alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಬಾರಿ ರಕ್ಷಾ ಬಂಧನದ ವಿಶೇಷವೇನು ಗೊತ್ತಾ?

ಈ ಬಾರಿ ಆಗಸ್ಟ್ 26 ರಂದು ರಕ್ಷಾಬಂಧನ ಆಚರಣೆ ಮಾಡಲಾಗ್ತಿದೆ. ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾಬಂಧನ ಆಚರಣೆ ಇಡೀ ದೇಶದಾದ್ಯಂತ ನಡೆಯಲಿದೆ. ಸಹೋದರ-ಸಹೋದರಿಯರ ಪ್ರೀತಿಯ ಹಬ್ಬವನ್ನು ದೇಶದ ಅನೇಕ ಕಡೆ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಒಂದೊಂದು ಕಡೆ ಒಂದೊಂದು ಪದ್ಧತಿಯಿದೆ. ರಕ್ಷಾ ಬಂಧನದಲ್ಲಿ ಸಹೋದರನಿಗೆ ರಕ್ಷಣೆ ನೀಡುವಂತೆ ಸಹೋದರಿಯರು ರಾಖಿ ಕಟ್ಟುತ್ತಾರೆ. ಆರತಿ ಎತ್ತಿ, ಸಹೋದರರ ಆಯಸ್ಸು, ಸುಖ ಸಮೃದ್ಧಿಗೆ ಪ್ರಾರ್ಥನೆ ಮಾಡ್ತಾರೆ.

ಜ್ಯೋತಿಷ್ಯದ ಪ್ರಕಾರ 4 ವರ್ಷಗಳ ನಂತ್ರ ಈ ಬಾರಿ ರಕ್ಷಾಬಂಧನಕ್ಕೆ ಶುಭ ಮುಹೂರ್ತ ಕೂಡಿ ಬಂದಿದೆ. ಈ ಬಾರಿ ರಕ್ಷಾಬಂಧನದ ದಿನದಂದು ರಾಜಯೋಗವಿದೆಯಂತೆ. ಧನಿಷ್ಟಾ ನಕ್ಷತ್ರ ಕೂಡ ಇದೇ ದಿನ ಶುರುವಾಗಲಿದೆ. ಜೊತೆಗೆ ಈ ಬಾರಿ ಹುಣ್ಣಿಮೆಯ ಗ್ರಹಣ ರಕ್ಷಾಬಂಧನಕ್ಕಿರುವುದಿಲ್ಲ. ಹಾಗಾಗಿ ಶುಭ ಮುಹೂರ್ತದಲ್ಲಿ ರಾಖಿ ಕಟ್ಟುವುದ್ರಿಂದ ಸಹೋದರಿಯರಿಗೆ ಅದೃಷ್ಟ ಒಲಿಯಲಿದ್ದು, ಸುಖ-ಶಾಂತಿ ಪ್ರಾಪ್ತಿಯಾಗಲಿದೆ. ಜೊತೆಗೆ ಸಹೋದರರ ಆಯಸ್ಸು ವೃದ್ಧಿಯಾಗಲಿದೆ.

ರಾಖಿ ಕಟ್ಟಲು ಈ ಬಾರಿ ಬೆಳಿಗ್ಗೆಯಿಂದ ಸಂಜೆಯವರೆಗೆ ಸಮಯ ಸಿಗಲಿದೆ. ಆದ್ರೆ ರಾಹು ಕಾಲದಲ್ಲಿ ರಾಖಿ ಕಟ್ಟಬಾರದು. ರಾಹು ಕಾಲ ಸಂಜೆ 4.30ರಿಂದ 6 ಗಂಟೆಯವರೆಗಿರಲಿದೆ. ಈ ವೇಳೆ ರಾಖಿ ಕಟ್ಟಬೇಡಿ. ರಾಖಿಯನ್ನು ಭಗವಂತ ಶಿವನ ಮುಂದಿಟ್ಟು 108 ಬಾರಿ ಮಹಾಮೃತ್ಯುಂಜಯ ಮಂತ್ರವನ್ನು ಜಪಿಸಿ. ನಂತ್ರ ಸಹೋದರರಿಗೆ ಕಟ್ಟಿ. ಹೀಗೆ ಮಾಡಿದ್ರೆ ಶಿವನ ಕೃಪೆಗೆ ಪಾತ್ರರಾಗುವಿರಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...