alex Certify
ಕನ್ನಡ ದುನಿಯಾ       Mobile App
       

Kannada Duniya

ಹಿಂದೂ ಧರ್ಮದಲ್ಲೊಂದೇ ಅಲ್ಲ ಬೇರೆ ಧರ್ಮದಲ್ಲೂ 9ಕ್ಕಿದೆ ಮಹತ್ವ

9-88_29_03_2017-1

ಹಿಂದು ಧರ್ಮದಲ್ಲಿ 9ರ ಅಂಕೆಗೆ ಮಹತ್ವದ ಸ್ಥಾನವಿದೆ. ಒಂಭತ್ತು ದಿನಗಳ ಕಾಲ ದೇವರ ಆರಾಧನೆ ನಡೆಯುತ್ತದೆ. ಹಾಗೆ ಬೇರೆ ಧರ್ಮಗಳಲ್ಲಿ ಕೂಡ 9ನ್ನು ಪೂಜ್ಯ ಭಾವದಿಂದ ನೋಡಲಾಗುತ್ತದೆ.

ಚೀನಾದಲ್ಲಿ ಒಂಭತ್ತನ್ನು ಡ್ರ್ಯಾಗನ್ ಗೆ ಹೋಲಿಸಲಾಗಿದೆ. ಮಾಂತ್ರಿಕ ಶಕ್ತಿಯ ಪ್ರತೀಕವೆಂದು ಪರಿಗಣಿಸಲಾಗಿದೆ. ಡ್ರ್ಯಾಗನನ್ನು ಒಂಭತ್ತು ರೂಪ, ಒಂಭತ್ತು ಗುಣ ಹಾಗೂ ಒಂಭತ್ತು ಸಂತಾನವೆಂದು ಪರಿಗಣಿಸಲಾಗಿದೆ. ಒಟ್ಟಾರೆ ಚೀನಾದಲ್ಲಿ ಒಂಭತ್ತನ್ನು ಶುಭವೆಂದು ನಂಬಲಾಗಿದೆ.

ವಿಚಿತ್ರವೆಂದ್ರೆ ಜಪಾನಿನಲ್ಲಿ ಒಂಭತ್ತು ಅಶುಭ.

ಇನ್ನು ಸ್ಕ್ಯಾಂಡಿನೇವಿಯನ್ ಕೂಡ 9ನ್ನು ನಂಬುತ್ತಾರೆ. ಬ್ರಹ್ಮಾಂಡದಲ್ಲಿ ಒಂಭತ್ತು ಲೋಕವಿದೆ ಎಂದು ಪ್ರಾಚೀನ ಸ್ಕ್ಯಾಂಡಿನೇವಿಯನ್ ದಂತಕಥೆಯಲ್ಲಿ ಹೇಳಲಾಗಿದೆ. ಈ ದೇಶದಲ್ಲಿ ಮಗು ಹುಟ್ಟಿ 9ನೇ ದಿನಕ್ಕೆ ನಾಮಕರಣ ಮಾಡಲಾಗುತ್ತದೆ.

ಸ್ವೀಡನ್ ನ ಉಪ್ಪಸಲ ಮಂದಿರದಲ್ಲಿ 9 ವರ್ಷಗಳಿಗೊಮ್ಮೆ ಭವ್ಯ ಬಲಿ ಉತ್ಸವ ನಡೆಯುತ್ತದೆ. ದೂರದೂರುಗಳಿಂದ ಜನ ಇಲ್ಲಿಗೆ ಬರ್ತಾರೆ. ಎಲ್ಲ ಪ್ರಾಣಿಗಳ ಬಲಿ ನಡೆಯುತ್ತದೆ. 9 ದಿನಗಳ ಕಾಲ ಔತಣ ಕೂಟ ಏರ್ಪಡಿಸಲಾಗುತ್ತದೆ.

ಗ್ರೀಸ್ ಹಾಗೂ ರೋಮ್ ನಲ್ಲಿ ಕುಟುಂಬಸ್ಥರು ಸಾವನ್ನಪ್ಪಿದ 9 ದಿನ ಶೋಕಾಚರಣೆ ಮಾಡಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...