alex Certify
ಕನ್ನಡ ದುನಿಯಾ       Mobile App
       

Kannada Duniya

ನವರಾತ್ರಿಯಲ್ಲಿ ಕನ್ಯಾ ಭೋಜನದ ಮಹತ್ವವೇನು…?

pm-20-1

ಭವಿಷ್ಯ ಪುರಾಣ ಹಾಗೂ ದೇವಿ ಭಗವತಿ ಪುರಾಣದಲ್ಲಿ ಕನ್ಯಾ ಪೂಜೆಗೆ ಮಹತ್ವದ ಸ್ಥಾನವಿದೆ. ಕನ್ಯಾ ಭೋಜನದ ವಿನಃ ನವರಾತ್ರಿ ಪೂರ್ಣಗೊಳ್ಳುವುದಿಲ್ಲ. ಕನ್ಯೆಯ ಪೂಜೆಯನ್ನು ಜನರು ನವರಾತ್ರಿಯ ಯಾವುದೇ ದಿನವಾದ್ರೂ ಮಾಡಬಹುದು. ಆದ್ರೆ ನವರಾತ್ರಿಯ ಕೊನೆಯ ಎರಡು ದಿನ ಕನ್ಯಾ ಪೂಜೆ ಮಾಡಿದ್ರೆ ಶ್ರೇಷ್ಠ ಎನ್ನುತ್ತದೆ ಪುರಾಣ.

ಎರಡರಿಂದ 10 ವರ್ಷದ ಮಕ್ಕಳು ಕನ್ಯಾ ಪೂಜೆಗೆ ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಒಂಭತ್ತು ಕನ್ಯೆಯರಿಗೆ ಪೂಜೆ ಮಾಡಿ ಭೋಜನ ಬಡಿಸುವುದು ಒಳ್ಳೆಯದು. ಆದ್ರೆ ಅನುಕೂಲಕ್ಕೆ ತಕ್ಕಂತೆ ಹೆಚ್ಚಿನ ಸಂಖ್ಯೆಯಲ್ಲಿಯೂ ಕನ್ಯಾ ಪೂಜೆ ಮಾಡಬಹುದಾಗಿದೆ. ಒಂಭತ್ತು ಬಾಲಕಿಯರನ್ನು ದುರ್ಗೆಯೆಂದು ಪರಿಗಣಿಸಿ ಪೂಜೆ ಮಾಡಲಾಗುತ್ತದೆ.

ಕನ್ಯೆಯರ ವಯಸ್ಸಿಗೆ ತಕ್ಕಂತೆ ಅವರಿಗೆ ಹೆಸರನ್ನೂ ಇಡಲಾಗುತ್ತದೆ. ಎರಡು ವರ್ಷದ ಕನ್ಯೆಗೆ ಕನ್ಯಾ ಕುಮಾರಿ, ಮೂರು ವರ್ಷದ ಬಾಲಕಿಗೆ ತ್ರಿಮೂತ್ರಿ, ನಾಲ್ಕನೇ ವರ್ಷದ ಕನ್ಯೆಗೆ ಕಲ್ಯಾಣಿ, ಐದು ವರ್ಷದ ಬಾಲಕಿಗೆ ರೋಹಿಣಿ, ಆರನೇ ವರ್ಷದ ಕನ್ಯೆಗೆ ಕಾಳಿಕಾ, ಏಳನೇ ವರ್ಷದ ಬಾಲಕಿಗೆ ಚಂಡಿಕಾ, 8ನೇ ವರ್ಷದ ಕನ್ಯೆಗೆ ಶಾಂಭವಿ ಹಾಗೂ ಒಂಭತ್ತನೇ ವರ್ಷದ ಕನ್ಯೆಗೆ ದುರ್ಗಿ ಹಾಗೂ 10 ನೇ ವರ್ಷದ ಕನ್ಯೆಗೆ ಸುಭದ್ರಾ ಎಂದು ಕರೆಯಲಾಗುತ್ತದೆ. ಹಾಗಾಗಿಯೇ ಕನ್ಯಾ ಪೂಜೆ ಹಾಗೂ ಕನ್ಯಾ ಭೋಜನಕ್ಕೆ 10 ವರ್ಷದೊಳಗಿನ ಬಾಲಕಿಯರನ್ನು ಆಯ್ಕೆ ಮಾಡಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...