alex Certify
ಕನ್ನಡ ದುನಿಯಾ       Mobile App
       

Kannada Duniya

ಪಿತೃ ಪಕ್ಷದಲ್ಲಿ ಯಾವ ತಿಥಿಯಂದು ಯಾರ ಶ್ರಾದ್ಧ

ಭಾದ್ರಪದ ಶುಕ್ಲ ಪಕ್ಷದ ಹುಣ್ಣಿಮೆಯೊಂದಿಗೆ ಪಿತೃಪಕ್ಷ ಶುರುವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಮ್ಮ ಪೂರ್ವಿಕರು 16 ದಿನಗಳ ಕಾಲ ನಮ್ಮ ಮನೆಯಲ್ಲಿ ನೆಲೆಸುತ್ತಾರಂತೆ. ಈ ವೇಳೆ ಶ್ರಾದ್ಧ, ಕರ್ಮಗಳನ್ನು ಮಾಡಿದ್ರೆ ಅವರು ಪ್ರಸನ್ನರಾಗ್ತಾರೆ. ಶ್ರಾದ್ಧವನ್ನು ಮನಸ್ಸಿಗೆ ತೋಚಿದಂತೆ ಮಾಡಬಾರದು. ವಿಧಿ-ವಿಧಾನದ ಮೂಲಕ ಹಿರಿಯರು ಮಾಡಿಕೊಂಡು ಬಂದ ಪದ್ಧತಿಯಲ್ಲಿಯೇ ಮಾಡಬೇಕು. ಬ್ರಾಹ್ಮಣರಿಗೆ ದಾನ ಮಾಡುವುದು ಶುಭ ಫಲ ನೀಡುತ್ತದೆ.

ನಾಯಿ ಹಾಗೂ ಕಾಗೆಗೆ ಆಹಾರ ನೀಡಲಾಗುತ್ತದೆ. ಶ್ರಾದ್ಧಕ್ಕೆ ಬೇರೆ ಬೇರೆ ತಿಥಿಗಳಿವೆ. ಎಲ್ಲರ ತಿಥಿಯನ್ನು ಒಂದೇ ದಿನ ಮಾಡಲು ಸಾಧ್ಯವಿಲ್ಲ. ಬೇರೆ ಬೇರೆ ದಿನ ಬೇರೆ ಬೇರೆ ಪೂರ್ವಜರ ತಿಥಿ ಮಾಡಬೇಕು.

ಸೆಪ್ಟೆಂಬರ್ 25 ರಂದು ಅಜ್ಜ-ಅಜ್ಜಿಯ ಶ್ರಾದ್ಧ ಮಾಡಬೇಕು. ಅಜ್ಜ-ಅಜ್ಜಿ ಸಾವನ್ನಪ್ಪಿದ ದಿನಾಂಕ, ತಿಥಿ ಗೊತ್ತಿಲ್ಲದೆ ಹೋದವರು ಈ ದಿನ ಶ್ರಾದ್ಧ ಮಾಡುವುದು ಒಳ್ಳೆಯದು. ಈ ದಿನ ಅಜ್ಜ-ಅಜ್ಜಿ ತಿಥಿ ಮಾಡಿದ್ರೆ ಆತ್ಮಕ್ಕೆ ಶಾಂತಿ ಸಿಗಲಿದೆ.

ಸೆಪ್ಟೆಂಬರ್ 28 ರಂದು ಚತುರ್ಥಿ. ಈ ದಿನ ಆತ್ಮಹತ್ಯೆ ಮಾಡಿಕೊಂಡವರ ಶ್ರಾದ್ಧ ಮಾಡಬೇಕು. ಕೊಲೆಯಾದವರ ಅಥವಾ ಅಪಘಾತದಲ್ಲಿ ಸಾವನ್ನಪ್ಪಿದವರ ತಿಥಿಯನ್ನು ಅಂದು ಮಾಡಬೇಕು.

ಸೆಪ್ಟೆಂಬರ್ 29 ಪಂಚಮಿಯಂದು ಸಹಜವಾಗಿ ಸಾವನ್ನಪ್ಪಿರುವ ಅವಿವಾಹಿತರ ಶ್ರಾದ್ಧ ಮಾಡಬೇಕು. ಅಪಘಾತದಲ್ಲಿ ಸಾವನ್ನಪ್ಪಿದ್ದ ಶ್ರಾದ್ಧವನ್ನು ಕೂಡ ಅಂದು ಮಾಡಬಹುದು.

ಅಕ್ಟೋಬರ್ ಎರಡು ಅಷ್ಠಮಿಯಾಗಿದ್ದು, ಅಂದು ಮೃತ ತಂದೆಯ ಶ್ರಾದ್ಧವನ್ನು ಮಾಡಬೇಕು.

ಅಕ್ಟೋಬರ್ 3 ನವಮಿಯಂದು ಮೃತ ತಾಯಿಯ ತಿಥಿಯನ್ನು ಮಾಡುವುದು ಒಳ್ಳೆಯದು. ಯಾವುದೇ ಮಹಿಳೆ ಶ್ರಾದ್ಧವನ್ನು ಈ ದಿನ ಮಾಡಬಹುದು.

ಅಕ್ಟೋಬರ್ 5 ಏಕಾದಶಿಯಂದು ಸನ್ಯಾಸತ್ವ ಸ್ವೀಕರಿಸಿ ಸಾವನ್ನಪ್ಪಿದವರ ತಿಥಿ ಮಾಡಬಹುದು. ಅಕ್ಟೋಬರ್ 6 ರಂದು ದ್ವಾದಶಿಯಾಗಿದ್ದು, ಅಂದೂ ಕೂಡ ಸನ್ಯಾಸಿ ತಿಥಿಯನ್ನು ಮಾಡಬಹುದಾಗಿದೆ.

ಅಕ್ಟೋಬರ್ 7 ರಂದು ತ್ರಯೋದಶಿ ಹಾಗೂ ಚತುರ್ದಶಿಯಾಗಿದ್ದು, ಆ ದಿನ ಅಕಾಲ ಮೃತ್ಯವಿಗೊಳಗಾದ ಮನೆಯ ಯಾವುದೇ ಸದಸ್ಯನ ಶ್ರಾದ್ಧ ಮಾಡಬಹುದು.

ಅಕ್ಟೋಬರ್ 8ರಂದು ಅಮವಾಸ್ಯೆಯಾಗಿದ್ದು,ಮೃತಪಟ್ಟ ಎಲ್ಲರ ಶ್ರಾದ್ಧವನ್ನು ಮಾಡಬಹುದು.ಸೂಕ್ತ ತಿಥಿಯಂದು ಪೂರ್ವಜರ ಶ್ರಾದ್ಧ ಮಾಡಲು ಸಾಧ್ಯವಾಗದವರು ಈ ದಿನ ಶ್ರಾದ್ಧ ಮಾಡಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...