alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂದಿನ 4 ತಿಂಗಳು ಯಾವ ರಾಶಿಗೆ ಯಾವ ಫಲ?

2018 ಮುಗೀತಾ ಬರ್ತಿದೆ. ಈಗಾಗಲೇ ವರ್ಷದ 8 ತಿಂಗಳು ಕಳೆದಿದೆ. ಕೆಲವರು ಸುಖ-ಸಂತೋಷ ಅನುಭವಿಸಿದ್ರೆ ಮತ್ತೆ ಕೆಲವರು ಕಷ್ಟ ಎದುರಿಸಿದ್ದಾರೆ. ಇನ್ನು ವರ್ಷದ ಕೊನೆ ನಾಲ್ಕು ತಿಂಗಳು ಯಾವ ರಾಶಿಗೆ ಯಾವ ಫಲ ನೀಡುತ್ತದೆ ಎಂಬುದರ ವಿವರ ಇಲ್ಲಿದೆ.

ಮೇಷ: ಈ ರಾಶಿಯವರು 2018 ರ ಎಂಟು ತಿಂಗಳನ್ನು ಹಾಗೆ-ಹೀಗೆ ಕಳೆದಿದ್ದಾರೆ. ಮುಂದಿನ ನಾಲ್ಕು ತಿಂಗಳು ಕೆಲಸದಲ್ಲಿ ಸಫಲತೆ ಪ್ರಾಪ್ತಿಯಾಗಲಿದೆ. ಅರ್ಧಕ್ಕೆ ನಿಂತ ಕೆಲಸ ನಿಧಾನವಾಗಿ ಪೂರ್ಣಗೊಳ್ಳಲಿದೆ. ಮಾನ-ಸನ್ಮಾನದಲ್ಲಿ ವೃದ್ಧಿಯಾಗಲಿದೆ. ಶುಭ ಸಮಾಚಾರ ಸಿಗಲಿದೆ.

ವೃಷಭ : ಈ ರಾಶಿಯವರಿಗೆ ಮಿಶ್ರ ಫಲ ಪ್ರಾಪ್ತಿಯಾಗಲಿದೆ. ಕೆಲವೊಂದು ಕೆಲಸದಲ್ಲಿ ಸಫಲತೆ ಸಿಕ್ರೆ ಮತ್ತೆ ಕೆಲ ಕೆಲಸದಲ್ಲಿ ಅಸಫಲತೆ ಪ್ರಾಪ್ತಿಯಾಗಲಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಲಕ್ಷ್ಯ ಬೇಡ. ಧಾರ್ಮಿಕ ಕಾರ್ಯದಲ್ಲಿ ಯಶಸ್ಸು ಸಿಗಲಿದೆ.

ಮಿಥುನ : ಈ ರಾಶಿಯವರಿಗೆ ವಿಭಿನ್ನ ಅನುಭವ ನೀಡಲಿದೆ. ಪ್ರಭಾವಿತ ವ್ಯಕ್ತಿಗಳ ಭೇಟಿಯಾಗಲಿದೆ. ಹೊಸ ನೌಕರಿ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ.

ಕರ್ಕ: ನಾಲ್ಕು ತಿಂಗಳಲ್ಲಿ ಅಚಾನಕ್ ಲಾಭವಾಗಲಿದೆ. ಹಣದ ಹೂಡಿಕೆಗೆ ಅವಕಾಶ ಸಿಗಲಿದೆ. ಧನ ಲಾಭವಾಗುವ ಸಾಧ್ಯತೆಯಿದೆ.

ಸಿಂಹ : 12 ರಾಶಿಗಳಲ್ಲಿ ಭಾಗ್ಯದ ಬಾಗಿಲು ತೆರೆಯುವ ರಾಶಿ ಸಿಂಹ. ಈ ನಾಲ್ಕು ತಿಂಗಳು ಲಕ್ಷ್ಮಿ ಈ ರಾಶಿ ಮನೆಯಲ್ಲಿ ನೆಲೆಸಲಿದೆ. ನೌಕರಿಯಿಂದ ಹಿಡಿದು ವ್ಯಾಪಾರದವರೆಗೆ ಎಲ್ಲ ಕೆಲಸದಲ್ಲೂ ವೃದ್ಧಿಯಾಗಲಿದೆ. ಶುಭ ಸುದ್ದಿ ಸಿಗಲಿದೆ.

ಕನ್ಯಾ : ಸಮಸ್ಯೆ ಹೆಚ್ಚಾಗಲಿದೆ. ಧನಹಾನಿಯಾಗಲಿದೆ. ತಾಳ್ಮೆ, ಜಾಗರೂಕತೆ ಅತ್ಯಗತ್ಯ. ಹೆಚ್ಚು ನಿರೀಕ್ಷೆಗಳು ಬೇಡ.

ತುಲಾ : ಈ ರಾಶಿಯವರಿಗೆ ಮುಂದಿನ ನಾಲ್ಕು ತಿಂಗಳು ಮಿಶ್ರ ಫಲ ನೀಡಲಿದೆ. ಲಾಭ ಕೂಡ ಆಗಲಿದೆ. ಕೆಲವೊಂದು ಹೊಸ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಹೊಸ ಸಂಬಂಧ ಚಿಗುರಲಿದೆ.

ವೃಶ್ಚಿಕ : ಈ ರಾಶಿಯವರಿಗೆ ನಾಲ್ಕು ತಿಂಗಳು ಶುಭಕರವಾಗಿರಲಿದೆ. ಗೌರವ ಪ್ರಾಪ್ತಿಯಾಗಲಿದೆ. ಭಾವನೆಗಳನ್ನು ಹಿಡಿದಿಟ್ಟುಕೊಳ್ಳದೆ ಹೋದಲ್ಲಿ ಆಪತ್ತು ಎದುರಾಗಲಿದೆ.

ಧನು : ಹೋರಾಟದ ದಿನ ಇನ್ನಿರುವುದಿಲ್ಲ. ಅನೇಕ ದಿನಗಳಿಂದ ಮಾಡಿದ ಕೆಲಸಕ್ಕೆ ಈಗ ಫಲ ಸಿಗಲಿದೆ. ಸಂಸಾರದಲ್ಲಿ ಸುಖ-ಶಾಂತಿ ಸಿಗಲಿದೆ.

ಮಕರ : ನಾಲ್ಕು ತಿಂಗಳಲ್ಲಿ ಫಲ ಸಿಗಲಿದೆ. ಆದ್ರೆ ಅದಕ್ಕಾಗಿ ಬೆವರು ಸುರಿಸಬೇಕಾಗುತ್ತದೆ. ಮಹತ್ವದ ಬದಲಾವಣೆಯಾಗುವ ಸಂಭವವಿದೆ.

ಕುಂಭ : ಬರುವ ನಾಲ್ಕು ತಿಂಗಳು ತುಂಬಾ ಕಷ್ಟಕರವಾಗಿರಲಿದೆ. ಧನಹಾನಿ ಸಂಭವವಿದೆ. ವರ್ಷದ ಕೊನೆ ತಿಂಗಳಿನಲ್ಲಿ ಸಕಾರಾತ್ಮಕ ಫಲ ಸಿಗಲಿದೆ. ಸಮಸ್ಯೆ ಕಡಿಮೆಯಾಗಲಿದೆ.

ಮೀನ : ಈ ರಾಶಿಯವರಿಗೆ ಮುಂದಿನ ನಾಲ್ಕು ತಿಂಗಳು ಶುಭಕರವಾಗಿರಲಿದೆ. ಹೊಸ ಕೆಲಸದಲ್ಲಿ ಫಲ ಸಿಗಲಿದೆ. ವಿದೇಶಿ ಯಾತ್ರೆಯ ಸಾಧ್ಯತೆಯಿದೆ. ಗೌರವ ಪ್ರಾಪ್ತಿಯಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...