alex Certify
ಕನ್ನಡ ದುನಿಯಾ       Mobile App
       

Kannada Duniya

ಹನುಮಾನ್ ಜಯಂತಿಯಂದು ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು

ಚೈತ್ರ ಮಾಸದ ಪೂರ್ಣಿಮೆಯಂದು ಹನುಮಾನ್ ಜಯಂತಿ ಆಚರಿಸಲಾಗುವುದು. ಈ ಬಾರಿ ಮಾರ್ಚ್ 31 ರಂದು ಹನುಮಾನ್ ಜಯಂತಿ ಸಂಭ್ರಮ ಮನೆ ಮಾಡಲಿದೆ. ಹನುಮಂತ ಚಿರಂಜೀವಿ. ಕಲಿಯುಗದಲ್ಲಿಯೂ ಆತನಿದ್ದಾನೆ ಎಂಬ ನಂಬಿಕೆಯಿದೆ. ಹನುಮಂತ ಬಹುಬೇಗ ಪ್ರಸನ್ನನಾಗುವ ದೇವರು. ಹನುಮಂತನ ಪೂಜೆ ವೇಳೆ ಕೆಲವೊಂದು ವಿಷ್ಯಗಳ ಬಗ್ಗೆ ಗಮನವಿರಬೇಕು. ಇಲ್ಲವಾದ್ರೆ ಮಾಡಿದ ಪೂಜೆಗೆ ಫಲ ಸಿಗುವುದಿಲ್ಲ.

ಹನುಮಾನ್ ಜಯಂತಿ ಮಾರ್ಚ್ 30 ರ ಸಂಜೆ 7 ಗಂಟೆ 35 ನಿಮಿಷದಿಂದ ಮಾರ್ಚ್ 31 ಸಂಜೆ 6 ಗಂಟೆ 6 ನಿಮಿಷದವರೆಗೆ ಇರಲಿದೆ. ಮಾರ್ಚ್ 31ರಂದು ಸೂರ್ಯೋದಯದ ನಂತ್ರ ಹನುಮಾನ್ ಜಯಂತಿ ಆಚರಿಸಲಾಗುವುದು.

ಈ ದಿನ ಹನುಮಾನ್ ಚಾಲೀಸ್ ಹಾಗೂ ಸುಂದರ ಕಾಂಡವನ್ನು ಓದುವುದು ಶುಭಕರ. ಆದ್ರೆ ಅದ್ರಲ್ಲಿ ಯಾವುದೇ ತಪ್ಪುಗಳಾಗದಂತೆ ನೋಡಿಕೊಳ್ಳಿ.

ಹನುಮಂತನ ಪೂಜೆ ವೇಳೆ ಕಪ್ಪು ಅಥವಾ ಬಿಳಿ ಬಣ್ಣದ ಬಟ್ಟೆಯನ್ನು ಧರಿಸಬೇಡಿ. ಕೆಂಪು ಅಥವಾ ಹಳದಿ ಬಣ್ಣದ ಬಟ್ಟೆಯನ್ನು ಧರಿಸುವುದು ಶುಭಕರ.

ಹನುಮಂತನ ಪೂಜೆ ವೇಳೆ ಮಾಂಸಾಹಾರ ಸೇವನೆ ಮಾಡಬೇಡಿ.

ಸೂತಕದ ಸಮಯದಲ್ಲಿ ಹನುಮಂತನ ಪೂಜೆ ಮಾಡಬಾರದು. ಕುಟುಂಬದಲ್ಲಿ ಸಾವಾದ್ರೆ ಸೂತಕ ಎನ್ನಲಾಗುತ್ತದೆ. ಸೂತಕದ 13 ದಿನ ಹನುಮಂತನ ಪೂಜೆ ಮಾಡಬಾರದು.

ಮಗು ಜನನ ಖುಷಿ ವಿಚಾರ. ಆದ್ರೆ ಮಗು ಜನಿಸಿದ 10 ದಿನಗಳ ಕಾಲ ಹನುಮಂತ ಸೇರಿದಂತೆ ಯಾವುದೇ ದೇವಾನುದೇವತೆಗಳ ಪೂಜೆ–ಆರಾಧನೆ ಮಾಡಬಾರದು.

ಶವ ಯಾತ್ರೆ ಮುಗಿಸಿ ಬಂದ ನಂತ್ರ ಸ್ನಾನ ಮಾಡದೆ ಹನುಮಂತನ ಆರಾಧನೆ ಮಾಡಬಾರದು. ದಿನವಿಡಿ ಹೊರಗಿದ್ದು ರಾತ್ರಿ ಮನೆಗೆ ಬಂದ ಮೇಲೆ ಶುದ್ಧವಾಗದೆ ಪೂಜೆ ಮಾಡಬಾರದು.

ಹನುಮಂತನ ಪೂಜೆ ವೇಳೆ ಕೊಳಕು ಹಾಗೂ ಅಶುಭ ಬಟ್ಟೆಗಳನ್ನು ಧರಿಸಬಾರದು.

ಪೂಜೆಗಿಂತ ಮೊದಲು ಆಹಾರ ಸೇವನೆ ಮಾಡಿದ್ದರೆ ಬಾಯಿ-ಕೈ ಸ್ವಚ್ಛವಾಗಿ ತೊಳೆದುಕೊಂಡು ಹನುಮಂತನ ಪೂಜೆ ಮಾಡಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...