alex Certify
ಕನ್ನಡ ದುನಿಯಾ       Mobile App
       

Kannada Duniya

ಮರೆತೂ ಮೇ18 ರಿಂದ 5 ದಿನ ಮಾಡಬೇಡಿ ಈ ಕೆಲಸ

panchak-1495011080

ಹಿಂದೂ ಧರ್ಮದಲ್ಲಿ ಶುಭ ಕೆಲಸಗಳನ್ನು ಮಾಡುವ ಮೊದಲು ಯಾವುದು ಶುಭ ಯಾವುದು ಅಶುಭ ಎಂಬುದನ್ನು ನೋಡುತ್ತಾರೆ. ಒಳ್ಳೆಯ ದಿನ, ಗಳಿಗೆಯಲ್ಲಿ ಶುಭ ಕೆಲಸ ಮಾಡಿದ್ರೆ ಮಾಡಿದ ಉದ್ದೇಶ ಈಡೇರುತ್ತದೆ ಎಂಬ ನಂಬಿಕೆ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇ 18ರಿಂದ ಮೇ 23ರವರೆಗೆ ಯಾವುದೇ ಕೆಲಸ ಮಾಡದಿರುವುದು ಒಳ್ಳೆಯದು.

ಮೇ17 ರ ರಾತ್ರಿ 10 ಗಂಟೆ 12 ನಿಮಿಷಕ್ಕೆ ಪಂಚಕ ನಕ್ಷತ್ರ ಶುರುವಾಗಲಿದೆ. ಮೇ 23 ರವರೆಗೆ ಈ ನಕ್ಷತ್ರವಿರಲಿದೆ. ಧನಿಷ್ಠ ನಕ್ಷತ್ರದ ಮೂರನೇ ಚರಣದಿಂದ ರೇವತಿಯವರೆಗೆ ನಕ್ಷತ್ರಗಳನ್ನು ಪಂಚಕ ನಕ್ಷತ್ರ ಎನ್ನಲಾಗುತ್ತದೆ. ಪಂಚಕ ನಕ್ಷತ್ರದಲ್ಲಿ ಮನೆ ಕಟ್ಟಲು ಮರದ ತುಂಡುಗಳನ್ನು ಸಂಗ್ರಹ ಮಾಡಬಾರದು. ಆದಷ್ಟು ಮರದ ಕೆಲಸಗಳನ್ನು ಮಾಡಬೇಡಿ.

ಈ ಐದು ದಿನಗಳಲ್ಲಿ ಕೋರ್ಟ್ ವಿಚಾರ, ಮದುವೆಯ ನಿರ್ಣಯಗಳನ್ನು ತೆಗೆದುಕೊಳ್ಳಬಹುದು. ಆದ್ರೆ ಯಾವುದೇ ನಿರ್ಮಾಣದ ಕೆಲಸ, ಯಂತ್ರೋಪಕರಣಗಳ ಕೆಲಸ ಶುರುಮಾಡುವುದು ಅಶುಭ. ಇದ್ರಿಂದ ಹಾನಿಯುಂಟಾಗುತ್ತದೆ.

ಈ ಐದು ದಿನದಲ್ಲಿ ಸಾವು ಸಂಭವಿಸಿ ಶವಸಂಸ್ಕಾರ ಸರಿಯಾಗಿ ಮಾಡಿಲ್ಲವೆಂದಾದಲ್ಲಿ ಪಂಚಕ ದೋಷ ಪ್ರಾಪ್ತಿಯಾಗಲಿದೆ. ಇದನ್ನು ಗರುಡ ಪುರಾಣದಲ್ಲಿ ವಿಸ್ತಾರವಾಗಿ ಹೇಳಲಾಗಿದೆ. ಶವ ಸಂಸ್ಕಾರದ ವೇಳೆ ಪಂಡಿತರ ಸಲಹೆ ಪಡೆಯಬೇಕು. ಅವರ ಉಪಸ್ಥಿತಿಯಲ್ಲಿ ಶವ ಸಂಸ್ಕಾರ ಮಾಡಬೇಕು.

ಈ ಐದು ದಿನಗಳಲ್ಲಿ ಮನೆ ನಿರ್ಮಾಣಕ್ಕೆ ಅಡಿಪಾಯ ಹಾಕಬಾರದು. ಇದ್ರಿಂದ ಮುಂದಿನ ದಿನಗಳಲ್ಲಿ ಬಿಕ್ಕಟ್ಟು ಎದುರಿಸಬೇಕಾಗುತ್ತದೆ.

ಯಾವುದೇ ಕಾರಣಕ್ಕೂ ಈ ಐದು ದಿನಗಳಲ್ಲಿ ದೂರದ ಪ್ರಯಾಣ ಮಾಡಬೇಡಿ. ಅದ್ರಲ್ಲೂ ದಕ್ಷಿಣದ ಕಡೆ ಪ್ರಯಾಣ ಬೆಳೆಸಬೇಡಿ. ದಕ್ಷಿಣ ದಿಕ್ಕು ಯಮನಿಗೆ ಪ್ರಿಯವಾದ ದಿಕ್ಕು.

ಪಂಚಕ ನಕ್ಷತ್ರದಲ್ಲಿ ರೇವತಿ ಬಂದಾಗ ಯಾವುದೇ ಶುಭ ಕೆಲಸ ಮಾಡಬಾರದು. ಮನೆ ನಿರ್ಮಾಣ, ಗೃಹ ಪ್ರವೇಶ ಸೇರಿದಂತೆ ಯಾವುದೇ ಕೆಲಸ ಮಾಡಬಾರದು. ಇದ್ರಿಂದ ಗಲಾಟೆ, ಸಂಪತ್ತಿನ ನಾಶವಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...