alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಬಾರಿ ವಿಶೇಷವಾಗಿರಲಿದೆ ರಕ್ಷಾ ಬಂಧನ

ಸಹೋದರ-ಸಹೋದರಿಯ ಪ್ರೀತಿಯ ರಕ್ಷಾಬಂಧನ ಇದೇ ಆಗಸ್ಟ್ 26ರಂದು ಭಾನುವಾರ ಆಚರಿಸಲಾಗ್ತಿದೆ. ಹಿಂದೂ ಪಂಚಾಂಗದ ಅನುಸಾರ ರಕ್ಷಾ ಬಂಧನವನ್ನು ಶ್ರಾವಣ ಮಾಸದ ಪೂರ್ಣಿಮೆ ದಿನ ಆಚರಿಸಲಾಗುತ್ತದೆ. ರಕ್ಷಾ ಬಂಧನವನ್ನು ಭಾರತದ ಒಂದೊಂದು ಕಡೆ ಒಂದೊಂದು ರೀತಿ ಆಚರಿಸಲಾಗುತ್ತದೆ.

ರಕ್ಷಾ ಬಂಧನದ ದಿನ ಸಹೋದರನಿಗೆ ಸಹೋದರಿಯರು ರಾಖಿ ಕಟ್ಟುತ್ತಾರೆ. ಸಹೋದರಿಯನ್ನು ಸದಾ ರಕ್ಷಣೆ ಮಾಡ್ತೇನೆಂದು ಸಹೋದರ ಭರವಸೆ ನೀಡ್ತಾನೆ. ಹಿಂದಿನ ಬಾರಿ ರಕ್ಷಾ ಬಂಧನದ ದಿನ ಗ್ರಹಣವಿತ್ತು. ಇದ್ರಿಂದಾಗಿ ರಾಖಿ ಕಟ್ಟಲು ಮೂರು ಗಂಟೆ ಮಾತ್ರ ಅವಕಾಶವಿತ್ತು. ಆದ್ರೆ ಈ ಬಾರಿ ತುಂಬಾ ಸಮಯ ಸಿಗಲಿದೆ.

ಶ್ರಾವಣ ಮಾಸದ ಪೂರ್ಣಿಮೆ ಆಗಸ್ಟ್ 25 ರ ಶನಿವಾರ ಮಧ್ಯಾಹ್ನ 3 ಗಂಟೆ 16 ನಿಮಿಷಕ್ಕೆ ಶುರುವಾಗಲಿದೆ. ಇದ್ರ ಅಂತ್ಯ ಆಗಸ್ಟ್ 26 ರ ಸಂಜೆ 5 ಗಂಟೆ 25 ನಿಮಿಷಕ್ಕೆ ಮುಕ್ತಾಯವಾಗಲಿದೆ. ಆಗಸ್ಟ್ 26 ರ ಬೆಳಿಗ್ಗೆ 5.59 ರಿಂದ ಸಂಜೆ 5 ಗಂಟೆ 12 ನಿಮಿಷದವರೆಗೆ ರಾಖಿ ಕಟ್ಟಲು ಶುಭ ಮುಹೂರ್ತವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...