alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಶುಭ ಮುಹೂರ್ತದಲ್ಲಿ ಮಾಡಿ ನಾಗ ದೇವನ ಪೂಜೆ

ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ನಾಗರ ಪಂಚಮಿ ಆಚರಣೆ ಮಾಡಲಾಗುತ್ತದೆ.ಈ ಬಾರಿ ಆಗಸ್ಟ್ 15 ರಂದು ನಾಗರ ಪಂಚಮಿ ಬಂದಿದೆ. ಹಿಂದೂ ಧರ್ಮದಲ್ಲಿ ನಾಗರ ಪಂಚಮಿಗೆ ವಿಶೇಷ ಮಹತ್ವ ನೀಡಲಾಗಿದೆ. ಈ ಹಬ್ಬದಂದು ದೇಶದ ಅನೇಕ ಭಾಗಗಳಲ್ಲಿ ಹಾವಿಗೆ ಪೂಜೆ ಮಾಡಲಾಗುತ್ತದೆ. ಈ ದಿನ ನಾಗರ ಪೂಜೆ ಮಾಡಿದ್ರೆ ಭಗವಂತ ಶಿವ ಸಂತೃಪ್ತನಾಗ್ತಾನೆಂಬ ನಂಬಿಕೆಯಿದೆ.

ನಾಗರ ಪಂಚಮಿಯಂದು ನಾಗ ದೇವರಿಗೆ ಹೂ ಅರ್ಪಿಸಿ, ಮಂತ್ರ ಜಪಿಸಿ ಪೂಜೆ ಮಾಡಲಾಗುತ್ತದೆ. ನಾಗರ ಪಂಚಮಿಯಂದು ರುದ್ರಾಭಿಷೇಕಕ್ಕೂ ವಿಶೇಷ ಮಹತ್ವವಿದೆ.ಈ ದಿನವನ್ನು ಗರುಡ ಪಂಚಮಿ ಎಂದೂ ಕರೆಯಲಾಗುತ್ತದೆ.ನಾಗರ ಪಂಚಮಿಯಂದು ನಾಗ ದೇವರ ಜೊತೆ ಗರುಡನ ಪೂಜೆ ಮಾಡುವ ಪದ್ಧತಿ ಕೂಡ ಅನೇಕ ಕಡೆಯಿದೆ.

ಆಗಸ್ಟ್ 15 ರಂದು ಬೆಳಿಗ್ಗೆ 5 ಗಂಟೆ, 54 ನಿಮಿಷದಿಂದ 8 ಗಂಟೆ 30 ನಿಮಿಷದವರೆಗೆ ಶುಭ ಮುಹೂರ್ತವಿದೆ. ಕಾಳಸರ್ಪ ದೋಷವಿರುವವರು ನಾಗರ ಪಂಚಮಿಯಂದು ನಾಗನಿಗೆ ವಿಶೇಷ ಪೂಜೆ ಮಾಡಬೇಕು.ಈ ದಿನ ನಾಗನ ಪೂಜೆ ಜೊತೆ ಓಂ ನಮಃ ಶಿವಾಯ ಮಂತ್ರವನ್ನು ಜಪಿಸಬೇಕು. ಈ ದಿನ ರುದ್ರಾಭಿಷೇಕ ಮಾಡುವುದ್ರಿಂದ ಜಾತಕದಲ್ಲಿರುವ ಕಾಳ ಸರ್ಪ ದೋಷ ನಿವಾರಣೆಯಾಗುತ್ತದೆ.

ಹಾವಿನ ಹುತ್ತಕ್ಕೆ ಹಾಲೆರೆದು ನಾಗರ ಪಂಚಮಿಯನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಭಿನ್ನವಾಗಿ ಆಚರಿಸಲಾಗುತ್ತದೆ. ನಾಗರ ಪಂಚಮಿಗೆ ವಿಶೇಷ ಉಂಡೆಗಳನ್ನು ಮಾಡುವ ಪದ್ಧತಿ ಕೂಡ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...