alex Certify
ಕನ್ನಡ ದುನಿಯಾ       Mobile App
       

Kannada Duniya

ಬುಧವಾರ ಈ ಕೆಲಸ ಮಾಡಿದ್ರೆ ಸಿಗುತ್ತೆ ಲಾಭ

ಬುಧವಾರ ಗಣೇಶನಿಗೆ ಶುಭವಾದ ದಿನ. ಈ ದಿನ ಯಾರಿಗೂ ಸಾಲ ನೀಡಬಾರದು. ಸಾಲ ತೆಗೆದುಕೊಳ್ಳಬಹುದು. ಬುಧವಾರ ಕೊಟ್ಟ ಸಾಲವನ್ನು ಮರುಪಡೆಯುವುದು ಕಠಿಣವಾಗುತ್ತದೆ. ಬ್ಯಾಂಕಿನಲ್ಲಿ ನಿಗದಿತ ಠೇವಣಿ ಇಡುವುದು ಅಥವಾ ಹಣ ಹೂಡಿಕೆ ಮಾಡುವುದು ಶುಭಕರವೆಂದು ಪರಿಗಣಿಸಲಾಗಿದೆ.

ಪ್ರಾತಃ ಕಾಲದಲ್ಲಿ ಗಣೇಶನ ದ್ವಾದಶ ಹೆಸರನ್ನು ಜಪಿಸುವುದ್ರಿಂದ ಯಾವುದೇ ಅಡೆತಡೆ ಎದುರಾಗುವುದಿಲ್ಲ. ಬುಧವಾರ ಗಣೇಶನ ಹೆಸರನ್ನು ಜಪಿಸುವುದ್ರಿಂದ ಎಲ್ಲವೂ ಶುಭವಾಗುತ್ತದೆ.

ಮನೆಯಲ್ಲಿ ಎರಡು ಶಿವಲಿಂಗ, ಮೂರು ಗಣೇಶ ಮೂರ್ತಿ, ಎರಡು ಶಂಖ, ಎರಡು ಸೂರ್ಯ ಪ್ರತಿಮೆ, ಎರಡು ಸಾಲಿಗ್ರಾಮ, ಮೂರು ದುರ್ಗೆಯ ಮೂರ್ತಿಯನ್ನು ಎಂದೂ ಪೂಜೆ ಮಾಡಬಾರದು. ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಗಣೇಶ ಮೂರ್ತಿ ಇಡಬಹುದು. ಆದ್ರೆ ಎಂದೂ ಒಂದೇ ಮೂರ್ತಿಗೆ ಪೂಜೆ ನಡೆಯಬೇಕು.

ಗಣೇಶನಿಗೆ ಹಸಿರು ದರ್ಬೆಯನ್ನು ಅರ್ಪಿಸಬೇಕು. ಎಲ್ಲ ಹೂವುಗಳನ್ನೂ ಗಣೇಶನಿಗೆ ಅರ್ಪಿಸಬಹುದು. ಕೆಂಪು ಹೂ ಗಣೇಶನಿಗೆ ಹೆಚ್ಚು ಸಂತೋಷವನ್ನುಂಟು ಮಾಡುತ್ತದೆ. ಗಣೇಶನಿಗೆ ಎಂದೂ ತುಳಸಿಯನ್ನು ಅರ್ಪಿಸಬಾರದು. ಬೇರೆ ದೇವಾನುದೇವತೆಗಳಿಗೆ ನಿಷಿದ್ಧವಾದ ಹೂವನ್ನು ಗಣೇಶನಿಗೆ ಅರ್ಪಿಸಬಹುದು.

 

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...