alex Certify
ಕನ್ನಡ ದುನಿಯಾ       Mobile App
       

Kannada Duniya

ಧನ ತ್ರಯೋದಶಿಯಂದು ಬಂಗಾರ ಖರೀದಿಗೆ ಇದು ಶುಭ ಗಳಿಗೆ

ಈ ವರ್ಷ ಅಕ್ಟೋಬರ್ 17 ರಂದು ಧನತೇರಸ ಹಬ್ಬ ಆಚರಿಸಲಾಗುವುದು. ಈ ದಿನ ಕೇವಲ ಧನ-ಸಂಪತ್ತಿ ಮಾತ್ರ ಪ್ರಾಪ್ತಿಯಾಗುವುದಿಲ್ಲ, ಆರೋಗ್ಯ-ಸೌಭಾಗ್ಯ ಪ್ರಾಪ್ತಿಗೂ ಇದು ಒಳ್ಳೆ ದಿನ. ಕಾರ್ತಿಕ ಕೃಷ್ಣ ಚತುರ್ದಶಿಯಂದು ಗ್ರಹ ಹಾಗೂ ನಕ್ಷತ್ರಗಳ ಅದ್ಭುತ ಸಂಯೋಗವಾಗುತ್ತದೆ. ಈ ವೇಳೆ ಧನತೇರಸ ಪೂಜೆ ಮಾಡಲಾಗುತ್ತದೆ.

ಪುರಾಣದಲ್ಲಿ ಧನತೇರಸ ಹಬ್ಬಕ್ಕೆ ಬಹಳ ಮಹತ್ವ ನೀಡಲಾಗಿದೆ. ಇದನ್ನು ಧನ ತ್ರಯೋದಶಿ ಎಂದೂ ಕರೆಯಲಾಗುತ್ತದೆ. ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ಧನತೇರಸ ಹಬ್ಬವನ್ನು ಆಚರಿಸಲಾಗುತ್ತದೆ. ಅಂದ್ರೆ ದೀಪಾವಳಿಗೆ ಎರಡು ದಿನ ಮೊದಲು ಈ ಹಬ್ಬ ಬರುತ್ತದೆ.

ಈ ದಿನ ಮೊದಲು ತಲೆ, ಮೈಗೆ ಎಣ್ಣೆ ಹಚ್ಚಿ, ಎಣ್ಣೆ ಸ್ನಾನ ಮಾಡಬೇಕು. ನಂತ್ರ ಕೆಂಪು ಅಥವಾ ಗುಲಾಬಿ ಬಣ್ಣದ ಬಟ್ಟೆ ಧರಿಸಬೇಕು. ಗಣೇಶ-ಲಕ್ಷ್ಮಿ ಹಾಗೂ ಕುಬೇರನ ಪೂಜೆ ಮಾಡಬೇಕು. ಗಣೇಶ ವಿಘ್ನಗಳನ್ನು ನಾಶ ಮಾಡ್ತಾನೆ. ಲಕ್ಷ್ಮಿ ಧನಾಭಿವೃದ್ಧಿ ಮಾಡ್ತಾಳೆ. ಕುಬೇರ ಧನ ಹರಿದು ಹೋಗೋದನ್ನು ತಡೆಯುತ್ತಾನೆ. ಹಾಗಾಗಿ ಈ ಮೂವರ ಪೂಜೆ ಮಾಡಬೇಕಾಗುತ್ತದೆ.

ಕಮಲದ ಹೂ, ಗುಲಾಬಿ ಹೂವಿನ ಮಾಲೆ, ತೆಂಗಿನಕಾಯಿ, ಬರ್ಫಿ, ಬಾಳೆಹಣ್ಣನ್ನು ಅರ್ಪಿಸಿ. ಧೂಪ ಬೆಳಗಿ, ತುಪ್ಪದ ದೀಪ ಹಚ್ಚಿ. ಧನ್ವಂತರಿ ದೇವಿ ಸಮುದ್ರ ಮಂಥನದ ವೇಳೆ ಬಂದಿದ್ದಾಳೆಂಬ ನಂಬಿಕೆಯಿದೆ. ಆಕೆ ಪೂಜೆಯಿಂದ ಆಯಸ್ಸು, ಆರೋಗ್ಯ, ಸಂಪತ್ತು, ಸಂತೋಷವನ್ನು ನೀಡ್ತಾಳೆ. ಹಾಲು, ಮೊಸರು, ಸಕ್ಕರೆ, ಜೇನುತುಪ್ಪ, ತುಪ್ಪವನ್ನು ಹಾಕಿ ಪಂಚಾಮೃತ ಮಾಡಿ ತಾಯಿಗೆ ಅರ್ಪಿಸಬೇಕು. ಸೇಬು, ಬರ್ಫಿ ನೈವೇದ್ಯ ಮಾಡಿ, ಚಂದನದ ಧೂಪ ಬೆಳಗಿ ತುಪ್ಪದ ದೀಪ ಹಚ್ಚಿ.

ಧನತೇರಸ ದಿನ ಬಂಗಾರ, ಬೆಳ್ಳಿ ಸೇರಿದಂತೆ ವಸ್ತುಗಳ ಖರೀದಿಗೆ ಸಂಜೆ 7.19ರಿಂದ 8.17ರವರೆಗೆ ಶುಭ ಮುಹೂರ್ತವಿದೆ. ಈ ಬಾರಿ ಮಂಗಳವಾರ ಬಂದಿರುವುದ್ರಿಂದ ಬಂಗಾರ ಹಾಗೂ ತಾಮ್ರ ಖರೀದಿ ಮಾಡಿದ್ರೆ ಶುಭ ಪ್ರಾಪ್ತಿಯಾಗುತ್ತದೆ. ಈ ದಿನ ದೀಪ ದಾನಕ್ಕೂ ಮಹತ್ವವಿದೆ. ಮಂಗಳವಾರ ಸಂಜೆ ದೀಪದಾನ ಮಾಡಿ. ಮನೆಯ ಮುಖ್ಯ ದ್ವಾರದ ಮುಂದೆ ತುಪ್ಪದ ದೀಪವನ್ನು ಹಚ್ಚಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...