alex Certify
ಕನ್ನಡ ದುನಿಯಾ       Mobile App
       

Kannada Duniya

ಕಳಶ ಸ್ಥಾಪನೆಗೆ ಈ ಸಮಯ ಶುಭಕರ

ನವರಾತ್ರಿ ಆರಂಭವಾಗಿದೆ. ಇನ್ನು 9 ದಿನ ತಾಯಿ ದುರ್ಗೆ ಪೂಜೆ, ಆರಾಧನೆ ನಡೆಯಲಿದೆ. ಸೆಪ್ಟೆಂಬರ್ 21ರಂದು ಶುರುವಾಗುವ ನವರಾತ್ರಿ ಸೆಪ್ಟೆಂಬರ್ 29ರಂದು ಮುಕ್ತಾಯಗೊಳ್ಳಲಿದೆ. ಮೊದಲ ದಿನ ಕಳಶ ಸ್ಥಾಪನೆ ಮಾಡಿ ಒಂಭತ್ತು ದಿನ ಪೂಜೆ ಮಾಡುವ ಭಕ್ತರಿಗೆ ಎರಡು ಮುಹೂರ್ತ ಶುಭಕರವಾಗಿದೆ.

ಒಂದು ಬೆಳಿಗ್ಗೆ ಹಾಗೂ ಇನ್ನೊಂದು ಮಧ್ಯಾಹ್ನ. ಇದ್ರಲ್ಲಿ ಅಭಿಜಿನ್ ಮುಹೂರ್ತವನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ನವರಾತ್ರಿಯಂದು ಅಖಂಡ ಜ್ಯೋತಿ ಬೆಳಗುವವರಿದ್ದಾರೆ. ಅಂದ್ರೆ ಮೊದಲ ದಿನ ಹಚ್ಚಿದ ದೀಪ ಒಂಭತ್ತು ದಿನಗಳ ಕಾಲ ಸತತವಾಗಿ ಬೆಳಗುತ್ತಿರಬೇಕಾಗುತ್ತದೆ.

ಸೆಪ್ಟೆಂಬರ್ 21ರಂದು ಬೆಳಿಗ್ಗೆ 6.12ರಿಂದ 8.90ರವರೆಗೆ ಕಳಶ ಸ್ಥಾಪನೆಗೆ ಒಳ್ಳೆ ಮುಹೂರ್ತವಿದೆ. ಕಳಶ ಸ್ಥಾಪನೆಗೆ ಕೇವಲ 1 ಗಂಟೆ 56 ನಿಮಿಷ ಸಿಗಲಿದೆ. ಆದ್ರೆ ಪಂಡಿತರು ಅಭಿಜಿನ್ ಮುಹೂರ್ತದಲ್ಲಿ ಕಳಶ ಸ್ಥಾಪನೆ ಮಾಡುವುದು ಶುಭವೆಂದಿದ್ದಾರೆ. ಈ ಮುಹೂರ್ತ ಕೇವಲ 48 ನಿಮಿಷ ಮಾತ್ರವಿರಲಿದೆ.

ಸೆಪ್ಟೆಂಬರ್ 21ರಂದು ಬೆಳಿಗ್ಗೆ 11.49ರಿಂದ ಮಧ್ಯಾಹ್ನ 12.37ರವರೆಗೆ ಅಭಿಜಿನ್ ಮುಹೂರ್ತವಿದೆ. ಈ ಸಮಯದಲ್ಲಿ ದೇವಿಯನ್ನು ಪೂಜೆ ಮಾಡಿ ಏನು ಬೇಡಿಕೊಂಡ್ರು ದೇವಿ ಆಶೀರ್ವಾದ ಮಾಡ್ತಾಳೆ ಎಂದು ನಂಬಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...