alex Certify
ಕನ್ನಡ ದುನಿಯಾ       Mobile App
       

Kannada Duniya

ದೇವರ ಮನೆಯಲ್ಲಿ ಎಂದೂ ಈ ತಪ್ಪುಗಳನ್ನು ಮಾಡಬೇಡಿ

ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ವಿಶೇಷ ಮಹತ್ವವಿದೆ. ದೇವರ ಆಶೀರ್ವಾದ ಪಡೆಯಲು ಭಕ್ತರು ದೇವಸ್ಥಾನಕ್ಕೆ ಹೋಗ್ತಾರೆ. ಜೊತೆಗೆ ಪ್ರತಿ ಮನೆಯಲ್ಲೂ ದೇವರ ಕೋಣೆಯಿರುತ್ತದೆ. ದೇವರ ಪೂಜೆ-ಆರಾಧನೆಗಳು ನಡೆಯುತ್ತವೆ. ದೇವರ ಪೂಜೆಯನ್ನು ವಿಧಿ-ವಿಧಾನದ ಮೂಲಕ ಮಾಡಲಾಗುತ್ತದೆ. ಆದ್ರೆ ಕೆಲವೊಮ್ಮೆ ನಾವು ದೇವರ ಮನೆಯಲ್ಲಿ ಮಾಡುವ ತಪ್ಪು ನಮ್ಮ ಅವನತಿಗೆ ಕಾರಣವಾಗುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ದೇವರ ಕೋಣೆಯಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಬಾರದು.

ಕೆಲವರು ಮಲಗುವ ಕೋಣೆಯನ್ನೇ ದೇವರ ಮನೆ ಮಾಡಿಕೊಳ್ತಾರೆ. ಬೆಡ್ ರೂಮಿನಲ್ಲಿಯೇ ದೇವರನ್ನಿಟ್ಟು ಪೂಜೆ ಮಾಡ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಇದು ಶುಭವಲ್ಲ. ಇದ್ರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ.

ಮನೆಯಲ್ಲಿ ದೇವರ ಮನೆ ಮಾಡುವ ಪದ್ಧತಿ ಇತ್ತೀಚಿಗೆ ಬೆಳೆದುಕೊಂಡು ಬಂದಿದೆ. ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ದೇವರ ಸ್ಥಾನ ಪ್ರತ್ಯೇಕವಾಗಿರಬೇಕು. ಆದ್ರೆ ದೇವರ ಮನೆ ಪ್ರತ್ಯೇಕವಾಗಿ ನಿರ್ಮಾಣ ಮಾಡಬಾರದು.

ದೇವರ ಮನೆಯಲ್ಲಿ ಹಳಸಿದ, ಹಳೆಯ ಹೂವನ್ನು ಇಡಬಾರದು. ಇದ್ರಿಂದ ನಕಾರಾತ್ಮಕ ಶಕ್ತಿ ಪ್ರವೇಶವಾಗುತ್ತದೆ.

ವಾಸ್ತುಶಾಸ್ತ್ರದ ಪ್ರಕಾರ ಪೂಜೆ ಮನೆ ಹಾಗೂ ಶೌಚಾಲಯದ ಗೋಡೆ ಅಂಟಿಕೊಂಡಿರಬಾರದು.

ಅಡುಗೆ ಮನೆಯಲ್ಲೂ ದೇವರ ಮನೆಯಿರಬಾರದು. ಹಾಗೆ ಮನೆ ಮೆಟ್ಟಿಲಿನ ಕೆಳಗೆ ದೇವರ ಮನೆಯನ್ನು ನಿರ್ಮಾಣ ಮಾಡಬಾರದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...