಾಖ ಮಾಸದ ಪ್ರತಿ ಭಾನುವಾರ ಗಂಗಾಜಲವನ್ನು ಹಾಕಿ ಸ್ನಾನ ಮಾಡಿ. ಸೂರ್ಯನಿಗೆ ಬೆಲ್ಲದ ನೀರನ್ನು ಅರ್ಪಿಸಿ. ವಿಷ್ಣುದೇವರಿಗೆ ಕರ್ಬೂಜವನ್ನು ಅರ್ಪಿಸಿ. ಹಳದಿ ಹೂ, ಚಂದನ, ಅಕ್ಷತೆ, ಅರಿಶಿನದ ಮೂಲಕ ವಿಷ್ಣುವಿಗೆ ಪೂಜೆ ಮಾಡಿ. ಯಾವುದಾದ್ರೂ ಧಾರ್ಮಿಕ ಸ್ಥಳಕ್ಕೆ ಹೋಗಿ ಕರ್ಬೂಜವನ್ನು ದಾನ ಮಾಡಿ.

ವಿಟಮಿನ್ ಸಿ ಹಾಗೂ ಪ್ರೋಟೀನ್ ಪ್ರಮಾಣ ಹೆಚ್ಚಿರುವ ಕರ್ಬೂಜ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಮನೆ, ಮಕ್ಕಳು, ದಾಂಪತ್ಯ ಸಂತೋಷಕ್ಕೆ ಕಾರಣವಾಗುವ ಕರ್ಬೂಜ ಮುಟ್ಟಿನ ಸಮಯದಲ್ಲಿ ಮಹಿಳೆಯರ ಆಯಾಸವನ್ನು ಕಡಿಮೆ ಮಾಡುತ್ತದೆ. ತೂಕ ನಿಯಂತ್ರಣದಿಂದ ಹಿಡಿದು, ಸೌಂದರ್ಯ ಹೆಚ್ಚಿಸಲು, ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ನೆರವಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...