alex Certify
ಕನ್ನಡ ದುನಿಯಾ       Mobile App
       

Kannada Duniya

ದೇವಾನುದೇವತೆಗಳ ಪೂಜೆ ವೇಳೆ ಮರೆತೂ ಈ ವಸ್ತುಗಳನ್ನು ಬಳಸಬೇಡಿ

ಪ್ರತಿದಿನ ದೇವರಿಗೆ ಭಯ-ಭಕ್ತಿಯಿಂದ ಪೂಜೆ ಮಾಡಿದ್ರೆ ದೇವಾನುದೇವತೆಗಳು ಕೃಪೆ ತೋರುವುದಿಲ್ಲ. ಪೂಜೆ ಮಾಡುವ ಸಾಮಗ್ರಿಗಳು ಹಾಗೂ ಪೂಜಾ ವಿಧಾನ ಕೂಡ ಸರಿಯಾಗಿರಬೇಕು. ಪೂಜೆ ಮಾಡುವ ವೇಳೆ ಅಶುದ್ಧ ಸಾಮಗ್ರಿಗಳನ್ನು ಬಳಸಿದ್ರೆ ದೇವಾನುದೇವತೆಗಳು ಕೋಪಗೊಳ್ಳುತ್ತಾರೆ.

ಸಕಾರಾತ್ಮಕ ಶಕ್ತಿ ಪ್ರವೇಶದ ಜೊತೆಗೆ ಪೂಜೆ ಫಲ ಸಿಗಬೇಕಾದಲ್ಲಿ ಶುದ್ಧ ಪೂಜಾ ಸಾಮಗ್ರಿಯನ್ನು ಬಳಸಬೇಕಾಗುತ್ತದೆ. ದೀಪ ಹಚ್ಚಬೇಕಾದ್ರೆ ಹಾಗೂ ಹೋಮ-ಹವನಗಳಿಗೆ ಶುದ್ಧ ದೇಸಿ ತುಪ್ಪವನ್ನು ಬಳಸಬೇಕು. ವನಸ್ಪತಿ ತುಪ್ಪವನ್ನು ಪೂಜೆಗೆ ಎಂದೂ ಬಳಸಬಾರದು.

ಶುದ್ಧವಾದ ಹತ್ತಿಯಿಂದ ತಯಾರಿಸಿದ ಬತ್ತಿಯನ್ನು ಮಾತ್ರ ಬಳಸಬೇಕು. ಹತ್ತಿ ಬತ್ತಿ ಶುಭವಾಗಿದ್ದು, ತುಂಬಾ ಹೊತ್ತು ದೀಪ ಉರಿಯುತ್ತದೆ. ಪೂಜೆ ಮಾಡುವವರೆಗೂ ದೀಪ ಉರಿಯುತ್ತಿರಬೇಕು. ಮನೆಯಲ್ಲಿ ಸದಾ ದೀಪ ಬೆಳಗುತ್ತಿದ್ದರೆ ಸಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಿರುತ್ತದೆ. ಇತ್ತೀಚಿಗೆ ಮಾರುಕಟ್ಟೆಯಲ್ಲಿ ಸಿಗುವ ಬತ್ತಿ ಸರಿಯಾಗಿ ಉರಿಯುವುದಿಲ್ಲ. ಪೂಜೆ ಮಧ್ಯೆ ದೀಪ ಆರಿ ಹೋಗುತ್ತದೆ. ದೀಪ ಆರಿ ಹೋದ್ರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.

ಬಿದಿರಿನಿಂದ ಮಾಡಿದ ಊದುಬತ್ತಿಯನ್ನು ಮನೆಯಲ್ಲಿ ಹಚ್ಚಬಾರದು. ಪೂಜೆ ವೇಳೆ ಇದನ್ನು ಹಚ್ಚುವುದು ಶುಭವಲ್ಲ. ಅಂತ್ಯಸಂಸ್ಕಾರದ ವೇಳೆ ಮಾತ್ರ ಬಿದಿರಿನ ಕಡ್ಡಿಇರುವ ಊದುಬತ್ತಿಯನ್ನು ಹಚ್ಚಬೇಕು.

ಹವನದಿಂದ ವಾತಾವರಣ ಶುದ್ಧವಾಗುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಹವನಕ್ಕೆ ಮಾರುಕಟ್ಟೆಯಲ್ಲಿ ಸಿಗುವ ಕಡಿಮೆ ಬೆಲೆಯ ವಸ್ತುಗಳನ್ನು ಬಳಸಲಾಗ್ತಿದೆ. ಇದ್ರಿಂದಾಗಿ ಹೋಮ-ಹವನದಿಂದ ಸಿಗುವ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತದೆ. ಹಾಗಾಗಿ ಹವನದ ವೇಳೆ ಶುದ್ಧ ವಸ್ತುಗಳನ್ನು ಬಳಸಿ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...