alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವರ್ಷ ಕೇವಲ 9 ದಿನ ಮಾತ್ರ ಮದುವೆಗಿದೆ ಶುಭ ಮುಹೂರ್ತ

ದೀಪಾವಳಿ ನಂತ್ರ ನವೆಂಬರ್ 19ರಿಂದ ಶುಭ ಮುಹೂರ್ತ ಮತ್ತೆ ಶುರುವಾಗಲಿದೆ. ಡಿಸೆಂಬರ್ 9ರವರೆಗೆ ಕೇವಲ 9 ಶುಭ ಮುಹೂರ್ತಗಳು ಮಾತ್ರ ಇವೆ. ಎರಡು ತಿಂಗಳಲ್ಲಿ ಮದುವೆಗೆ 9 ದಿನಗಳು ಮಾತ್ರ ಶುಭಕರವಾಗಿವೆ.

ಇದ್ರಲ್ಲಿ ಡಿಸೆಂಬರ್ 3 ಬಹಳ ಶುಭವೆಂದು ಪರಿಗಣಿಸಲಾಗಿದೆ. ಈ ದಿನ ಅತಿ ಹೆಚ್ಚು ಮದುವೆ ನಡೆಯಲಿದೆ. ಹಿಂದೂ ಧರ್ಮದಲ್ಲಿ ತುಳಸಿ ಹಾಗೂ ಸಾಲಿಗ್ರಾಮದ ಮದುವೆ ಮೊದಲು ನಡೆಯುತ್ತದೆ. ಅದ್ರ ನಂತ್ರ ಮದುವೆಗಳು ಆರಂಭವಾಗುತ್ತವೆ. ಪಂಡಿತರ ಪ್ರಕಾರ ಈ ಎರಡು ತಿಂಗಳಲ್ಲಿ 9 ದಿನ ಮಾತ್ರ ಮದುವೆಗೆ ಮುಹೂರ್ತವಿದ್ದು ನವೆಂಬರ್ 19, 20, 24, 28, 29, 30 ಹಾಗೂ ಡಿಸೆಂಬರ್ 3, 4, 6 ರಂದು ಮಾತ್ರ ಮದುವೆಗೆ ಶುಭ ದಿನವಿದೆ.

ನವೆಂಬರ್ ತಿಂಗಳಿನಲ್ಲಿ 24, 29 ಹಾಗೂ ಡಿಸೆಂಬರ್ ತಿಂಗಳಲ್ಲಿ ದಿನಾಂಕ 3 ಬಹಳ ಶುಭಕರವಾಗಿದೆ. ಈ ದಿನ ಅತಿ ಹೆಚ್ಚು ಮದುವೆಗಳು ನಡೆಯಲಿವೆ. ಡಿಸೆಂಬರ್ 10ರಿಂದ ಫೆಬ್ರವರಿ 7ರವರೆಗೆ ಯಾವುದೇ ಮುಹೂರ್ತವಿಲ್ಲ. ಹಾಗಾಗಿ ಹೊಸ ವರ್ಷಾರಂಭ ಜನವರಿಯಲ್ಲಿ ಯಾವುದೇ ಮದುವೆಗಳು ನಡೆಯುವುದಿಲ್ಲ. 2018ರಲ್ಲಿ ಫೆಬ್ರವರಿ 8ರಿಂದ ಶುರುವಾಗುವ ಮದುವೆ ಮುಹೂರ್ತಗಳು ಮಾರ್ಚ್ 13ರವರೆಗಿರಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...