alex Certify
ಕನ್ನಡ ದುನಿಯಾ       Mobile App
       

Kannada Duniya

ನರಕ ಚತುರ್ದಶಿಯ ಈ ಶುಭ ಮುಹೂರ್ತದಲ್ಲಿ ಮಾಡಿ ಅಭ್ಯಂಗ ಸ್ನಾನ

ಆಶ್ವಯುಜ ಕೃಷ್ಣ ಚತುರ್ದಶಿಯಂದು ನರಕ ಚತುರ್ದಶಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಅಕ್ಟೋಬರ್ 18 ರಂದು ನರಕ ಚತುರ್ದಶಿ ಬಂದಿದೆ. ಈ ದಿನ ಯಾವ ವ್ಯಕ್ತಿ ಸೂರ್ಯೋದಯಕ್ಕಿಂತ ಮೊದಲು ಎದ್ದು ಅಭ್ಯಂಗ ಸ್ನಾನ ಮಾಡ್ತಾನೋ ಆತನಿಗೆ ಅಕಾಲ ಮೃತ್ಯ ಬರುವುದಿಲ್ಲ ಎಂದು ನಂಬಲಾಗಿದೆ.

ಎಣ್ಣೆ ಸ್ನಾನ ಮಾಡುವುದ್ರಿಂದ ವ್ಯಕ್ತಿಯ ಎಲ್ಲ ಪಾಪಗಳು ತೊಳೆದು ಹೋಗುತ್ತವೆ. ಸ್ನಾನದ ನಂತ್ರ ಶಾಸ್ತ್ರದಲ್ಲಿ ಹೇಳಿದಂತೆ ಕೆಲವರು ಯಮತರ್ಪಣವನ್ನು ನೀಡ್ತಾರೆ. ಬೆಳಿಗ್ಗೆ ಸೂರ್ಯೋದಯಕ್ಕಿಂತ ಮೊದಲು ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡುವುದು ಶ್ರೇಷ್ಠ.

ಈ ಸ್ನಾನದಿಂದ ಸಾಕಷ್ಟು ಲಾಭಗಳಿವೆ. ಎಣ್ಣೆ ಸ್ನಾನ ಮಾಡಿದವರು ಸಂಸ್ಕಾರವಂತರಾಗ್ತಾರೆ. ಜ್ಞಾನ ಶಕ್ತಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಎಳ್ಳಿನ ಎಣ್ಣೆಯನ್ನು ಮೈಗೆಲ್ಲ ಹಚ್ಚಿಕೊಂಡು ಸ್ನಾನ ಮಾಡುವುದು ಶುಭ. ಈ ಬಾರಿ ಬೆಳಗಿನ ಜಾವ 4.47 ರಿಂದ 6 ಗಂಟೆ 27 ನಿಮಿಷದವರೆಗೆ ಅಭ್ಯಂಗ ಸ್ನಾನ ಮಾಡಲು ಶುಭ ಮುಹೂರ್ತವಿದೆ. ಒಂದು ಗಂಟೆ 40 ನಿಮಿಷದೊಳಗೆ ಅಭ್ಯಂಗ ಸ್ನಾನ ಮಾಡಿದಲ್ಲಿ ಶುಭ ಫಲಗಳು ಪ್ರಾಪ್ತಿಯಾಗಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...