alex Certify
ಕನ್ನಡ ದುನಿಯಾ       Mobile App
       

Kannada Duniya

ಇಂತ ಸಮಯದಲ್ಲಿ ಮಹಿಳೆಯರು ಆ ಸ್ಥಳಕ್ಕೆ ಹೋಗಬೇಡಿ

2016_12image_08_55_414135837pregnantlady-ll

ಮಗುವೊಂದಕ್ಕೆ ಜನ್ಮ ನೀಡಿದ್ರೆ ಮಹಿಳೆ ಜನ್ಮ ಸಾರ್ಥಕವಾಯ್ತು ಎಂಬ ಮಾತೊಂದಿದೆ. ಮಗುವಾದ್ಮೇಲೆ ತಾಯಿಯಾದವಳ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಗರ್ಭಿಣಿಯಾದಾಗಿನಿಂದಲೇ ಗರ್ಭದಲ್ಲಿರುವ ಮಗುವಿನ ಆರೋಗ್ಯದ ಬಗ್ಗೆ ಮಹಿಳೆಯಾದವಳು ಹೆಚ್ಚಿನ ಜಾಗೃತಿ ವಹಿಸಬೇಕಾಗುತ್ತದೆ.

ಮಕ್ಕಳ ಹಾಗೂ ತಾಯಿಯ ಆರೋಗ್ಯದ ದೃಷ್ಟಿಯಿಂದ ಹಿಂದಿನಿಂದಲೂ ಅನೇಕ ಪದ್ಧತಿಗಳನ್ನು ರೂಢಿಸಿಕೊಂಡು ಬರಲಾಗಿದೆ. ಈಗಿನ ಕಾಲದಲ್ಲಿ ಹಿಂದಿನ ಪದ್ಧತಿಗಳಿಗೆ ಬೆಲೆ ಇಲ್ಲ. ಮೂಢನಂಬಿಕೆ ಎನ್ನುವ ಕಾರಣಕ್ಕೆ ಮೂಲೆಗುಂಪು ಮಾಡುವವರೇ ಹೆಚ್ಚು. ಆದ್ರೆ ಗರ್ಭಿಣಿಯಾದವಳು ಕೆಲವೊಂದು ನಿಯಮಗಳನ್ನು ಪಾಲಿಸಿದ್ರೆ ಆಕೆಯ ಮುಂದಿನ ಜೀವನ ಸುಖವಾಗಿರಲಿದೆ ಎಂದು ಶಾಸ್ತ್ರಹೇಳುತ್ತದೆ.

ಒಂದು ಪದ್ಧತಿ ಪ್ರಕಾರ, 7 ತಿಂಗಳು ತುಂಬಿದ ಗರ್ಭಿಣಿ ನದಿ ಅಥವಾ ಕಣಿವೆಯನ್ನು ದಾಟಬಾರದು. ಹಾಗೆ ಅದರ ಬಳಿ ಹೋಗಬಾರದು.  ನದಿ ಹಾಗೂ ಕಣಿವೆ ಬಳಿ ನಕಾರಾತ್ಮಕ ಶಕ್ತಿ ಮನೆ ಮಾಡಿರುತ್ತದೆ. ಸಾಮಾನ್ಯವಾಗಿ ನದಿ ಬಳಿಯೇ ಸ್ಮಶಾನವಿರುತ್ತದೆ. ಹಾಗಾಗಿ ಗರ್ಭಿಣಿಯಾದವಳು ಅಲ್ಲಿಗೆ ಹೋಗುವುದು ಒಳಿತಲ್ಲ. ಗರ್ಭಿಣಿಯಾದಾಗ ದೇಹ ಹಾಗೂ ಮನಸ್ಸು ಎರಡರಲ್ಲೂ ಸಾಕಷ್ಟು ಬದಲಾವಣೆಯಾಗುತ್ತದೆ. ನದಿ ದಾಟಿದ್ರೆ ನಕಾರಾತ್ಮಕ ಶಕ್ತಿ ಮಗುವಿನ ಮೇಲೆ ನೇರವಾಗಿ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ ಎಂದು ನಂಬಲಾಗಿದೆ.

ಗರ್ಭಿಣಿಯಾದವಳು ಸದಾ ದೇವರ ಧ್ಯಾನ ಮಾಡಬೇಕು. ಒಳ್ಳೊಳ್ಳೆ ವಿಚಾರಗಳನ್ನು ಮಾತನಾಡಬೇಕು. ತಿಳಿದುಕೊಳ್ಳಬೇಕು. ಮನಸ್ಸಿಗೆ ಹಿತವೆನಿಸುವ ಸಂಗೀತ ಕೇಳಬೇಕು. ಕೆಟ್ಟ ಮಾತು, ಕೆಟ್ಟ ಸ್ಥಳ ಎರಡರಿಂದಲೂ ದೂರವಿದ್ದರೆ ತಾಯಿ-ಮಗು ಇಬ್ಬರಿಗೂ ಒಳ್ಳೆಯದು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...