alex Certify
ಕನ್ನಡ ದುನಿಯಾ       Mobile App
       

Kannada Duniya

ಮೌನಿ ಅಮವಾಸ್ಯೆಯಂದು ಈ ಕೆಲಸ ಮಾಡಿದ್ರೆ ಒಳಿತು ನಿಶ್ಚಿತ

download

ಜನವರಿ 27 ಶುಕ್ರವಾರ ಮೌನಿ ಅಮವಾಸ್ಯೆ. ಮೋಕ್ಷ ಪ್ರಾಪ್ತಿ, ಪಿತೃ ಶಾಂತಿ, ಅಚಲ ಲಕ್ಷ್ಮಿ ಪ್ರಾಪ್ತಿಗೆ ಇದು ಒಳ್ಳೆಯ ದಿನ. ಧರ್ಮ ಗ್ರಂಥದಲ್ಲಿ ಹುಣ್ಣಿಮೆ ಹಾಗೂ ಅಮವಾಸ್ಯೆಗೆ ಬಹಳ ಮಹತ್ವದ ಸ್ಥಾನವಿದೆ. ಈ ದಿನ ಮಾಡಿದ ಕೆಲಸಗಳಿಗೆ ಬಹುಬೇಗ ಫಲ ಸಿಗುತ್ತದೆ ಎಂದು ನಂಬಲಾಗಿದೆ. ಪದ್ಮಪುರಾಣದ ಪ್ರಕಾರ, ಮಾಘ ಮಾಸದಲ್ಲಿ ಪವಿತ್ರ ನದಿಯಲ್ಲಿ ಸ್ನಾನ ಮಾಡಿದಾಗ ಸಂತೋಷಗೊಳ್ಳುವಷ್ಟು ಶ್ರೀಹರಿ ಯಾವುದೇ ಜಪ-ಪ್ರಾರ್ಥನೆ ಮಾಡಿದಾಗಲೂ ಇಷ್ಟು ಸಂತೋಷಗೊಳ್ಳುವುದಿಲ್ಲ.

ದೇವರನ್ನು ಒಲಿಸಿಕೊಳ್ಳಲು ಬಯಸುವ ವ್ಯಕ್ತಿ ಮಾಘ ಮಾಸದಲ್ಲಿ ಪ್ರತಿದಿನ ನದಿಯಲ್ಲಿ ಸ್ನಾನ ಮಾಡಬೇಕು. ಅದ್ರಲ್ಲೂ ಮೌನಿ ಅಮವಾಸ್ಯೆಯಂದು ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಬೇಕು. ಮೌನವಾಗಿ ಪವಿತ್ರ ನದಿಯಲ್ಲಿ ಮಿಂದೆದ್ದು ಜಪ ಮಾಡುವುದರಿಂದ ಮಾನಸಿಕ ಸಮಸ್ಯೆ, ಭಯ ದೂರವಾಗುತ್ತದೆ.

ಗೋದಿ ಹಿಟ್ಟಿಗೆ ಎಣ್ಣೆ ಬೆರೆಸಿ ರೊಟ್ಟಿ ಸಿದ್ಧಗೊಳಿಸಿ ಅದನ್ನು ಹಸುವಿಗೆ ನೀಡಿ. ಇದ್ರಿಂದ ಮನೆಯಲ್ಲಿ ಸದಾ ಸುಖ-ಶಾಂತಿ ನೆಲೆಸಿರುತ್ತದೆ.

ಲಕ್ಷ್ಮಿ ಹಾಗೂ ಶಿವನ ಕುಟುಂಬಕ್ಕೆ ಅಕ್ಕಿಯಿಂದ ಮಾಡಿದ ಪಾಯಸವನ್ನು ಅರ್ಪಿಸಿ.

ದಾನಕ್ಕೂ ಈ ದಿನ ಬಹಳ ಮಹತ್ವವಿದೆ. ಮುಕ್ತಿ ಹಾಗೂ ಮೋಕ್ಷಕ್ಕಾಗಿ ಗೋ ದಾನ ಮಾಡಬೇಕು. ಆರ್ಥಿಕ ಸಮೃದ್ಧಿಗಾಗಿ ಭೂಮಿಯನ್ನು ದಾನ ಮಾಡಿ. ರೋಗದಿಂದ ಮುಕ್ತಿಹೊಂದಲು ಬಂಗಾರವನ್ನು ದಾನ ಮಾಡಿ. ಕುಟುಂಬದ ಒಳಿತಿಗಾಗಿ ಪಾತ್ರೆ ಸಮೇತ ತುಪ್ಪವನ್ನು ದಾನ ಮಾಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...