alex Certify
ಕನ್ನಡ ದುನಿಯಾ       Mobile App
       

Kannada Duniya

ರಕ್ಷಾ ಬಂಧನದ ದಿನ ಪೂಜೆಯ ಥಾಲಿ ಹೀಗಿರಲಿ

ರಕ್ಷಾ ಬಂಧನ ಸಹೋದರ-ಸಹೋದರಿ ಮಧ್ಯೆ ಸ್ನೇಹದ ಜೊತೆ ವಾತ್ಸಲ್ಯ, ಪ್ರೀತಿಯನ್ನು ಗಟ್ಟಿಗೊಳಿಸುತ್ತದೆ. ದೂರವಾಗಿರುವ ಅಥವಾ ಭಿನ್ನಾಭಿಪ್ರಾಯ ಮೂಡಿರುವ ಸಹೋದರ-ಸಹೋದರಿಯನ್ನು ಒಂದು ಮಾಡುವ ಶಕ್ತಿ ರಕ್ಷಾ ಬಂಧನಕ್ಕಿದೆ. ವರ್ಷಪೂರ್ತಿ ಎಷ್ಟು ಗಲಾಟೆಯಾದ್ರೂ ರಕ್ಷಾ ಬಂಧನದ ದಿನ ನೀಡುವ ಸಿಹಿ ಎಲ್ಲವನ್ನೂ ಮರೆಸುತ್ತದೆ.

ವಿಶೇಷವಾಗಿ ಶುಭಕೋರಿ ರಕ್ಷಾ ಬಂಧನವನ್ನು ಕಟ್ಟುವ ಜೊತೆಗೆ ರಕ್ಷಾ ಬಂಧನದ ಥಾಲಿಯನ್ನು ಸುಂದರವಾಗಿ ಸಿದ್ಧಪಡಿಸಿ. ನಿಮ್ಮ ಕೈನಲ್ಲಿ ಸಿದ್ಧವಾಗಿರುವ ಥಾಲಿ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡುತ್ತದೆ ಎಂಬುದನ್ನು ಮರೆಯಬೇಡಿ.

ಪೂಜೆ ಮಾಡುವ ಥಾಲಿಯಲ್ಲಿ ಕೆಲವೊಂದು ವಸ್ತುಗಳನ್ನು ಅವಶ್ಯವಾಗಿ ಇಡಬೇಕು. ಕುಂಕುಮ, ಅಕ್ಕಿ, ಹಣ್ಣುಗಳು, ರಾಖಿ, ಸಿಹಿ ಹಾಗೂ ದೀಪ. ಕಳಶವಿಲ್ಲದೆ ಬರಿ ನೀರಿನಲ್ಲಿ ಮಾಡುವ ಪೂಜೆ ಪೂರ್ಣವೆನಿಸಿಕೊಳ್ಳುವುದಿಲ್ಲ. ಕಳಶದಲ್ಲಿ ಸಮಸ್ತ ದೇವಾನುದೇವತೆಗಳು ನೆಲೆಸಿರುತ್ತವೆ. ಥಾಲಿಯಲ್ಲಿ ಮೊಸರನ್ನು ಕೂಡ ಇಡಬೇಕು.

ಮನೆಯ ಶುದ್ಧ ಸ್ಥಳದಲ್ಲಿ ಹಸುವಿನ ಸಗಣಿಯನ್ನು ಹಾಕಿ ಸ್ವಚ್ಛಗೊಳಿಸಿ ನಂತ್ರ ಅಲ್ಲಿ ಸ್ವಸ್ತಿಕವನ್ನು ರಚಿಸಿ. ಅದ್ರ ಮೇಲೆ ಕಳಶವನ್ನಿಡಿ. ತಾಮ್ರದ ಕಳಶಕ್ಕೆ ನೀರು ತುಂಬಿ ಅದ್ರ ಮೇಲೆ ಮಾವಿನ ಎಲೆಯನ್ನು ಇಡಿ. ನಂತ್ರ ಶ್ರೀಫಲವನ್ನಿಡಿ. ನಂತ್ರ ಪೂಜೆ ಮಾಡಿ. ಪೂಜೆ ನಂತ್ರವೇ ಸಹೋದರನಿಗೆ ರಾಖಿ ಕಟ್ಟಿ.

ಥಾಲಿಯ ಮೇಲೂ ಮೊದಲು ಸ್ವಸ್ತಿಕ ರಚಿಸಿ. ಅದ್ರ ಮೇಲೆ ಮಣ್ಣಿನ ದೀಪವನ್ನು ಹಚ್ಚಿ.ಸಣ್ಣ ಪ್ಲೇಟ್ ನಲ್ಲಿ ಕುಂಕುಮ,ಅರಿಶಿನ,ಅಕ್ಕಿ,ಮೊಸರು ಹಾಗೂ ರಾಖಿಯನ್ನು ಇಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...