alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ

ಇಂದು ನಿಮಗೆ ಆಲಸ್ಯ ಮತ್ತು ಆಯಾಸದ ಅನುಭವವಾಗುತ್ತದೆ. ಚಿಕ್ಕ ಪುಟ್ಟ ವಿಷಯಕ್ಕೆಲ್ಲಾ ಕೋಪ ಮಾಡಿಕೊಳ್ಳುತ್ತೀರಿ. ಚರ್ಚೆ ಮತ್ತು ವಿವಾದದಿಂದ ದೂರವೇ ಇರಿ.

ವೃಷಭ

ಶಾರೀರಿಕ ಮತ್ತು ಮಾನಸಿಕವಾಗಿ ಅಸ್ವಸ್ಥತೆಯ ಅನುಭವವಾಗಲಿದೆ. ಯಾವುದೇ ಹೊಸ ಕಾರ್ಯವನ್ನು ಆರಂಭಿಸಬೇಡಿ. ಊಟ-ತಿಂಡಿ ಬಗ್ಗೆ ವಿಶೇಷ ಗಮನವಿರಲಿ.

ಮಿಥುನ

ಇಂದು ಮನರಂಜನೆ ಮತ್ತು ಮೋಜು-ಮಸ್ತಿಯಲ್ಲಿ ತೊಡಗಿಕೊಳ್ಳಲಿದ್ದೀರಿ. ಸ್ನೇಹಿತರು ಮತ್ತು ಕುಟುಂಬಸ್ಥರೊಂದಿಗೆ ಆನಂದವಾಗಿ ಕಾಲ ಕಳೆಯಲಿದ್ದೀರಿ. ಸಾಮಾಜಿಕವಾಗಿ ಗೌರವ-ಪ್ರತಿಷ್ಠೆ ದೊರೆಯಲಿದೆ.

ಕರ್ಕ

ಸರಿಯಾಗಿ ಯೋಚಿಸದೇ ಯಾವುದೇ ಕಾರ್ಯವನ್ನು ಮಾಡಬೇಡಿ. ಆತ್ಮೀಯರನ್ನು ಭೇಟಿಯಾಗಲಿದ್ದೀರಿ. ಅವರೊಂದಿಗೆ ಪ್ರೇಮಪೂರ್ವಕವಾಗಿ ವ್ಯವಹರಿಸಿ.

ಸಿಂಹ

ಕೋಪವನ್ನು ನಿಯಂತ್ರಿಸಿಕೊಳ್ಳಿ, ಮೃದುವಾಗಿ ವ್ಯವಹರಿಸಿ. ಮಾತಿನ ಮೇಲೆ ನಿಯಂತ್ರಣವಿರಲಿ. ಲಾಭಕಾರಕ ವಿಷಯಗಳ ಬಗ್ಗೆ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ.

ಕನ್ಯಾ

ದಿನದ ಆರಂಭದಲ್ಲೇ ಚಿಂತೆ ಮತ್ತು ಉದ್ವೇಗ ಉಂಟಾಗುತ್ತದೆ. ಇದು ನಿಮ್ಮ ಆರೋಗ್ಯದ ಮೇಲೂ ಪ್ರಭಾವ ಬೀರಬಹುದು. ಇಂದು ಹೊಸ ಕಾರ್ಯ ಆರಂಭಿಸಲು ದಿನ ಉತ್ತಮವಾಗಿಲ್ಲ.

ತುಲಾ

ಇಂದು ನಿಮಗೆ ಶುಭ ದಿನ. ಆತ್ಮೀಯರೊಂದಿಗೆ ಸುತ್ತಾಟಕ್ಕೆ ತೆರಳಲಿದ್ದೀರಿ, ಒಳ್ಳೆ ಭೋಜನ ಸವಿಯುವ ಅವಕಾಶ ಸಿಗಲಿದೆ. ಸಂಗಾತಿಯೊಂದಿಗೆ ಮಧುರ ಸಂಬಂಧ ಹೊಂದಲಿದ್ದೀರಿ.

ವೃಶ್ಚಿಕ

ಇಂದು ನಿಮಗೆ ಶುಭ ಫಲವಿದೆ. ಶಾರೀರಿಕ ಮತ್ತು ಮಾನಸಿಕವಾಗಿ ಪ್ರಸನ್ನರಾಗಿರುತ್ತೀರಿ. ಕುಟುಂಬದವರೊಂದಿಗೆ ಖುಷಿಯಾಗಿ ಕಾಲ ಕಳೆಯುತ್ತೀರಿ. ಸ್ನೇಹಿತರಿಂದ ಉಪಹಾರ ದೊರೆಯಲಿದೆ.

ಧನು

ನಿಮ್ಮ ಎಲ್ಲಾ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುತ್ತವೆ. ಗೌರವ-ಪ್ರತಿಷ್ಠೆ ವೃದ್ಧಿಸಲಿದೆ. ಉದ್ಯೋಗದಲ್ಲಿ ಪ್ರಗತಿಯಾಗಲಿದೆ. ಹಿರಿಯ ಅಧಿಕಾರಿಗಳಿಂದ ಲಾಭವಿದೆ.

ಮಕರ

ಇಂದು ಆರೋಗ್ಯದಿಂದಿರುತ್ತೀರಿ, ಮನಸ್ಸು ಉಲ್ಲಾಸಮಯವಾಗಿರುತ್ತದೆ. ನೆರೆಹೊರೆಯವರು ಮತ್ತು ಒಡಹುಟ್ಟಿದವರೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ.

ಕುಂಭ

ವ್ಯಾಪಾರದಲ್ಲಿ ಪಾಲುದಾರಿಕೆಯಿಂದ ಲಾಭವಾಗಲಿದೆ. ಸ್ನೇಹಿತರೊಂದಿಗೆ ಸುತ್ತಾಡಲು ತೆರಳಲಿದ್ದೀರಿ. ಮಧ್ಯಾಹ್ನದ ನಂತರ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ.

ಮೀನ

ಸುಖಮಯ ಅನುಭವ ಮತ್ತು ಸೌಭಾಗ್ಯ ಪ್ರಾಪ್ತಿಯಾಗಲಿದೆ. ಆರ್ಥಿಕ, ಸಾಮಾಜಿಕ ಮತ್ತು ಕೌಟುಂಬಿಕ ದೃಷ್ಟಿಯಿಂದ ಲಾಭವಾಗಲಿದೆ. ಗೃಹಸ್ಥ ಜೀವನ ಆನಂದಮಯವಾಗಿರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...