alex Certify ಈ ʼರಾಶಿʼ ಯವರಿಗೆ ಶುಭ ತರಲಿದೆ ಹೊಸ ವರ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ʼರಾಶಿʼ ಯವರಿಗೆ ಶುಭ ತರಲಿದೆ ಹೊಸ ವರ್ಷ

ಹೊಸ ವರ್ಷಕ್ಕೆ ಇನ್ನೊಂದೇ ತಿಂಗಳು ಬಾಕಿ ಇದೆ. 2024 ಹೇಗಿರಲಿದೆ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೊಸ ವರ್ಷದ ಆರಂಭ ತುಂಬಾ ವಿಶೇಷವಾಗಿರಲಿದೆ. ಈ ಬಾರಿ ಸೂರ್ಯ, ಬುಧ, ಶುಕ್ರ, ಶನಿ ಮತ್ತು ಮಂಗಳ ತಮ್ಮ ರಾಶಿಯನ್ನು ಬದಲಿಸಲಿದ್ದಾರೆ. ಇದರ ಜೊತೆಗೆ ಗಜಕೇಸರಿ ಯೋಗ ಹಾಗೂ ಗಜಲಕ್ಷ್ಮಿ ಯೋಗ ಕೂಡಿಬರಲಿದೆ. ಇದಲ್ಲದೆ ಕೆಲ ರಾಶಿಯವರ ಅದೃಷ್ಟ ಬದಲಾಗಲಿದೆ.

ಮಿಥುನ ರಾಶಿ : 2024 ಮಿಥುನ ರಾಶಿಯವರಿಗೆ ಮಂಗಳಕರವಾಗಿರಲಿದೆ. ಹೊಸ ವರ್ಷದಲ್ಲಿ ಅವರಿಗೆ ಧನಲಾಭವಾಗಲಿದೆ. ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಗೌರವ ಹೆಚ್ಚಾಗಲಿದೆ. ಎಲ್ಲ ನಿಂತ ಕೆಲಸಗಳು ಮತ್ತೆ ಶುರುವಾಗಲಿವೆ. ಹೊಸ ವ್ಯವಹಾರ ಶುರು ಮಾಡಲು ಇದು ಒಳ್ಳೆಯ ಅವಕಾಶವಾಗಿದೆ.

ಸಿಂಹ : ಸಿಂಹ ರಾಶಿಯವರಿಗೂ ಹೊಸ ವರ್ಷ ಸಾಕಷ್ಟು ವಿಶೇಷತೆಯಿಂದ ಕೂಡಿರಲಿದೆ. ನೌಕರಿಯಲ್ಲಿ ಉನ್ನತ ಹುದ್ದೆ ಪ್ರಾಪ್ತಿಯಾಗಲಿದೆ. ವ್ಯಾಪಾರಸ್ಥರಿಗೆ ಭರ್ಜರಿ ಲಾಭವಾಗಲಿದೆ. ದಾಂಪತ್ಯ ಜೀವನದಲ್ಲಿ ಪ್ರೀತಿ ಹೆಚ್ಚಾಗಲಿದೆ.

ತುಲಾ : ಹೊಸ ವರ್ಷ ತುಲಾ ರಾಶಿಯವರಿಗೂ ಸಂತೋಷ ತರಲಿದೆ. ಆತ್ಮವಿಶ್ವಾಸದಲ್ಲಿ ಹೆಚ್ಚಳ ಕಂಡು ಬರಲಿದೆ. ವ್ಯವಹಾರದಲ್ಲಿ ಲಾಭವಾಗಲಿದೆ. ಕೆಲಸದ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ನೆರವು ಸಿಗಲಿದೆ.

ಕುಂಭ : ಕುಂಭ ರಾಶಿಯವರ ಅದೃಷ್ಟ ಹೊಸ ವರ್ಷದಲ್ಲಿ ಬದಲಾಗಲಿದೆ. ಸಾಲ ನೀಡಿದ ಹಣ ವಾಪಸ್‌ ಆಗಲಿದೆ. ವಿದೇಶ ಪ್ರಯಾಣದ ಯೋಗವಿದೆ. ಹೊಸ ಜನರ ಭೇಟಿಯಿಂದ ಲಾಭವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...