alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಸ್ಥಳಗಳಿಗೆ ಮರೆತೂ ಚಪ್ಪಲಿ ಧರಿಸಿ ಹೋಗಬೇಡಿ

ಹಿಂದೂ ಧರ್ಮದಲ್ಲಿ ಪೂಜೆ-ಪಾಠಕ್ಕೆ ವಿಧಿ-ವಿಧಾನಗಳನ್ನು ಹೇಳಲಾಗಿದೆ. ನಿಯಮದಂತೆ ಪೂಜೆಗಳನ್ನು ಮಾಡಿದ್ರೆ ಅನೇಕ ಸಂಕಷ್ಟಗಳಿಂದ ಮುಕ್ತಿ ಪಡೆಯಬಹುದಾಗಿದೆ. ಶಾಸ್ತ್ರದಲ್ಲಿ ಐದು ಸ್ಥಳಗಳನ್ನು ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ. ಆ ಸ್ಥಳಗಳಿಗೆ ಚಪ್ಪಲಿ, ಬೂಟ್ ಧರಿಸಿ ಹೋಗುವುದು ಅಶುಭವೆಂದು ಪರಿಗಣಿಸಲಾಗಿದೆ.

ಶಾಸ್ತ್ರದಲ್ಲಿ ಅಡುಗೆ ಮನೆಗೆ ವಿಶೇಷ ಮಹತ್ವ ನೀಡಲಾಗಿದೆ. ಅದನ್ನು ಮನೆಯ ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ. ಮನುಷ್ಯನ ಹೊಟ್ಟೆ ತುಂಬಿಸುವ ಆಹಾರ ತಯಾರಾಗುವ ಸ್ಥಳವದು. ಅಡುಗೆ ಮನೆಯನ್ನು ಅನ್ನ ದೇವಿ ವಾಸಿಸುವ ಜಾಗವೆಂದು ಪರಿಗಣಿಸಲಾಗಿದೆ. ಅಡುಗೆ ಮಾಡುವ ವೇಳೆ ಚಪ್ಪಲಿ ಧರಿಸುವುದನ್ನು ಅಶುಭವೆಂದು ನಂಬಲಾಗಿದೆ.

ಸ್ಟೋರ್ ರೂಂ ಕೂಡ ಆಹಾರಕ್ಕೆ ಸೇರಿದ ಜಾಗವಾಗಿರುತ್ತದೆ. ಈ ಸ್ಥಳದಲ್ಲಿಯೂ ಚಪ್ಪಲಿ ಧರಿಸಿ ಹೋಗಬಾರದು. ಸ್ಟೋರ್ ರೂಂಗೆ ಚಪ್ಪಲಿ ಹಾಕದೆ, ಅಲ್ಲಿನ ಸ್ವಚ್ಛತೆ ಬಗ್ಗೆ ಗಮನ ನೀಡುವ ಜನರ ಮೇಲೆ ಸದಾ ಅನ್ನಪೂರ್ಣೆ ಕೃಪೆಯಿರುತ್ತದೆ.

ದೇವಸ್ಥಾನ, ಮನೆಯ ದೇವರ ಕೋಣೆಯಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆಂದು ನಂಬಲಾಗಿದೆ. ದೇವಸ್ಥಾನಗಳ ಒಳಗೆ ಎಂದೂ ಚಪ್ಪಲಿ ಧರಿಸಿ ಹೋಗಬಾರದು. ಹಾಗೆ ಮನೆಯ ದೇವರ ಕೋಣೆಗೂ ಚಪ್ಪಲಿ ಹಾಕಿಕೊಂಡು ಹೋಗಬಾರದು.

ದೇವಸ್ಥಾನದ ಜೊತೆಗೆ ಪವಿತ್ರ ನದಿಗಳಿಗೆ ಇಳಿಯುವ ವೇಳೆ ಕೂಡ ಚಪ್ಪಲಿ ಧರಿಸುವುದು ಶಾಸ್ತ್ರಗಳ ಪ್ರಕಾರ ಅಶುಭ. ನದಿಗಳಲ್ಲಿ ದೇವಾನುದೇವತೆಗಳು ವಾಸವಾಗಿರುತ್ತಾರೆ. ಅವರನ್ನು ಚಪ್ಪಲಿಯಲ್ಲಿ ತುಳಿಯಬಾರದು ಎಂಬ ನಂಬಿಕೆಯಿದೆ.

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...